ETV Bharat / state

ಆಸ್ಪತ್ರೆಯಲ್ಲಿ ಪರಿಚಯ, ಲವ್​.. ಇನ್​ಸ್ಟಾದಲ್ಲಿ ನಿತ್ಯವೂ ನಗ್ನ ವಿಡಿಯೋ ಕಾಲ್ ಬೆದರಿಕೆ​.. ಗಂಗಾವತಿಯಲ್ಲಿ ಕೃತ್ಯ - ಬಾಲಕಿ ನೀಡಿದ ದೂರಿನ ಮೆರೆಗೆ

ಆಸ್ಪತ್ರೆಯಲ್ಲಿ ಪರಿಚಯದ ಬಾಲಕಿಯನ್ನು ಪ್ರೀತಿಸಿ, ಮದುವೆಯಾಗುವುದಾಗಿ ನಂಬಿಸಿದ್ದಾನೆ. ಬಳಿಕ ಇನ್​ಸ್ಟಾಗ್ರಾಮದಲ್ಲಿ ನಿತ್ಯವೂ ನಗ್ನ ವಿಡಿಯೋ ಕಾಲ್​ ಮಾಡಿದ್ದಾರೆ. ಇತ್ತೀಚೆಗೆ ವಿಡಿಯೋ ಕಾಲ್​ ನಿರಾಕರಿಸಿದ್ದ ಬಾಲಕಿಗೆ ಆರೋಪಿ ಬೆದರಿಕೆ ಹಾಕಿದ್ದನು. ಇದರಿಂದ ಬೇಸತ್ತ ಸಂತ್ರಸ್ತೆ, ಆರೋಪಿ ವಿರುದ್ಧ ದೂರು ನೀಡಿರುವ ಘಟನೆ ಬೆಳಕಿಗೆ ಬಂದಿದೆ.

Sexual assaulting by Instagram  POCSO Case file against Young man  Case file against Young man in Gangavati  ಆಸ್ಪತ್ರೆಯಲ್ಲಿ ಪರಿಚಯ  ಇನ್​ಸ್ಟಾದಲ್ಲಿ ನಿತ್ಯವೂ ನಗ್ನ ವಿಡಿಯೋ ಕಾಲ್  ಆಸ್ಪತ್ರೆಯಲ್ಲಿ ಪರಿಚಯದ ಬಾಲಕಿಯನ್ನು ಪ್ರೀತಿಸಿ  ಇನ್​ಸ್ಟಾಗ್ರಾಮದಲ್ಲಿ ನಿತ್ಯವೂ ನಗ್ನ ವಿಡಿಯೋ ಕಾಲ್​ ಪೋಕ್ಸೋ ಪ್ರಕರಣವೊಂದು ಮುನ್ನೆಲೆಗೆ  ಆಸ್ಪತ್ರೆಗೆ ಬಂದ ಬಾಲಕಿಯೊಬ್ಬರನ್ನು ಪರಿಚಯ  ಬಾಲಕಿ ನೀಡಿದ ದೂರಿನ ಮೆರೆಗೆ  ಪ್ರತಿಷ್ಠಿತ ಕಾಲೇಜುವೊಂದರ ವಿದ್ಯಾರ್ಥಿ
ಇನ್​ಸ್ಟಾದಲ್ಲಿ ನಿತ್ಯವೂ ನಗ್ನ ವಿಡಿಯೋ ಕಾಲ್​.. ಮುಂದೆ?
author img

By ETV Bharat Karnataka Team

Published : Sep 5, 2023, 8:09 AM IST

Updated : Sep 5, 2023, 10:16 AM IST

ಗಂಗಾವತಿ(ಕೊಪ್ಪಳ): ತಾಲೂಕಿನಲ್ಲಿ ಪೋಕ್ಸೋ ಪ್ರಕರಣವೊಂದು ಬೆಳಕಿಗೆ ಬಂದಿದೆ. ಯುವಕನೊಬ್ಬ ಆಸ್ಪತ್ರೆಗೆ ಬಂದ ಬಾಲಕಿಯೊಬ್ಬಳನ್ನು ಪರಿಚಯ ಮಾಡಿಕೊಂಡಿದ್ದಾನೆ. ಬಳಿಕ ಆಕೆಯಿಂದ ಇನ್​ಸ್ಟಾಗ್ರಾಂ ಖಾತೆಯ ಮಾಹಿತಿ ಪಡೆದು ಸಲುಗೆ ಬೆಳೆಸಿಕೊಂಡಿದ್ದಾನೆ. ದಿನ ಕಳೆದಂತೆ ಬಾಲಕಿಗೆ ಯುವಕ ಲೈಂಗಿಕ ಕಿರುಕುಳ ನೀಡಲು ಆರಂಭಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಈ ಘಟನೆ ಕುರಿತು ನಗರ ಪೊಲೀಸ್​ ಠಾಣೆಯಲ್ಲಿ ಯುವಕನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ.

