ETV Bharat / state

ಡಿಸೆಂಬರ್​ಗೆ ಎರಡು ಲಕ್ಷ ಭಕ್ತರು ಅಂಜನಾದ್ರಿಗೆ ಬರುವ ನಿರೀಕ್ಷೆ : ಸಚಿವೆ ಜೊಲ್ಲೆ

author img

By

Published : Nov 16, 2022, 7:43 PM IST

ಡಿಸೆಂಬರ್ ಮೊದಲವಾರದಂದು ಅಂಜನಾದ್ರಿಗೆ ಹುನುಮ ಮಾಲಾಧಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರಲಿದ್ದು, ಇದಕ್ಕಾಗಿ ಎಲ್ಲ ಸಿದ್ಧತೆಗಳನ್ನು ಮಾಡಲಾಗುತ್ತಿದೆ ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

kn_GVT
ಶಶಿಕಲಾ ಜೊಲ್ಲೆ

ಗಂಗಾವತಿ: ಈ ಬಾರಿ ಹನುಮ ಮಾಲೆ ವಿಸರ್ಜನೆಗೆ ರಾಜ್ಯದ ನಾನಾ ಭಾಗದಿಂದ ಅಂಜನಾದ್ರಿಗೆ ಸುಮಾರು ಎರಡು ಲಕ್ಷ ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಈ ಹಿನ್ನೆಲೆ ಬರುವ ಭಕ್ತರಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಇಲಾಖೆಯಿಂದ ಸಿದ್ಧತೆ ನಡೆಸಲಾಗಿದೆ ಎಂದು ಮುಜರಾಯಿ ಇಲಾಖೆಯ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

ತಾಲ್ಲೂಕಿನ ಚಿಕ್ಕರಾಂಪೂರದ ಬಳಿ ಇರುವ ಅಂಜನಾದ್ರಿಗೆ ಬುಧವಾರ ಜಿಲ್ಲಾಡಳಿತದ ನಾನಾ ಇಲಾಖೆಯ ಅಧಿಕಾರಿಗಳ ತಂಡದೊಂದಿಗೆ ಸ್ಥಳ ಪರಿಶೀಲಿಸಿದ ಸಚಿವರು, ಬಳಿಕ ಕೈಗೊಂಡ ಸಿದ್ಧತೆಯ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿದರು. ಈ ವರ್ಷ ಡಿಸಂಬರ್ 3,4 ಮತ್ತು 5ರಂದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಅಂಜನಾದ್ರಿಗೆ ಬರುವ ನಿರೀಕ್ಷೆಯಿದೆ. ಬೇರೆ ರಾಜ್ಯದಿಂದ ಹನುಮ ಮಾಲಾಧಾರಿಗಳು ಬರಲಿದ್ದಾರೆ. ಹೀಗಾಗಿ ಜಿಲ್ಲಾಡಳಿತದಿಂದ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಲಾಗುತ್ತಿದೆ.

ಶಶಿಕಲಾ ಜೊಲ್ಲೆ ಪ್ರತಿಕ್ರಿಯೆ

ಬರುವ ಭಕ್ತಾಧಿಗಳಿಗೆ ಊಟ, ವಾಹನಗಳ ಪಾರ್ಕಿಂಗ್​ಗೆ ವ್ಯವಸ್ಥೆ, ವಸತಿ, ಲೈಟ್ಸ್, ತಾಣದ ಸುತ್ತಲೂ ಸ್ವಚ್ಛತೆ, ತಾತ್ಕಾಲಿಕ ಆರೋಗ್ಯ ಕೇಂದ್ರ, ರಸ್ತೆ ಸೇರಿದಂತೆ ಎಲ್ಲ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಡಿ.4ರೊಳಗೆ ಇನ್ನೆರಡು-ಮೂರು ಸಭೆ ನಡೆಸುತ್ತೇವೆ. ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ನಿಗಾವಹಿಸುತ್ತೇವೆ ಎಂದು ಅಭಯ ನೀಡಿದರು.

ಹನುಮ ಜಯಂತಿ ಮುಗಿಯುವವರೆಗೂ ಅಂಜನಾದ್ರಿ ದೇಗುಲದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯನ್ನಾಗಿ ತಹಸೀಲ್ದಾರ್ ಬದಲಿಗೆ ಸಹಾಯಕ ಆಯುಕ್ತರನ್ನು ನಿಯೋಜಿಸಲಾಗಿದೆ. ಇಲಾಖೆಯಿಂದ ದೇಗುಲಕ್ಕೆ ಒಬ್ಬ ಶಾಶ್ವತ ಅಧಿಕಾರಿಯನ್ನು ನಿಯೋಜಿಸುವ ಉದ್ದೇಶವಿದೆ ಎಂದು ಸಚಿವರು ಇದೇ ವೇಳೆ ತಿಳಿಸಿದರು.

ಇದನ್ನೂ ಓದಿ: ಅಂಜನಾದ್ರಿ ಬೆಟ್ಟಕ್ಕೆ ಏರ್ ಮಾರ್ಷಲ್ ಮಾನವೇಂದ್ರ ಸಿಂಗ್ ಭೇಟಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.