ETV Bharat / state

ಪ್ರಾಣ ಪಣಕ್ಕಿಟ್ಟು ಕೊಚ್ಚಿ ಹೋಗುತ್ತಿದ್ದ ಯುವಕನ ರಕ್ಷಿಸಿದ ಕುರಿಗಾಹಿ: ಹಿರಿಯ ಅಧಿಕಾರಿಗಳಿಂದ ಮೆಚ್ಚುಗೆ - Hevay rain in Kushtagi of Koppal

ಹಳ್ಳದ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಕುಷ್ಟಗಿಯ ಯುವಕನನ್ನು ರಕ್ಷಿಸಿದ ಬಂಡ್ರಗಲ್​​ನ ಕುರಿಗಾಹಿಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

shepherd rescued Young men in Kushtagi
ಕುಷ್ಟಗಿಯಲ್ಲಿ ಯುವಕನನ್ನು ರಕ್ಷಿಸಿದ ಕುರಿಗಾಹಿ
author img

By

Published : Oct 14, 2020, 9:11 AM IST

ಕುಷ್ಟಗಿ (ಕೊಪ್ಪಳ) : ತಾಲೂಕಿನ ಬಂಡ್ರಗಲ್ ಹೂಲಗೇರಾ ಮಧ್ಯೆ ಹರಿಯುವ ಹಳ್ಳದ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಯುವಕನನ್ನು ಗ್ರಾಮದ ಕುರಿಗಾಹಿ ಗಿರಿಯಪ್ಪ ಕಮತರ ಜೀವದ ಹಂಗು ತೊರೆದು ತನ್ನ ರಕ್ಷಿಸಿದ್ದಾರೆ. ಇವರ ಕಾರ್ಯಕ್ಕೆ ತಹಸೀಲ್ದಾರ್​ ಎಂ.ಸಿದ್ದೇಶ, ಸಿಪಿಐ ನಿಂಗಪ್ಪ ರುದ್ರಪ್ಪಗೋಳ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸೋಮವಾರ ತಡರಾತ್ರಿ ಕಾಟಾಪುರ - ಬಂಡ್ರಗಲ್ ಮದ್ಯೆ ಹರಿಯುವ ಹಿರೇ ಹಳ್ಳದಲ್ಲಿ ಗ್ರಾಮದ ಯುವಕ ಮಂಜುನಾಥ ಗೌಡರ್ ದುಸ್ಸಾಹಕ್ಕೆ ಇಳಿದು ಬೈಕ್ ಮೂಲಕ ಹಳ್ಳ ದಾಟಲು ಯತ್ನಿಸಿದ ಸಂದರ್ಭ ಬೈಕ್ ಸಮೇತ ಕೊಚ್ಚಿ ಹೋಗಿ ಗಿಡಗಂಟಿಯಲ್ಲಿ ಸಿಕ್ಕಿ ಹಾಕಿಕೊಂಡಿದ್ದ. ಈ ಸುದ್ದಿ ತಿಳಿಯುತ್ತಿದ್ದಂತೆ ಬಂಡ್ರಗಲ್ ಗ್ರಾಮದ ಗಿರಿಯಪ್ಪ ಮತ್ತು ಅಗ್ನಿಶಾಮಕ ದಳದ ಠಾಣಾಧಿಕಾರಿ ಎನ್. ರಾಜು ಪ್ರವಾಹದ ನಡುವೆ ಪ್ರಾಣ ಪಣಕ್ಕಿಟ್ಟು ಮಂಜುನಾಥನನ್ನ ರಕ್ಷಿಸಿದ್ದಾರೆ.

shepherd rescued Young men in Kushtagi
ಗಿರಿಯಪ್ಪ ಕಮತರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಹಿರಿಯ ಅಧಿಕಾರಿಗಳು

ಈ ಬಗ್ಗೆ ಮಾಹಿತಿ ಪಡೆದ ಸಿಪಿಐ ನಿಂಗಪ್ಪ ರುದ್ರಪ್ಪಗೋಳ್ ಮತ್ತು ತಹಶೀಲ್ದಾರ್​ ಎಂ.ಸಿದ್ದೇಶ್​, ಗಿರಿಯಪ್ಪ ಕಮತರ ಅವರ ಮಾನವೀಯ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಿಪಿಐ ನಿಂಗಪ್ಪ ರುದ್ರಪ್ಪಗೋಳ್ ಅವರು ಪ್ರತ್ಯೇಕ ದಿನಾಂಕ ನಿಗದಿ ಮಾಡಿ ಡಿವೈಎಸ್ಪಿ ಆರ್.ಎಸ್.ಉಜ್ಜನಕೊಪ್ಪ ಸಮ್ಮುಖದಲ್ಲಿ, ಗಿರಿಯಪ್ಪ ಕಮತರ ಸೇರಿದಂತೆ ಕಾರ್ಯಾಚರಣೆಯಲ್ಲಿ ಸಹಕರಿಸಿದ ಗ್ರಾಮಸ್ಥರನ್ನು ಸನ್ಮಾನಿಸುವುದಾಗಿ ತಿಳಿಸಿದರು. ತಹಶೀಲ್ದಾರ್​ ಎಂ.ಸಿದ್ದೇಶ ಅವರು ಗಿರಿಯಪ್ಪ ಕಮತರ ಹೆಸರನ್ನು ಶೌರ್ಯ ಪ್ರಶಸ್ತಿಗೆ ಶಿಫಾರಸು ಮಾಡುವುದಾಗಿ ತಿಳಿಸಿದ್ದಾರೆ. ಈ ವೇಳೆ, ಯುವಕನ ರಕ್ಷಣೆ ಕಾರ್ಯಾಚರಣೆಯ ನೇತೃತ್ವವಹಿಸಿದ್ದ ಅಶೋಕ ಬೇವೂರು ಉಪಸ್ಥಿತರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.