ಗಂಗಾವತಿ: ತುಂಗಭದ್ರಾ ನದಿಯಾಚೆ ಇರುವ, ನಗರಕ್ಕೆ ಕುಡಿಯವ ನೀರು ಸರಬರಾಜು ಮಾಡುವ ದೇವಘಟ್ಟ ಸಮೀಪದ ನಡುಗಡ್ಡೆಯಲ್ಲಿ ಕುರಿ ಮೇಯಿಸಲು ಹೋಗಿದ್ದ ಗಂಗಾವತಿ ಮೂಲದವರು ಎಂದು ಹೇಳಲಾಗುತ್ತಿರುವ ಮೂವರು ಕುರಿಗಾಹಿಗಳು ಮತ್ತು 150ಕ್ಕೂ ಹೆಚ್ಚು ಕುರಿಗಳು ಸಿಲುಕಿವೆ. ಇದೀಗ ರಕ್ಷಣಾ ಕಾರ್ಯಾಚರಣೆ ಆರಂಭವಾಗಿದೆ.
ನದಿಗೆ ಸೋಮವಾರ ರಾತ್ರಿಯಿಂದ ಅಪಾರ ಪ್ರಮಾಣ ನೀರು ಹರಿಸುತ್ತಿರುವುದರಿಂದ ರಕ್ಷಣೆಗೆ ಸಮಸ್ಯೆಯಾಗಿದೆ. ನಡುಗಡ್ಡೆಯಲ್ಲಿ ಸಿಲುಕಿರುವ ಜನರು ಕಳೆದ ಮೂರು ದಿನಗಳಿಂದ ಅನ್ನಾಹಾರವಿಲ್ಲದೆ ಪರದಾಡುತ್ತಿದ್ದಾರೆ. ಈ ಮಾಹಿತಿ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಗುರುವಾರವಷ್ಟೆ ಗೊತ್ತಾಗಿತ್ತು. ನದಿಯಲ್ಲಿನ ಕೊರಕಲು ಪ್ರದೇಶದಲ್ಲಿ ಕಲ್ಲುಬಂಡೆಗಳಿದ್ದು, ದೋಣಿ ಮೂಲಕ ತೆರಳಲು ಅಗ್ನಿಶಾಮಕ ದಳದ ಸಿಬ್ಬಂದಿಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ರಕ್ಷಣಾ ಕಾರ್ಯಕ್ಕೆ ತೊಂದರೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ : ಭೀಮಾನದಿಯಲ್ಲಿ ಪುಣ್ಯ ಸ್ನಾನಕ್ಕಿಳಿದ ಯುವಕ ನೀರುಪಾಲು.. ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