ETV Bharat / state

ಗಂಗಾವತಿ: ವಾಣಿ ವೀರಭದ್ರೇಶ್ವರ ದೇವಸ್ಥಾನದ ಶಿವಲಿಂಗ ಹೊತ್ತೊಯ್ದ ಕಳ್ಳರು! - ಸ್ಕಂಧ ಪುರಾಣ ಮತ್ತು ಶಿವಪುರಾಣ

ಗಂಗಾವತಿಯ ವಾಣಿ ವೀರಭದ್ರೇಶ್ವರ ದೇವಸ್ಥಾನದ ಶಿವಲಿಂಗವನ್ನು ಖದೀಮರು ಕದ್ದೊಯ್ದಿದ್ದಾರೆ.

ಶಿವಲಿಂಗ
ಶಿವಲಿಂಗ
author img

By ETV Bharat Karnataka Team

Published : Aug 24, 2023, 10:32 PM IST

ಗಂಗಾವತಿ (ಕೊಪ್ಪಳ) : ತಾಲೂಕಿನ ಮಲ್ಲಾಪುರ ಗ್ರಾಮದ ಸಮೀಪ ಇರುವ ಪುರಾತನ ಕಾಲದ ವಾಣಿ ವೀರಭದ್ರೇಶ್ವರ ದೇವಸ್ಥಾನದಲ್ಲಿದ್ದ ಶಿವಲಿಂಗವನ್ನು ಖದೀಮರು ಕದ್ದೊಯ್ದ ಘಟನೆ ಗುರುವಾರ ಬೆಳಕಿಗೆ ಬಂದಿದೆ. ನಿರ್ಜನ ಹಾಗೂ ಬೆಟ್ಟದ ಕಡಿದಾದ ಪ್ರದೇಶದಲ್ಲಿರುವ ಪೌರಾಣಿಕ ಹಿನ್ನೆಲೆಯ ದೇವಸ್ಥಾನದಲ್ಲಿ ಕಳೆದ ಹಲವು ದಶಕದಿಂದ ನಿತ್ಯಪೂಜೆ ಸಲ್ಲಿಸಲಾಗುತ್ತಿದೆ. ಬೆಳಗ್ಗೆ ಅರ್ಚಕರು ಪೂಜೆ ಸಲ್ಲಿಸಿ, ಮಧ್ಯಾಹ್ನದ ಹೊತ್ತಿಗೆ ಮರಳಿ ಗಂಗಾವತಿಗೆ ಬರುತ್ತಾರೆ.

ಇದೇ ಸಮಯಕ್ಕಾಗಿ ಕಾದಿದ್ದ ಖದೀಮರು ದೇಗುಲದ ಗರ್ಭಗುಡಿಯಲ್ಲಿದ್ದ ಪಾಣಿ ಬಟ್ಟಲು ಮೇಲಿನ ಶಿವಲಿಂಗವನ್ನು ಕಿತ್ತೊಯ್ದು ವಿಕೃತಿ ಮೆರೆದಿದ್ದಾರೆ. ಎಂದಿನಂತೆ ಬೆಳಗ್ಗೆ ಅರ್ಚಕ ಪೂಜೆಗೆ ತೆರಳಿದ ಸಂದರ್ಭದಲ್ಲಿ ಘಟನೆ ಬೆಳಕಿಗೆ ಬಂದಿದೆ. ಕೂಡಲೇ ಅವರು ಗಂಗಾವತಿ ಗ್ರಾಮೀಣ ಠಾಣೆಗೆ ಆಗಮಿಸಿ ದೂರು ಸಲ್ಲಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಭೌಗೋಳಿಕವಾಗಿ ಅತ್ಯಂತ ಪುರಾತನ ಹಾಗೂ ಪ್ರಾಕೃತಿಕವಾಗಿ ಏಳು ಬೆಟ್ಟಗಳಿಂದ ಸುತ್ತುವರೆಯಲ್ಪಟ್ಟ ಗಂಗಾವತಿಯ ಸುತ್ತಲೂ ಹತ್ತಾರು ಪೌರಾಣಿಕ ಮಹತ್ವದ ಹಿನ್ನೆಲೆಯುಳ್ಳ ಸ್ಥಳಗಳಿವೆ. ಈ ಪೈಕಿ ವಾಣಿ ವೀರಭದ್ರೇಶ್ವರ ದೇಗುಲವೂ ಒಂದು. ಹಂಪಿಯಲ್ಲಿರುವ ವಿರೂಪಾಕ್ಷೇಶ್ವರ ದೇವರ ವಿಗ್ರಹ ಸ್ಥಾಪಿಸುವ ಸಂದರ್ಭದಲ್ಲಿಯೇ ವಿಜಯನಗರದ ಅಷ್ಟದಿಕ್ಕುಗಳಲ್ಲಿ ಒಂದೊಂದು ಶಿವಲಿಂಗ ಪ್ರತಿಷ್ಠಾಪನೆ ಮಾಡಲಾಗಿದೆ. ಈ ಪೈಕಿ ಹಂಪಿಯ ದಕ್ಷಿಣ ದಿಕ್ಕಿನಲ್ಲೂ ವಾಣಿ ವೀರಭದ್ರೇಶ್ವರವೂ ಒಂದು ಎಂದು ಹೇಳಲಾಗುತ್ತಿದೆ.

ದೇಗುಲದ ಐತಿಹಾಸಿಕ ಹಿನ್ನೆಲೆಯ ಬಗ್ಗೆಯೂ ಸ್ಕಂಧ ಪುರಾಣ ಮತ್ತು ಶಿವಪುರಾಣದಲ್ಲಿ ಉಲ್ಲೇಖವಿದೆ. ನಿಧಿಯ ಆಸೆಗಾಗಿ ದುಷ್ಕರ್ಮಿಗಳು ಶಿವಲಿಂಗವನ್ನು ಕದ್ದೊಯ್ದು ಧ್ವಂಸಗೊಳಿಸಿರುವ ಸಾಧ್ಯತೆ ಇದೆ ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

ದೇವಸ್ಥಾನಗಳ ಹುಂಡಿಗೆ ಕನ್ನ(ಪ್ರತ್ಯೇಕ ಪ್ರಕರಣ): ಇನ್ನೊಂದೆಡೆ, ದುಷ್ಕರ್ಮಿಗಳು ಎರಡು ದೇವಸ್ಥಾನಗಳ ಹುಂಡಿ ಹಣ ಮತ್ತು ದೇವರ ಚಿನ್ನದ ತಾಳಿಯನ್ನು ಕದ್ದೊಯ್ದಿದಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ವೀರಾಪುರ ಗ್ರಾಮದಲ್ಲಿ (ಆಗಸ್ಟ್​ 22-2023) ರಂದು ನಡೆದಿತ್ತು. ಮಾರಮ್ಮ ಹಾಗೂ ಆಂಜನೇಯ ದೇವಸ್ಥಾನದಲ್ಲಿ ಕಳವು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿತ್ತು. ಕಳ್ಳರು ಹುಂಡಿಯಲ್ಲಿದ್ದ ಸುಮಾರು 50 ಸಾವಿರ ರೂ ಹಣವನ್ನು ಕದ್ದೊಯ್ದಿದ್ದಾರೆ ಎಂದು ಹೇಳಲಾಗಿತ್ತು. ಆದರೆ 3,600 ರೂ. ಚಿಲ್ಲರೆ ಹಣವನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದರು.

ಕಳೆದ ಭಾನುವಾರ ರಾತ್ರಿ 2 ಗಂಟೆ ಸುಮಾರಿಗೆ ಕಳ್ಳರು ಮಾರಮ್ಮ ದೇವಸ್ಥಾನದ ಬೀಗ ಮುರಿದು ಒಳ ನುಗ್ಗಿದ್ದರು. ದೇವರ ಕೊರಳಿನಲ್ಲಿದ್ದ 8 ಚಿನ್ನದ ತಾಳಿಗಳು, ಬೆಳ್ಳಿ ಆಭರಣಗಳು ಹಾಗೂ ಹುಂಡಿಯಲ್ಲಿದ್ದ ಹಣವನ್ನು ದೋಚಿದ್ದರು. ಮರುದಿನ ಸಂಜೆ ದೇವಸ್ಥಾನದ ಪೂಜಾರಿ ದೇವಸ್ಥಾನ ಸ್ವಚ್ಛಗೊಳಿಸಲು ಬಂದಾಗ ಪ್ರಕರಣ ಬೆಳಕಿಗೆ ಬಂದಿತ್ತು. ಕಳೆದ 5 ವರ್ಷಗಳಿಂದ ಹುಂಡಿ ಹಣ ತೆಗೆದಿರಲಿಲ್ಲ, ಸುಮಾರು 50 ಸಾವಿರಕ್ಕೂ ಹೆಚ್ಚು ಹಣ ಸಂಗ್ರಹವಾಗಿತ್ತು ಎಂದು ಗ್ರಾಮಸ್ಥರು ತಿಳಿಸಿದ್ದರು.

ಮಾರಮ್ಮ ದೇವಸ್ಥಾನದಲ್ಲಿ ಕಳವು ಮಾಡಿದ ನಂತರ ಹಿಂಭಾಗದಲ್ಲಿರುವ ಆಂಜನೇಯ ದೇವಸ್ಥಾನದ ಹುಂಡಿಗೂ ಕನ್ನ ಹಾಕಿದ್ದರು. ಬಳಿಕ ಹುಂಡಿಯನ್ನು ಗ್ರಾಮದ ಹೊರಗಿನ ನೀಲಗಿರಿ ತೋಪಿನಲ್ಲಿ ಎಸೆದು ಕಾಲ್ಕಿತ್ತಿದ್ದರು.

ಇದನ್ನೂ ಓದಿ: ದೊಡ್ಡಬಳ್ಳಾಪುರ: ದೇವಸ್ಥಾನಗಳ ಹುಂಡಿಗೆ ಕನ್ನ; ನಾಣ್ಯಗಳನ್ನು ಬಿಟ್ಟು ಹೋದ ಕಳ್ಳರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.