ETV Bharat / state

ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಶಂಕರ್​​ ಬಿದರಿ ಹೇಳಿದ್ದೇನು? - ನಿವೃತ್ತ ಡಿಜಿಪಿ

ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ತಮ್ಮ ಸ್ಪಷ್ಟ ನಿಲುವನ್ನು ನಿವೃತ್ತ ಡಿಜಿಪಿ ಹಾಗೂ ಬಿಜೆಪಿ ಮುಖಂಡ ಶಂಕರ್ ಬಿದರಿ ಮಾಧ್ಯಮದವರೊಂದಿಗೆ ಹಂಚಿಕೊಂಡಿದ್ದಾರೆ.

ಲೋಕಸಭಾ ಟಿಕೆಟ್​ ಕೇಳುವ ಕುರಿತು ಮಾತನಾಡಿದ ಶಂಕರ್​ ಬಿದರಿ
author img

By

Published : Mar 15, 2019, 6:16 PM IST

ಕೊಪ್ಪಳ: ಲೋಕಸಭಾ ಚುನಾವಣೆಯಲ್ಲಿ ನಾನಾಗಿಯೇ ಪಕ್ಷದಲ್ಲಿ ಟಿಕೆಟ್ ಕೇಳುವುದಿಲ್ಲ. ಒಂದು ವೇಳೆ ಪಕ್ಷದವರು ಚುನಾವಣೆಯಲ್ಲಿ ಸ್ಪರ್ಧಿಸಿ ಎಂದು ಹೇಳಿದರೆ ಪರಿಶೀಲನೆ ಮಾಡುವುದಾಗಿ ತಿಳಿಸುವೆ ಎಂದು ನಿವೃತ್ತ ಡಿಜಿಪಿ ಹಾಗೂ ಬಿಜೆಪಿ ಮುಖಂಡ ಶಂಕರ್ ಬಿದರಿ ಹೇಳಿದ್ದಾರೆ.

ಇಂದು ನಗರದಲ್ಲಿನ ಅವರ ಸ್ನೇಹಿತರ ಮನೆಗೆ ಆಗಮಿಸಿದ್ದಾಗ ಮಾತನಾಡಿದ ಅವರು, ಸಿಂಧನೂರಿಗೆ ಹೊರಟಿದ್ದವನು ಮಾರ್ಗ ಮಧ್ಯದ ಕೊಪ್ಪಳದಲ್ಲಿ ಸ್ನೇಹಿತರ ಮನೆಗೆ ಊಟಕ್ಕೆ ಬಂದಿದ್ದೇನೆ. ಇದರಲ್ಲಿ ಯಾವುದೇ ರಾಜಕೀಯ ವಿಷಯವಿಲ್ಲ. ಲೋಕಸಭಾ ಚುನಾವಣೆಗೆ ನಾನಾಗಿ ಪಕ್ಷದಲ್ಲಿ ಟಿಕೆಟ್ ಕೇಳುವುದಿಲ್ಲ. ಪಕ್ಷದವರೇ ಚುನಾವಣೆಗೆ ಸ್ಪರ್ಧಿಸಿ ಎಂದು ಹೇಳಿದರೆ ಪರಿಶೀಲನೆ ಮಾಡಿ ತಿಳಿಸುತ್ತೇನೆ. ನಾನು ಯಾವ ಕ್ಷೇತ್ರದಲ್ಲಿ ಸ್ಪರ್ಧಿಸಬೇಕು ಎಂಬುದು ಪಕ್ಷಕ್ಕೆ ಬಿಟ್ಟ ವಿಚಾರ. ಈ ವಿಷಯದಲ್ಲಿ ನಾನು ಹಸ್ತಕ್ಷೇಪ ಮಾಡುವುದಿಲ್ಲ. ಪಕ್ಷದಲ್ಲಿ ಎಲ್ಲರಷ್ಟೇ ಸಕ್ರಿಯನಾಗಿ ನಾನು ಇದ್ದೇನೆ. ನಾನು ಯಾರನ್ನೂ ಟಿಕೆಟ್ ಕೇಳಿಲ್ಲ. ನನ್ನಿಂದ ಪಕ್ಷಕ್ಕೆ, ದೇಶಕ್ಕೆ, ರಾಜ್ಯಕ್ಕೆ ಅನುಕೂಲವಾಗುವುದಾದರೆ ಅವರೇ ಕರೆದು ಟಿಕೆಟ್​ ಕೊಡಲಿ‌. ಬಳಿಕ ಚುನಾವಣೆಗೆ ಸ್ಪರ್ಧಿಸಬೇಕೋ, ಬೇಡವೋ ಎಂಬುದನ್ನು ವಿಚಾರ ಮಾಡಿ ತೀರ್ಮಾನ ಮಾಡುವೆ ಎಂದರು.

ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್​ ಕೇಳುವ ಕುರಿತು ಮಾತನಾಡಿದ ಶಂಕರ್​ ಬಿದರಿ

ಇನ್ನು ಮೋದಿ ಮತ್ತೆ ಅಧಿಕಾರಕ್ಕೆ ಬರಬಹುದಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬೆಂಗಳೂರಿನ ಬಸವನಗುಡಿಯಲ್ಲಿ ಒಬ್ಬ ಗಿಳಿ ಶಾಸ್ತ್ರ ಹೇಳುವವನಿದ್ದಾನೆ. ಬೇಕಾದರೆ ಅವನನ್ನು ಕೇಳಿಕೊಂಡು ಬಂದು ಹೇಳುವೆ. ವೈಯಕ್ತಿಕವಾಗಿ ಹೇಳೋದಾದರೆ ಮೋದಿ ಅವರು ಮಾಡಿರುವ ಒಳ್ಳೆಯ ಕೆಲಸಕ್ಕೆ ಸಂಪೂರ್ಣವಾಗಿ ದೇಶದ ಜನರು ಅವರಿಗೆ ಅಧಿಕಾರ ನೀಡಬೇಕು. ನಾನು ನಮ್ಮ ರಾಜ್ಯದ ಬಗ್ಗೆ ಹೇಳಬಹುದು. ಆದರೆ ಬೇರೆ ರಾಜ್ಯದ ಬಗ್ಗೆ ನನಗೆ ಗೊತ್ತಿಲ್ಲ. ಗೊತ್ತಿಲ್ಲದರ ಬಗ್ಗೆ ಮಾತನಾಡಬಾರದು ಎಂದರು.

ರಾಜ್ಯದಲ್ಲಿ ಬಿಜೆಪಿಗೆ ಉತ್ತಮ ಸ್ಥಾನ ಸಿಗಬಹುದು. ಅಂಕಿ-ಅಂಶ ಬೇಕೆಂದಾದರೆ ನಾನು ಪಕ್ಷದವರನ್ನು ಕೇಳಿ ಹೇಳುತ್ತೇನೆ ಎಂದರು. ನಾನು ಜನಿಸಿ 64 ವರ್ಷವಾಯಿತು. ಇಲ್ಲಿಯವರೆಗೆ ದೇವರನ್ನು ಬಿಟ್ಟು ಯಾರನ್ನೂ ನಾನು ಏನು ಕೇಳಿಲ್ಲ. ನಾನು ಈ ಹಿಂದೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಯಾವ ಕ್ಷೇತ್ರಕ್ಕೂ ಟಿಕೆಟ್​ ಕೇಳಿಲ್ಲ, ಮುಂದೆ ಕೇಳುವುದೂ ಇಲ್ಲ. ರಾಷ್ಟ್ರಕ್ಕೆ, ರಾಜ್ಯಕ್ಕೆ ಮಾಡಬೇಕಾದ ಎಲ್ಲಾ ಸೇವೆಯನ್ನು ಈಗಾಗಲೇ ಮಾಡಿದ್ದೇನೆ. ಇನ್ನೂ ಚುನಾವಣೆಗಾಗಿ ಎಕ್ಸ್ಟ್ರಾ ಮಾಡಬೇಕಾದ್ದು ಏನು ಇಲ್ಲ. ಆದರೆ, ನನಗೆ ಶಕ್ತಿ ಇರುವವರೆಗೂ ಸೇವೆ ಮಾಡಲು ತಯಾರಿದ್ದೇನೆ ಎಂದರು.

