ETV Bharat / state

ರಸ್ತೆ ಮಧ್ಯೆ ಶಾಸಕ ಯತ್ನಾಳ್​ ಬಟ್ಟೆ ಬಿಚ್ಚಿಸುತ್ತೇವೆ: ಶಂಕರ ಕರಪಡಿ - mla basanagowdha yatnal

ವಾಟಾಳ್​ ನಾಗರಾಜ್ ಬಗ್ಗೆ ಲಘುವಾಗಿ ಮಾತನಾಡುವುದನ್ನು ನಿಲ್ಲಿಸದಿದ್ದರೆ ವಿಜಯಪುರಕ್ಕೆ ಹೋಗಿ ರಸ್ತೆಯ ಮಧ್ಯೆ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಬಟ್ಟೆ ಬಿಚ್ಚಿಸುವುದಾಗಿ ಕನ್ನಡಸೇನೆ ಗೌರವಾಧ್ಯಕ್ಷ ಶಂಕರ ಕರಪಡಿ ಹೇಳಿದ್ದಾರೆ.

ಶಂಕರ ಕರಪಡಿ
ಶಂಕರ ಕರಪಡಿ
author img

By

Published : Dec 5, 2020, 3:48 PM IST

ಕುಷ್ಟಗಿ (ಕೊಪ್ಪಳ): ಕನ್ನಡ ಪರ ಸಂಘಟನೆಗಳ ತಂಟೆಗೆ ಬಂದರೆ ಮತ್ತು ವಾಟಾಳ್​ ನಾಗರಾಜ್ ಬಗ್ಗೆ ಲಘುವಾಗಿ ಮಾತನಾಡುವುದನ್ನು ನಿಲ್ಲಿಸದಿದ್ದರೆ ವಿಜಯಪುರಕ್ಕೆ ಹೋಗಿ ರಸ್ತೆಯ ಮಧ್ಯೆ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಬಟ್ಟೆ ಬಿಚ್ಚಿಸುವುದಾಗಿ ಕನ್ನಡಸೇನೆ ಗೌರವಾಧ್ಯಕ್ಷ ಶಂಕರ ಕರಪಡಿ ಹೇಳಿದರು.

ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ವಿರೋಧಿಸಿ ಕರ್ನಾಟಕ ಬಂದ್ ಬೆಂಬಲಾರ್ಥವಾಗಿ ಇಂದು ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ, ಪ್ರತಿಭಟನೆ ನಡೆಸಲಾಯಿತು.

ಯತ್ನಾಳ್​ ವಿರುದ್ಧ ಶಂಕರ ಕರಪಡಿ ಗರಂ

ಈ ವೇಳೆ ಮಾತನಾಡಿದ ಶಂಕರ ಕರಪಡಿ, ವಿಜಯಪುರದ ಸುಲ್ತಾನ್ ಎನ್ನುವ ಭ್ರಮೆಯಲ್ಲಿರುವ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಅವರಿಗೆ ಸಂವಿಧಾನಬದ್ದ ಶಾಸಕ ಎನ್ನುವ ಅರಿವಿಲ್ಲ. ವಿಜಯಪುರ ಅವರಪ್ಪನ ಆಸ್ತಿ ಅಲ್ಲ, ಎಲ್ಲಾ ಸಮುದಾಯದವರು ಓಟು ಹಾಕಿ ಗೆಲ್ಲಿಸಿದ್ದಾರೆ ಎನ್ನುವ ಅರಿವು ಇರಬೇಕು ಎಂದರು.

ಬೆಳಗಾವಿ ಗಡಿಯಲ್ಲಿ ಎಂ.ಇ.ಎಸ್. ಶಿವಸೇನೆ ಕನ್ನಡಿಗರಿಗೆ ಕಿರಿ ಕಿರಿ ನೀಡುತ್ತಿದ್ದ ವೇಳೆ ಸುಮ್ಮನಿದ್ದ ಶಾಸಕ, ಕನ್ನಡಪರ ಸಂಘಟನಾಕಾರರ ವಿರುದ್ಧ ಮಾತನಾಡಿರುವುದನ್ನು ಖಂಡಿಸುವುದಾಗಿ ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.