ETV Bharat / state

ಕಸಾಪ ಚುನಾವಣಾ ಪ್ರಚಾರ ಕಾರ್ಯಕ್ಕೆ ತಯಾರಿ ನಡೆಸಿದ ಶೇಖರಗೌಡ ಮಾಲಿಪಾಟೀಲ.. - ಕುಷ್ಟಗಿ ತಾಲೂಕಿನ ಶೇಖರಗೌಡ ಮಾಲಿಪಾಟೀಲ

ಈ ಬಾರಿಯ ಸ್ಪರ್ಧೆ ಬಯಸಿರುವ ಕುಷ್ಟಗಿ ತಾಲೂಕಿನ ಶೇಖರಗೌಡ ಮಾಲಿಪಾಟೀಲ ಅವರು, ಪ್ರಸ್ತುತ ಕಸಾಪ ಕೇಂದ್ರ ಘಟಕದಲ್ಲಿ ಸಂಘ ಸಂಸ್ಥೆಯ ರಾಜ್ಯ ಪ್ರತಿನಿಧಿಯಾಗಿದ್ದಾರೆ. ಜತೆಗೆ ಸಹಕಾರ ಕ್ಷೇತ್ರದಲ್ಲಿ ಸಕ್ರೀಯರಾಗಿದ್ದಾರೆ.

Shekhargowda Malipatila prepared for Kasapa election campaign
ಕಸಾಪ ಚುನಾವಣಾ ಪ್ರಚಾರ ಕಾರ್ಯಕ್ಕೆ ತಯಾರಿ ನಡೆಸಿದ ಶೇಖರಗೌಡ ಮಾಲಿಪಾಟೀಲ
author img

By

Published : Jun 10, 2020, 9:57 PM IST

ಕುಷ್ಟಗಿ (ಕೊಪ್ಪಳ) : ಕೊರೊನಾ ವೈರಸ್ ಲಾಕ್‌ಡೌನ್ ಜಾರಿಯ ದಿನಗಳಲ್ಲಿ ತಟಸ್ಥಗೊಂಡಿದ್ದ ಕಸಾಪ ಚುನಾವಣೆಯ ಪ್ರಚಾರದ ಕಾರ್ಯ ಚಟುವಟಿಕೆಗಳು ಇದೀಗ ಚುರುಕುಗೊಂಡಿವೆ.

ಕಸಾಪ ಚುನಾವಣಾ ಪ್ರಚಾರ ಕಾರ್ಯಕ್ಕೆ ತಯಾರಿ ನಡೆಸಿದ ಶೇಖರಗೌಡ ಮಾಲಿಪಾಟೀಲ..

ಕನ್ನಡ ಸಾಹಿತ್ಯ ಪರಿಷತ್ ಕೇಂದ್ರ ಘಟಕದ ಚುನಾವಣೆ ಸಮೀಪಿಸುತ್ತಿದ್ದಂತೆ ಪ್ರಚಾರಕ್ಕೆ ಸದ್ದಿಲ್ಲದೇ ತಯಾರಿ ಶುರುವಾಗಿದೆ. ಈ ಬಾರಿಯ ಸ್ಪರ್ಧೆ ಬಯಸಿರುವ ಕುಷ್ಟಗಿ ತಾಲೂಕಿನ ಶೇಖರಗೌಡ ಮಾಲಿಪಾಟೀಲ ಅವರು, ಪ್ರಸ್ತುತ ಕಸಾಪ ಕೇಂದ್ರ ಘಟಕದಲ್ಲಿ ಸಂಘ ಸಂಸ್ಥೆಯ ರಾಜ್ಯ ಪ್ರತಿನಿಧಿಯಾಗಿದ್ದಾರೆ. ಜತೆಗೆ ಸಹಕಾರ ಕ್ಷೇತ್ರದಲ್ಲಿ ಸಕ್ರೀಯರಾಗಿದ್ದಾರೆ. ಈ ಬಾರಿಯ ಕಸಾಪ ಸ್ಪರ್ಧೆಯ ಹಿನ್ನೆಲೆಯ ಪ್ರಚಾರ ಕಾರ್ಯಕ್ಕೆ ಅಣಿಯಾಗಿರುವ ಅವರು, ಇದೇ ತಿಂಗಳ ಜೂನ್ 20, 21ರಿಂದ ಹಾವೇರಿ ಜಿಲ್ಲೆಯಿಂದ ಪ್ರಚಾರ ಕಾರ್ಯ ಆರಂಭಿಸುತ್ತಿರುವುದಾಗಿ ಈಟಿವಿ ಭಾರತ ಪ್ರತಿನಿಧಿಗೆ ತಿಳಿಸಿದರು.

ಕಸಾಪ ಚುನಾವಣೆಗೆ 30 ಜಿಲ್ಲೆಗಳಲ್ಲಿ ಚುನಾವಣೆಯ ಬಿರುಸಿನ ಪ್ರಚಾರದ ಪ್ರವಾಸ ಹಾಕಿಕೊಂಡಿರುವುದಾಗಿ ತಿಳಿಸಿದ ಅವರು, ಕೊರೊನಾ ಹೈ ರಿಸ್ಕ್ ಜಿಲ್ಲೆಗಳನ್ನು ಸದ್ಯ ಹೊರತು ಪಡಿಸಿ, ಉಳಿದ ಜಿಲ್ಲೆಗಳಲ್ಲಿ ಕನ್ನಡ ಮನಸ್ಸುಗಳನ್ನು ಭೇಟಿ ಮಾಡಿ ಮತ ಯಾಚಿಸುವುದಾಗಿ ಮಾಹಿತಿ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.