Intro:

Body:ಕೊಪ್ಪಳ:- ಲೋಕಸಭಾ ಚುನಾವಣೆಯಲ್ಲಿ ನಾನಾಗಿಯೇ ಪಕ್ಷದಲ್ಲಿ ಟಿಕೆಟ್ ಕೇಳುವುದಿಲ್ಲ. ಒಂದು ವೇಳೆ ಪಕ್ಷದವರು ಚುನಾವಣೆಗೆ ಸ್ಪರ್ಧಿಸಿ ಎಂದು ಹೇಳಿದರೆ ಹೇಳಿದರೆ ಪರಿಶೀಲನೆ ಮಾಡುವುದಾಗಿ ಹೇಳುವೆ ಎಂದು ನಿವೃತ್ತ ಡಿಜಿಪಿ ಹಾಗೂ ಬಿಜೆಪಿ ಮುಖಂಡ ಶಂಕರ್ ಬಿದರಿ ಹೇಳಿದ್ದಾರೆ. ನಗರದಲ್ಲಿ ಇಂದು ಅವರ ಸ್ನೇಹಿತರ ಸ್ನೇಹಿತರ ಮನೆಗೆ ಆಗಮಿಸಿದ್ದಾಗ ಮಾತನಾಡಿದ ಅವರು, ಸಿಂಧನೂರಿಗೆ ಹೊರಟಿದ್ದೇ. ಹಾಗೆ ಮಾರ್ಗಮಧ್ಯದ ಕೊಪ್ಪಳದಲ್ಲಿ ಸ್ನೇಹಿತರೆ ಮನೆಗೆ ಊಟಕ್ಕೆ ಬಂದಿದ್ದೇನೆ. ಇದರಲ್ಲಿ ಬೇರೆ ಯಾವುದೇ ರಾಜಕೀಯ ವಿಷಯವಿಲ್ಲ. ಲೋಕಸಭಾ ಚುನಾವಣೆಗೆ ನಾನಾಗಿ ಪಕ್ಷದಲ್ಲಿ ಟಿಕೆಟ್ ಕೇಳುವುದಿಲ್ಲ. ಪಕ್ಷದವರೇ ಚುನಾವಣೆಗೆ ಸ್ಪರ್ಧಿಸಿ ಎಂದು ಹೇಳಿದರೆ ಪರಿಶೀಲನೆ ಮಾಡಿ ತಿಳಿಸುತ್ತೇನೆ. ನಾನು ಯಾವ ಕ್ಷೇತ್ರದಲ್ಲಿ ಸ್ಪರ್ಧಿಸಬೇಕು ಎಂಬುದು ಪಕ್ಷಕ್ಕೆ ಬಿಟ್ಟ ವಿಚಾರ. ಈ ವಿಷಯದಲ್ಲಿ ನಾನು ಹಸ್ತಕ್ಷೇಪ ಮಾಡುವುದಿಲ್ಲ. ಪಕ್ಷದಲ್ಲಿ ಎಲ್ಲರೂ ಎಷ್ಟು ಸಕ್ರಿಯರಾಗಿದ್ದರೋ ಅಷ್ಟು ನಾನು ಸರಿಯಾಗಿವಾದ್ದೇನೆ. ನಾನು ಯಾರನ್ನೂ ಟಿಕೆಟ್ ಕೇಳಿಲ್ಲ. ನನ್ನಿಂದ ಪಕ್ಷಕ್ಕೆ, ದೇಶಕ್ಕೆ, ರಾಜ್ಯಕ್ಕೆ ಅನುಕೂಲವಾಗುವುದಾದರೆ ಅವರೇ ಕರೆದು ಟಿಕೇಟ್ ಕೊಡಲಿ‌. ಬಳಿಕ ಚುನಾವಣೆಗೆ ಸ್ಪರ್ಧಿಸಬೇಕೋ, ಬೇಡವೋ ಎಂಬುದನ್ನು ಆಮೇಲೆ ವಿಚಾರ ಮಾಡಿ ತೀರ್ಮಾನ ಮಾಡುವೆ‌. ಸತ್ತರೂ ನಾನೇ ಆಗಲಿ ಯಾರನ್ನು ಟಿಕೆಟ್ ಕೇಳುವುದಿಲ್ಲ ಎಂದರು. ಇನ್ನು ಮೋದಿ ಮತ್ತೆ ಅಧಿಕಾರಕ್ಕೆ ಬರಬಹುದಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಂಕರ್ ಬಿದರಿ ಅವರು, ಬೆಂಗಳೂರಿನ ಬಸವನಗುಡಿಯಲ್ಲಿ ಒಬ್ಬ ಗಿಳಿ ಶಾಸ್ತ್ರ ಹೇಳುವವನಿದ್ದಾನೆ ಬೇಕಾದರೆ ಅವನನ್ನು ಕೇಳಿಕೊಂಡು ಬಂದು ಹೇಳುವೆ. ವೈಯಕ್ತಿಕವಾಗಿ ಹೇಳೋದಾದರೆ ಮೋದಿ ಅವರು ಮಾಡಿರುವ ಒಳ್ಳೆಯ ಕೆಲಸಕ್ಕೆ ಸಂಪೂರ್ಣವಾಗಿ ದೇಶದ ಜನರು ಅವರಿಗೆ ಅಧಿಕಾರ ನೀಡಬೇಕು. ಆದರೆ ನಾನು ರಾಜ್ಯದ ಬಗ್ಗೆ ಹೇಳಬಹುದು. ಬೇರೆ ರಾಜ್ಯದ ಬಗ್ಗೆ ನನಗೆ ಗೊತ್ತಿಲ್ಲ. ಗೊತ್ತಿಲ್ಲದರ ಬಗ್ಗೆ ಮಾತನಾಡಬಾರದು. ರಾಜ್ಯದಲ್ಲಿ ಬಿಜೆಪಿಗೆ ಉತ್ತಮ ಸ್ಥಾನ ಸಿಗಬಹುದು. ಅಂಕಿಸಂಖ್ಯೆ ಬೇಕಾದರೆ ನಾನು ಪಕ್ಷದವರನ್ನು ಕೇಳಿ ಹೇಳುತ್ತೇನೆ ಎಂದರು. ನಾನು ಭೂಮಿಯಲ್ಲಿ ಜನಿಸಿ ೬೪ ವರ್ಷವಾಯಿತು. ಇಲ್ಲಿಯವರೆಗೆ ದೇವರನ್ನು ಬಿಟ್ಟು ಯಾರನ್ನೂ ನಾನು ಏನು ಕೇಳಿಲ್ಲ. ನಾನು ಈ ಹಿಂದೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಯಾವ ಕ್ಷೇತ್ರಕ್ಕೂ ಟಿಕೇಟ್ ಕೇಳಿಲ್ಲ, ಮುಂದೆ ಕೇಳುವುದಿಲ್ಲ. ರಾಷ್ಟ್ರಕ್ಕೆ, ರಾಜ್ಯಕ್ಕೆ ಮಾಡಬೇಕಾದ ಎಲ್ಲಾ ಸೇವೆಯನ್ನು ಈಗಾಗಲೇ ಮಾಡಿದ್ದೇನೆ. ಈಗ ಎಕ್ಸ್ಟ್ರಾ ಮಾಡಬೇಕಾದ್ದು ಏನು ಇಲ್ಲ. ಆದರೆ, ನನಗೆ ಶಕ್ತಿ ಇರುವುದಕ್ಕೆ ಇನ್ನೂ ಸೇವೆ ಮಾಡಲು ತಯಾರಿದ್ದೇನೆ. ಪಕ್ಷದವರಿಗೆ, ಸಮಾಜಕ್ಕೆ ಬೇಕಾದರೆ ಮಾಡಿಕೊಳ್ಳಲಿ. ನಾನೇಕೆ ಭಿಕ್ಷೆ ಬೇಡಿ ತೆಗೆದುಕೊಳ್ಳಲಿ. ನನಗೆ ಅದರ ಅವಶ್ಯಕತೆ ಇಲ್ಲ. ನಾನು ಮಂತ್ರಿ, ಮುಖ್ಯಮಂತ್ರಿ, ಎಂಪಿಯಾದರೆ ನನಗೇನಾದರೂ ಲಾಭವಿದೆಯಾ. ನಾನು 16 ನೇ ವರ್ಷದಿಂದ ೪೨ ವರ್ಷಗಳ ಕಾಲ ಜೀವ ಒತ್ತೆಇಟ್ಟು ರಾಜ್ಯಕ್ಕೆ, ಸಮಾಜಕ್ಕೆ ಸೇವೆ ಮಾಡಿದ್ದೇನೆ. 7 ಜನ್ಮದ ಸೇವೆಯನ್ನು ನಾನು ಇದೇ ಜನ್ಮದಲ್ಲಿ ಸಮಾಜಕ್ಕೆ ಮಾಡಿದ್ದೇನೆ ಎಂದು ಶಂಕರ್ ಬಿದರಿ ಇದೇ ಸಂದರ್ಭದಲ್ಲಿ ಹೇಳಿದರು.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.