ETV Bharat / state

ಬಿಜೆಪಿ ಡ್ರಾಮಾ ಕಂಪನಿ, ಈಶ್ವರಪ್ಪ ಶಕುನಿ: ಶಿವರಾಜ ತಂಗಡಗಿ ಲೇವಡಿ - Sadbavana yatra at karategi of Koppal

ಬಿಜೆಪಿ ಒಂದು ಡ್ರಾಮಾ ಕಂಪನಿ.‌ ಒಬ್ಬರಿಗೆ ಧರ್ಮರಾಯ, ಮತ್ತೊಬ್ಬರಿಗೆ ದುರ್ಯೊಧನ, ಶಕುನಿ ಹೀಗೆ ಪಾತ್ರಗಳನ್ನು ನೀಡಿದ್ದಾರೆ. ಕೇಂದ್ರ ನೀಡಿರುವ ಪಾತ್ರವನ್ನು ಅವರು ನಿರ್ವಹಣೆ ಮಾಡುತ್ತಾರೆ ಎಂದು ಮಾಜಿ ಸಚಿವ ಶಿವರಾಜ್​ ತಂಗಡಗಿ ಲೇವಡಿ ಮಾಡಿದ್ದಾರೆ.

ಶಿವರಾಜ ತಂಗಡಗಿ
author img

By

Published : Nov 8, 2019, 4:58 PM IST

ಕೊಪ್ಪಳ: ಬಿಜೆಪಿ ಒಂದು ಡ್ರಾಮಾ ಕಂಪನಿ ಇದ್ದಂಗೆ. ಡ್ರಾಮಾ ಮಾಡಿ ಎಂದು ಕೇಂದ್ರ ಸರ್ಕಾರ ಹೇಳಿಕೊಡುತ್ತದೆ. ಅದರಲ್ಲಿ ಈಶ್ವರಪ್ಪ ಶಕುನಿ ಪಾತ್ರವನ್ನು ಚೆನ್ನಾಗಿ ಮಾಡ್ತಾರೆ ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸದ್ಭಾವನಾ ಯಾತ್ರೆ ಬಳಿಕ ಜಿಲ್ಲೆಯ ಕಾರಟಗಿ ಪಟ್ಟಣದಲ್ಲಿ ಮಾತನಾಡಿದ ಅವರು, ಬಿಜೆಪಿ ಒಂದು ಡ್ರಾಮಾ ಕಂಪನಿ.‌ ಒಬ್ಬರಿಗೆ ಧರ್ಮರಾಯ, ಮತ್ತೊಬ್ಬರಿಗೆ ದುರ್ಯೋಧನ, ಶಕುನಿ ಹೀಗೆ ವಿವಿಧ ಪಾತ್ರಗಳನ್ನು ನೀಡಿದ್ದಾರೆ. ಕೇಂದ್ರ ನೀಡಿರುವ ಪಾತ್ರವನ್ನು ಅವರು ನಿರ್ವಹಣೆ ಮಾಡುತ್ತಾರೆ ಎಂದು ಲೇವಡಿ ಮಾಡಿದರು.

ಶಿವರಾಜ ತಂಗಡಗಿ

ಇನ್ನು, ಅನರ್ಹ ಶಾಸಕರಿಂದ ಬಿಜೆಪಿಯವರು ಸಚಿವರಾದರು. ಆದರೆ ಈಗ ಅನರ್ಹರನ್ನು ಬೀದಿಗೆ ನಿಲ್ಲಿಸಿ ಬಿಜೆಪಿಯವರು ಸುಖ ಅನುಭವಿಸುತ್ತಿದ್ದಾರೆ. ಯಡಿಯೂರಪ್ಪ ಅವರನ್ನು ಸಿಎಂ ಆಗಿ ನೋಡಲು ಆರ್​ಎಸ್ಎಸ್​ಗೆ ಇಷ್ಟವಿಲ್ಲ. ಅಲ್ಲದೆ, ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲು ಬಿಜೆಪಿಯ ಕೆಲ ಮುಖಂಡರೇ ಪ್ರಯತ್ನ ಮಾಡುತ್ತಿದ್ದಾರೆ ಎಂದು ತಂಗಡಗಿ ಆರೋಪಿಸಿದ್ರು.

