ETV Bharat / state

ಗಂಗಾವತಿಯಲ್ಲಿ ತುಂಗಭದ್ರಾ ನದಿಪಾತ್ರದ ಹತ್ತಾರು ಗ್ರಾಮದಲ್ಲಿ ಕುಡಿಯುವ ನೀರಿಗೆ ತತ್ವಾರ - ಗಂಗಾವತಿ ತಾಲೂಕಿನ ಹತ್ತಾರು ಗ್ರಾಮ

ಗಂಗಾವತಿ ತಾಲೂಕಿನ ಹತ್ತಾರು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡುಬಂದಿದೆ.

ಗ್ರಾಮಪಂಚಾಯ್ತಿ ಸಂಗಾಪುರ
ಗ್ರಾಮಪಂಚಾಯ್ತಿ ಸಂಗಾಪುರ
author img

By

Published : Jun 15, 2023, 10:22 PM IST

ಪಿಡಿಒ ನಾಗೇಶ ಕುರಡಿ ಅವರು ಮಾತನಾಡಿದರು

ಗಂಗಾವತಿ (ಕೊಪ್ಪಳ): ಗ್ರಾಮದ ಪಕ್ಕದಲ್ಲೇ ತುಂಗಭದ್ರಾ ನದಿ ಹರಿಯುತ್ತಿದ್ದರೂ ಕುಡಿಯುವ ಹನಿ ನೀರಿಗೂ ಜನರು ಇಲ್ಲಿ ಪರದಾಡುತ್ತಿದ್ದಾರೆ. ಇಂಥ ಸನ್ನಿವೇಶ ಗಂಗಾವತಿ ತಾಲ್ಲೂಕಿನ ನದಿಪಾತ್ರದಲ್ಲಿನ ಹತ್ತಾರು ಗ್ರಾಮಗಳಲ್ಲಿ ಕಂಡುಬಂದಿದೆ. ಕುಡಿಯುವ ನೀರು ಪೂರೈಕೆಯಲ್ಲಿ ಕಳೆದ ಹಲವು ವಾರಗಳಿಂದ ಸಮಸ್ಯೆಯಾಗಿದೆ. ನಾಲ್ಕು ದಿನ ಅಥವಾ ವಾರಕ್ಕೆ ಎರಡು ಬಾರಿ ಮಾತ್ರ ನೀರು ಪೂರೈಕೆಯಾಗುತ್ತಿದ್ದು ಜನರಿಗೆ ನೀರಿನದ್ದೇ ದೊಡ್ಡ ಸಮಸ್ಯೆಯಾಗಿದೆ. ನಾಲ್ಕು ದಿನಕ್ಕೊಮ್ಮೆ ಪೂರೈಕೆಯಾಗುತ್ತಿರುವ ನೀರು ಹಿಡಿಯುವ ಉದ್ದೇಶಕ್ಕಾಗಿಯೇ ಜನ ಕೂಲಿ ಕೆಲಸ ಬಿಟ್ಟು ಮನೆಯಲ್ಲೇ ಇರಬೇಕಾದ ಸ್ಥಿತಿ ಇದೆ. ಗ್ರಾಮ ಪಂಚಾಯಿತಿ ಸಿಬ್ಬಂದಿ ಅಲಕ್ಷ್ಯದಿಂದಲೇ ಈ ಸಮಸ್ಯೆ ಸೃಷ್ಟಿಯಾಗಿದೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.

ಕೇವಲ ಸಂಗಾಪುರ ಮಾತ್ರವಲ್ಲ, ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಶ್ರೀರಂಗದೇವರಾಯಲು ನಗರ, ಸಿಂಗನಗುಂಡು, ವಿಪ್ರ, ಬಂಡಿಬಸಪ್ಪ ಕ್ಯಾಂಪ್, ಗೂಗಿಬಂಡೆ, ರಾಮದುರ್ಗ ಸಾಯಿನಗರದಂತಹ ಗ್ರಾಮಗಳಲ್ಲಿಯೂ ಕುಡಿಯುವ ನೀರಿಗೆ ಸಮಸ್ಯೆ ಇದೆ.

