ETV Bharat / state

ಬಣ್ಣ ಸಹಿಸದವರು ಮನುಷ್ಯರ ಮಾನವೀಯತೆ ಸಹಿಸುತ್ತಾರಾ?: ಯು ಟಿ ಖಾದರ್ - ಕೋಮುಗಲಭೆ

ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಯಾವುದೇ ಕ್ಷೇತ್ರದಲ್ಲಿ ಸ್ಪರ್ಧಿಸಿದರೂ ಗೆಲ್ಲುತ್ತಾರೆ. ಅವರು ಬಾದಾಮಿಯಲ್ಲಿ ಮತ್ತೆ ನಿಲ್ಲುವಂತೆ ಅಲ್ಲಿಯ ಜನ ಒತ್ತಾಯಿಸುತ್ತಿದ್ದಾರೆ. ಕಾಂಗ್ರೆಸ್​​ನಲ್ಲಿ ಮುಂದಿನ ಸಿಎಂ ಯಾರು ಎಂಬುದನ್ನು ಹೈಕಮಾಂಡ್ ತೀರ್ಮಾನಿಸುತ್ತದೆ ಎಂದು ಶಾಸಕ ಯು.ಟಿ ಖಾದರ್​ ಹೇಳಿದರು.

u t khadar
ಶಾಸಕ ಯು ಟಿ ಖಾದರ್
author img

By

Published : Dec 16, 2022, 12:32 PM IST

Updated : Dec 16, 2022, 7:41 PM IST

ಶಾಸಕ ಯು ಟಿ ಖಾದರ್

ಕೊಪ್ಪಳ: ಬಟ್ಟೆ ಬಣ್ಣವಷ್ಟೇ, ಅದನ್ನು ವಿವಾದ ಮಾಡುವುದು ಬೇಡ. ಕಲರ್ ಸಹಿಸದವರು ಮನುಷ್ಯರ ಮಾನವೀಯತೆಯನ್ನು ಸಹಿಸುತ್ತಾರಾ? ಎಂದು ಶಾಸಕ ಯು.ಟಿ.ಖಾದರ್ ಪ್ರಶ್ನಿಸಿದ್ದಾರೆ.

ಬಾಲಿವುಡ್​ ನಟ ಶಾರುಖ್ ಖಾನ್ ಅಭಿನಯದ ಬೇಷರಂ ಹಾಡಿನಲ್ಲಿನ ಕೇಸರಿ ಬಟ್ಟೆ ಕುರಿತು ಎದ್ದಿರುವ ವಿವಾದದ ಕುರಿತು ನಗರದಲ್ಲಿ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದ ಅವರು, ಈ ರೀತಿ ವಿವಾದ ಹುಟ್ಟುಹಾಕಲು ಬಿಜೆಪಿಯು ಕೆಲವರಿಗೆ ತರಬೇತಿ ಕೊಡುತ್ತಿದೆ. ಈ ತರದ ಟ್ರೈನಿಂಗ್ ಕೊಡುವುದು ದೇಶಕ್ಕೆ ಅಪಾಯಕಾರಿ ಎಂದು ಕಿಡಿಕಾರಿದರು.

ಕಾಂಗ್ರೆಸ್​ಗೆ ಮತ್ತೆ ಅಧಿಕಾರ: ಜನಸಾಮಾನ್ಯರು ಆತ್ಮಾವಲೋಕನ ಮಾಡುತ್ತಿದ್ದು, ಸಿದ್ದರಾಮಯ್ಯ ಹಾಗೂ ಬಿಜೆಪಿ ಆಡಳಿತದ ತುಲನೆ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ಬಿಜೆಪಿ ಆಡಳಿತದ ಬಗ್ಗೆ ಜನ ಸಾಮಾನ್ಯರು ಬೇಸತ್ತಿದ್ದಾರೆ. 2023ರಲ್ಲಿ ಖಂಡಿತವಾಗಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೋಮುಗಲಭೆ ಬೇಡ: ಮಂಗಳೂರು ಹಾಗೂ ಶಿವಮೊಗ್ಗವನ್ನು ಸೂಕ್ಷ್ಮ ಪ್ರದೇಶವಾಗಿ ಬಿಂಬಿಸುತ್ತಿದ್ದಾರೆ. ಅಲ್ಲಿಯ ಜನ ಸೌಹಾರ್ದಯುತವಾಗಿದ್ದು, ಬಿಜೆಪಿಯವರು ರಾಜಕಾರಣಕ್ಕಾಗಿ ಅಲ್ಲಿ ಕೋಮು ಗಲಭೆ ಆಗುವಂತೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಶಂಕಿತ ಉಗ್ರ ಶಾರಿಕ್ ಕುರಿತಾಗಿ ಡಿಕೆಶಿ ಹೇಳಿಕೆಗೆ ಪ್ರತ್ರಿಕ್ರಿಯಿಸಿದ ಖಾದರ್​​, ಶಾರಿಕ್ ವಿಷಯ ಬಗ್ಗೆ ಶಿವಕುಮಾರ್​​ ಏನು ಹೇಳಿದ್ದಾರೆಂದು ನನಗೆ ಗೊತ್ತಿಲ್ಲ. ಯಾವ ಕಾರಣಕ್ಕೆ ಅವರು ಹೇಳಿದ್ದಾರೆ. ನಾನು ಅವರೊಂದಿಗೆ ಚರ್ಚೆ ಮಾಡುತ್ತೇನೆ. ಭಯೋತ್ಪಾದಕ ಘಟನೆ ಎಲ್ಲಿಯೂ ನಡೆಯಬಾರದು ಎಂದು ಹೇಳಿದರು.

ಕಾಂಗ್ರೆಸ್​ನಲ್ಲಿ ಬಣವಿಲ್ಲ: ಕಾಂಗ್ರೆಸ್ ನಲ್ಲಿ ಯಾವುದೇ ಬಣಗಳಿಲ್ಲ ಎಲ್ಲರೂ ಒಂದಾಗಿದ್ದೇವೆ. ನಮ್ಮ ಹಿರಿಯ ನಾಯಕ ಅಮರೇಗೌಡ ಬಯ್ಯಾಪುರ ಜನ್ಮದಿನಕ್ಕಾಗಿ ಬಂದಿದ್ದೇವೆ. ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಯಾವುದೇ ಕ್ಷೇತ್ರದಲ್ಲಿ ಸ್ಪರ್ಧಿಸಿದರೂ ಗೆಲ್ಲುತ್ತಾರೆ. ಅವರು ಬಾದಾಮಿಯಲ್ಲಿ ಮತ್ತೆ ನಿಲ್ಲುವಂತೆ ಅಲ್ಲಿಯ ಜನ ಒತ್ತಾಯಿಸುತ್ತಿದ್ದಾರೆ ಎಂದ ಅವರು, ಕಾಂಗ್ರೆಸ್​​ನಲ್ಲಿ ಮುಂದಿನ ಸಿಎಂ ಯಾರು ಎಂಬುದನ್ನು ಹೈಕಮಾಂಡ್ ತೀರ್ಮಾನಿಸುತ್ತದೆ ಎಂದು ತಿಳಿಸಿದರು.

ಇದನ್ನೂಓದಿ:ಸೈನಿಕರ ಕುಟುಂಬಕ್ಕೆ ಅಗತ್ಯ ಸವಲತ್ತು ಕಲ್ಪಿಸಲು ಸರ್ಕಾರ ಬದ್ಧ: ಸಿಎಂ ಬೊಮ್ಮಾಯಿ

Last Updated : Dec 16, 2022, 7:41 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.