Intro:Body:ಕೊಪ್ಪಳ:- ಬಿಜೆಪಿ ಒಂದು ಡ್ರಾಮಾ ಕಂಪನಿ ಇದ್ದಂಗ. ಡ್ರಾಮಾ ಮಾಡಿ ಎಂದು ಕೇಂದ್ರ ಸರ್ಕಾರ ಹೇಳಿಕೊಡುತ್ತದೆ. ಅದರಲ್ಲಿ ಈಶ್ವರಪ್ಪ ಶಕುನಿ ಪಾತ್ರವನ್ನು ಚೆನ್ನಾಗಿ ಮಾಡ್ತಾರೆ ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ವಾಗ್ದಾಳಿ ಮಾಡಿದ್ದಾರೆ. ಸದ್ಭಾವನಾ ಯಾತ್ರೆ ಬಳಿಕ ಜಿಲ್ಲೆಯ ಕಾರಟಗಿ ಪಟ್ಟಣದಲ್ಲಿ ಮಾತನಾಡಿದ ಶಿವರಾಜ್ ತಂಗಡಗಿ, ಬಿಜೆಪಿ ವಿರುದ್ಧ ಹರಿಹಾಯ್ದರು. ಬಿಜೆಪಿ ಒಂದು ಡ್ರಾಮಾ ಕಂಪೆನಿ.‌ ಇದರಲ್ಲಿ ಒಬ್ಬೊಬ್ಬರಿಗೆ ಒಂದೊಂದು ಪಾತ್ರ ನೀಡಲಾಗಿದೆ. ಒಬ್ಬರಿಗೆ ಧರ್ಮರಾಯ, ಮತ್ತೊಬ್ಬರಿಗೆ ದುರ್ಯೊಧನ, ಶಕುನಿ ಹೀಗೆ ಪಾತ್ರ ನೀಡಿದ್ದಾರೆ. ಕೇಂದ್ರ ನೀಡಿರುವ ಪಾತ್ರವನ್ನು ಅವರು ನಿರ್ವಹಣೆ ಮಾಡುತ್ತಾರೆ. ಅದರಂತೆ ಈಶ್ವರಪ್ಪ ಅವರಿಗೆ ಶಕುನಿ ಪಾತ್ರ ನೀಡಿದ್ದಾರೆ. ಆ ಶಕುನಿ ಪಾತ್ರವನ್ನು ಈಶ್ವರಪ್ಪ ಅವರಿಗೆ ಚೆನ್ನಾಗಿ ಮಾಡ್ತಿದಾರೆ ಎಂದರು. ಇನ್ನು ಅನರ್ಹ ಶಾಸಕರಿಂದ ಬಿಜೆಪಿಯವರು ಮಂತ್ರಿಯಾದರು. ಅವರನ್ನು ಬೀದಿಗೆ ನಿಲ್ಲಿಸಿ ಬಿಜೆಪಿಯವರು ಸುಖ ಅನುಭವಿಸುತ್ತಿದ್ದಾರೆ. ಯಡಿಯೂರಪ್ಪ ಅವರನ್ನು ಸಿಎಂ ಆಗಿ ನೋಡಲು ಆರ್ ಎಸ್ಎಸ್ ಗೆ ಇಷ್ಟವಿಲ್ಲ.
ಬಿಎಸ್ವೈ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲು ಬಿಜೆಪಿಯ ಕೆಲ ಮುಖಂಡರೆ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಬಿಜೆಪಿ ಶಾಸಕರು, ಸಚಿವರು ಬರಿ ಪೋಸು ಕೊಡ್ತಿದ್ದಾರೆ. ಯಡಿಯೂರಪ್ಪ ಸರ್ಕಾರ ಇನ್ನು ಬಹಳ ದಿನ ಉಳಿಯುವುದಿಲ್ಲ ಎಂದು ಭವಿಷ್ಯ ನುಡಿದರು. ಇನ್ನು ಜೆಡಿಎಸ್ ನವರಿಗೆ ತತ್ವ, ಸಿದ್ದಾಂತವಿಲ್ಲ. ಹೀಗಾಗಿ,
ಜೆಡಿಎಸ್ ಹಾಗೂ ಸ್ಥಳೀಯ ಶಾಸಕರ ಬಗ್ಗೆ ಮಾತನಾಡುವುದು ಟೈಮ್ ವೇಸ್ಟ್ ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ಹೇಳಿದರು. ಇನ್ನು ಅಯೋಧ್ಯಾ ತೀರ್ಪು ಹಿನ್ನೆಲೆಯಲ್ಲಿ ಕಟ್ಟೆಚ್ಚರ ವಹಿಸಿರುವ ಕುರಿತಂತೆ ಪ್ರತಿಕ್ರಿಯಿಸಿದ ತಂಗಡಗಿ, ಕಟ್ಟೆಚ್ಚರವಹಿಸುವಂತೆ ಕಾಂಗ್ರೆಸ್ ಅಥವಾ ಮುಸ್ಲಿಂ ಸಮುದಾಯ ಹೇಳಿಲ್ಲ.‌ ಎಲ್ಲ ಸಮುದಾಯ ಸುಪ್ರಿಂ ಕೋರ್ಟ್ ನ ಆದೇಶಕ್ಕೆ ತಲೆಬಾಗಬೇಕು. ಅದರಂತೆ ಕೋರ್ಟ್ ಏನೇ ತೀರ್ಪು ನೀಡಿದರೂ ಪಾಲಿಸುತ್ತೇವೆ. ದೇಶದ ಆರ್ಥಿಕ ಸ್ಥಿತಿ ಕುಸಿದಿರುವ ವಿಷಯವನ್ನು ಜನನ ಮನಸು ಡೈವರ್ಟ್ ಮಾಡಲು ಕೇಂದ್ರ ಸರ್ಕಾರ ಹೀಗೆ ಮಾಡುತ್ತದೆ ಎಂದು ಇದೇ ಸಂದರ್ಭದಲ್ಲಿ ಹೇಳಿದರು.

ಬೈಟ್1:- ಶಿವರಾಜ ತಂಗಡಗಿ, ಮಾಜಿ‌ ಸಚಿವConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.