ದೂರಿನ ಪ್ರಕಾರ: ತಾಲ್ಲೂಕಿನ ಗ್ರಾಮವೊಂದರ ಬಾಲಕಿ ನೀಡಿದ ದೂರಿನ ಮೇರೆಗೆ ಇಲ್ಲಿನ ನಗರ ಪೊಲೀಸ್​ ಠಾಣೆಯ ಸಿಬ್ಬಂದಿ ಮುಸ್ತಾಪ ವಡ್ಡರಹಟ್ಟಿ ಎಂಬಾತನನ್ನು ಬಂಧಿಸಿದ್ದಾರೆ. ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈತ ನಗರದ ಪ್ರತಿಷ್ಠಿತ ಕಾಲೇಜುವೊಂದರ ವಿದ್ಯಾರ್ಥಿಯಾಗಿದ್ದು, ಶಿಕ್ಷಣದ ಭಾಗವಾಗಿ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಯೋಗಿಕ ತರಬೇತಿಗೆ ನಿಯೋಜನೆಗೊಂಡಿದ್ದನು.

ನಿತ್ಯವೂ ಲೈಂಗಿಕ ಕಿರುಕುಳ: ಅನಾರೋಗ್ಯ ಪೀಡಿತ ತಂದೆಯನ್ನು ನಾಲ್ಕು ತಿಂಗಳ ಹಿಂದೆ ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಬಾಲಕಿ ದಾಖಲು ಮಾಡಿದ್ದಳು. ಚಿಕಿತ್ಸೆ ನೀಡುವ ನೆಪದಲ್ಲಿ ಮುಸ್ತಾಫ ಎಂಬಾತ ಬಾಲಕಿಯನ್ನು ಪರಿಚಯಿಸಿಕೊಂಡು ಸಲುಗೆ ಬೆಳೆಸಿದ್ದನು ಎನ್ನಲಾಗಿದೆ. ಬಳಿಕ ಆಕೆಯಿಂದ ಇನ್​ಸ್ಟಾಗ್ರಾಂ ಖಾತೆಯ ಮಾಹಿತಿ ಪಡೆದುಕೊಂಡಿದ್ದನು. ಬಳಿಕ ಇಬ್ಬರು ಕಳೆದ ನಾಲ್ಕು ತಿಂಗಳಿಂದ ಚಾಟಿಂಗ್ ಮಾಡುತ್ತಿದ್ದರು. ನಾನು ನಿನ್ನನ್ನು ಗಾಢವಾಗಿ ಪ್ರೀತಿಸುತಿದ್ದೇನೆ ಎಂದು ಮುಸ್ತಾಫ ಬಾಲಕಿಯನ್ನು ನಂಬಿಸಿದ್ದಾನೆ. ಬಳಿಕ ನಿತ್ಯವೂ ಮಧ್ಯರಾತ್ರಿ ನಗ್ನವಾಗಿ ವಿಡಿಯೋ ಕರೆ ಮಾಡುವಂತೆ ಒತ್ತಾಯಿಸಿದ್ದಾನೆ.

ನಗ್ನವಾಗಿ ವಿಡಿಯೋ ಕಾಲ್ ಮಾಡದೇ ಹೋದಲ್ಲಿ ನಿನ್ನನ್ನು ಮದುವೆಯಾಗುವುದಿಲ್ಲ ಎಂದು ಆರೋಪಿ ಬೆದರಿಸಿದ್ದ ಎನ್ನಲಾಗಿದ್ದು, ಮದುವೆಯ ಭರವಸೆ ಹಿನ್ನೆಲೆ ಯುವತಿ ಕಳೆದ ನಾಲ್ಕು ತಿಂಗಳಿಂದ ನಗ್ನವಾಗಿ ವಿಡಿಯೋ ಕಾಲ್ ಮಾಡಿದ್ದಾಳೆ. ಇತ್ತೀಚೆಗೆ ಆ ಬಾಲಕಿ ನಗ್ನವಾಗಿ ಮಾತನಾಡಲು ನಿರಾಕರಿಸಿದ್ದಾಳೆ. ಇದರಿಂದ ಕೋಪಗೊಂಡ ಮುಸ್ತಾಫ ಆಕೆಗೆ ವಿಡಿಯೋ ತುಣುಕೊಂದನ್ನು ಕಳುಹಿಸಿದ್ದಾನೆ.

ಇನ್ನು ತನ್ನದೇ ನಗ್ನ ವಿಡಿಯೋ ನೋಡಿದ ಬಾಲಕಿ ಬೆಚ್ಚಿಬಿದ್ದಿದ್ದಾಳೆ. ನಗ್ನವಾಗಿ ವಿಡಿಯೋ ಕಾಲ್ ಮಾಡದೇ ಹೋದಲ್ಲಿ ಇವುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಹೆದರಿಸಿದ್ದಾನೆ. ಇದರಿಂದ ನೊಂದ ಬಾಲಕಿ, ಪೊಲೀಸರಿಗೆ ದೂರು ನೀಡಿದ್ದಾಳೆ. ಸದ್ಯ ಈ ಘಟನೆ ಕುರಿತು ನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ಹೆಚ್ಚಿನ ವಿಚಾರಣೆ ಕೈಗೊಂಡಿದ್ದಾರೆ.

ಓದಿ: Gang rape: ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ.. ನಾಲ್ವರು ಆರೋಪಿಗಳ ಬಂಧನ

Last Updated : Sep 5, 2023, 10:16 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.