ಇದನ್ನೂ ಓದಿ: Gruha Lakshmi Scheme: ಮನೆ ಯಜಮಾನಿಗೆ 2 ಸಾವಿರ ರೂ. ಸಿಗುವುದು ಇನ್ನೂ ವಿಳಂಬ; ಗೃಹ ಲಕ್ಷ್ಮಿ ಯೋಜನೆ ನಾಲ್ಕೈದು ದಿನಕ್ಕೆ ಮುಂದೂಡಿದ ಸರ್ಕಾರ

ಕಳೆದ ಹದಿನೈದು ವರ್ಷದ ಹಿಂದೆ ಮಾಡಲಾಗಿದ್ದ ಪೈಪ್​ಲೈನ್​ ಅಲ್ಲಲ್ಲಿ ಒಡೆದು ಹೋಗಿದ್ದು, ಪಂಚಾಯಿತಿ ಸಿಬ್ಬಂದಿ ಅವುಗಳನ್ನು ಬದಲಿಸದೇ ಕೇವಲ ಪ್ಯಾಚ್ ಕೆಲಸ ಮಾಡಿ ತಾತ್ಕಾಲಿಕ ಶಮನ ಮಾಡುತ್ತಿದ್ದಾರೆ. ಸಮಸ್ಯೆ ಮರುಕಳಿಸಿ ಅಪಾರ ಪ್ರಮಾಣದ ನೀರು ಪೈಪ್ ಮೂಲಕ ಹೊರ ಹೋಗುತ್ತಿದೆ. ಹೀಗಾಗಿ ಸಂಗಾಪುರ ಪಂಚಾಯಿತಿ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿಗೆ ತೀವ್ರ ಸಮಸ್ಯೆ ಇದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಇದನ್ನೂ ಓದಿ: Congress Guarantee: ಜೂನ್​ನಿಂದಲೇ 10 ಕೆಜಿ ಅಕ್ಕಿ ನೀಡಿ, ಮಾತು ತಪ್ಪಿದರೆ ಜನರೊಂದಿಗೆ ಸೇರಿ ಪ್ರತಿಭಟನೆ: ಬೊಮ್ಮಾಯಿ ಎಚ್ಚರಿಕೆ

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಂಚಾಯಿತಿ ಪಿಡಿಒ ನಾಗೇಶ ಕುರಡಿ, "2007ರಲ್ಲಿ ಜಲನಿರ್ಮಲ ಯೋಜನೆಯಡಿ ನದಿಯಿಂದ ನೀರು ಪೂರೈಸುವ ಉದ್ದೇಶಕ್ಕೆ ಪೈಪ್​ಲೈನ್​ ಮಾಡಿ ಮೋಟರ್​ಗಳನ್ನು ಅಳವಡಿಸಲಾಗಿತ್ತು. ಹಳೆಯದಾದ ಕಾರಣಕ್ಕೆ ಪೈಪ್ ಒಡೆಯುತ್ತಿವೆ. ಮೋಟರ್​ಗಳು ಕೈಕೊಡುತ್ತಿವೆ".

ಇದನ್ನೂ ಓದಿ: Electricity price hike: ವಿದ್ಯುತ್ ದರ ಏರಿಕೆ ವಿರೋಧಿಸಿ ಪ್ರತಿಭಟನೆ: ಶಿವಮೊಗ್ಗದಲ್ಲಿ ಸಂಸದ ಬಿ ವೈ ರಾಘವೇಂದ್ರ ಸೇರಿ ಕಾರ್ಯಕರ್ತರು ಪೊಲೀಸ್​ ವಶ

"ಹೀಗಾಗಿ ಕುಡಿಯುವ ನೀರಿನ ಪರ್ಯಾಯ ವ್ಯವಸ್ಥೆಗಾಗಿ ರೈತರು, ಸಮಾಜಸೇವಕರು ಹಾಗೂ ಪಂಚಾಯಿತಿಯಿಂದ ಟ್ಯಾಂಕರ್ ವ್ಯವಸ್ಥೆ ಮಾಡಲಾಗುತ್ತಿದೆ. ಆದಷ್ಟು ಬೇಗ ಸಮಸ್ಯೆಗೆ ಪರಿಹಾರ ಕಲ್ಪಿಸಲಾಗುವುದು. ಮೇಲಾಧಿಕಾರಿಗಳ ಗಮನಕ್ಕೂ ತರಲಾಗಿದೆ" ಎಂದರು.

ಇದನ್ನೂ ಓದಿ: Water problem: 'ದೋ ಅಬ್ ನಗರ' ಖ್ಯಾತಿಯ ರಾಯಚೂರಿನಲ್ಲಿ ಶುದ್ಧ ಕುಡಿಯುವ ನೀರಿನ ಬವಣೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.