ETV Bharat / state

DAP ಹೆಸರಿನಲ್ಲಿ ಸಾವಯವ ಗೊಬ್ಬರ ಮಾರಾಟ: ಕೃಷಿ ಇಲಾಖೆ ಜಾಗೃತ ದಳದಿಂದ ದಾಳಿ - ಕುಷ್ಟಗಿಯಲ್ಲಿ ಅಕ್ರಮ ಮಾರಾಟ ಜಾಲ ಪತ್ತೆ

ಅಂಗಡಿಯ ಹೆಸರಿನಲ್ಲಿ ಬಿಲ್​ ನೀಡದೇ, ಸಾವಯವ ಗೊಬ್ಬರವನ್ನೇ ಡಿಎಪಿ ಗೊಬ್ಬರ ಎಂದು ಮಾರಾಟ ಮಾಡುತ್ತಿದ್ದ ಶ್ರೀ ಚಂದಾಲಿಂಗೇಶ್ವರ ಎಂಟರ್ ಪ್ರೈಸಸ್ ಮೇಲೆ ಕೃಷಿ ಇಲಾಖೆ ಜಾಗೃತ ದಳ ದಾಳಿ ನಡೆಸಿದೆ.

Department of Agriculture vigilante attack
DAP ಹೆಸರಿನಲ್ಲಿ ಸಾವಯವ ಗೊಬ್ಬರ ಮಾರಾಟ
author img

By

Published : May 23, 2022, 8:41 PM IST

ಕುಷ್ಟಗಿ(ಕೊಪ್ಪಳ): ಡಿಎಪಿ ಹೆಸರಿನಲ್ಲಿ ಸಾವಯವ ಗೊಬ್ಬರ ಮಾರಾಟ ಮಾಡಿ ರೈತರನ್ನು ವಂಚಿಸುತ್ತಿದ್ದ ರಸಗೊಬ್ಬರ ಹಾಗೂ ಕೀಟನಾಶಕ ಮಳಿಗೆಯ ಮೇಲೆ ಕೃಷಿ ಇಲಾಖೆ ಜಾಗೃತ ದಳ ದಾಳಿ ನಡೆಸಿ, 70 ಚೀಲಗಳನ್ನು ವಶಕ್ಕೆ ತೆಗೆದುಕೊಂಡಿದೆ. ಇಲ್ಲಿನ ಬಸವೇಶ್ವರ ವೃತ್ತದ ಶ್ರೀ ಚಂದಾಲಿಂಗೇಶ್ವರ ಎಂಟರ್ ಪ್ರೈಸಸ್ ಮಳಿಗೆ ಭೇಟಿ ನೀಡಿ ಕೃಷಿ ಇಲಾಖೆಯ ಜಾಗೃತ ದಳದ ತಂಡ ರಸ ಗೊಬ್ಬರ ಸ್ಟಾಕ್ ಪರಿಶೀಲನೆ ಮಾಡುತ್ತಿದ್ದಾಗ, ಈ ಪ್ರಕರಣ ಬೆಳಕಿಗೆ ಬಂದಿದೆ.

ಡಿಎಪಿ ಹೆಸರಿನಲ್ಲಿ ಸಾವಯವ ಗೊಬ್ಬರ ಮಾರಾಟ ಮಾಡಲಾಗುತ್ತಿತ್ತು. 50 ಕೆಜಿಯ ಪ್ರತೀ ಚೀಲಕ್ಕೆ 1350 ರೂ. ಇದೆ. ಆದರೆ ಇಲ್ಲಿ ಸಾವಯವ ಗೊಬ್ಬರವನ್ನು ಇದೇ ಡಿಎಪಿ ಎಂದು 800 ರೂ.ಗೆ ಮಾರಾಟ ಮಾಡಲಾಗುತ್ತಿತ್ತು. ಸಾವಯವ ಗೊಬ್ಬರ ಚೀಲದ ಮೇಲೆ 50 ಕೆ.ಜಿ.ಯ ಪ್ರತಿ ಚೀಲಕ್ಕೆ 1,200 ರೂ.ಎಂ.ಆರ್.ಪಿ. ನಮೂದಿಸಲಾಗಿದೆ. ಅಂಗಡಿಯ ಹೆಸರಿನಲ್ಲಿ ಬಿಲ್​ ಕೊಡದೇ ಮಾರಾಟ ಮಾಡಲಾಗುತ್ತಿತ್ತು. ಡಿಒಪಿ ಎಂದಿರುವುದನ್ನೇ ಡಿಎಪಿ ಎಂದು ಮಾರಾಟ ಮಾಡುತ್ತಿದ್ದರು. ಯಾವುದೇ ರೀತಿಯ ಬಿಲ್​ ದಾಖಲೆಗಳು ಪತ್ತೆಯಾಗಿಲ್ಲ ಎಂದು ಕೃಷಿ ಇಲಾಖೆ ಜಾಗೃತ ದಳದ ಸಹಾಯಕ ನಿರ್ದೇಶಕ ನಿಂಗಪ್ಪ ಮಾಹಿತಿ ನೀಡಿದ್ದಾರೆ.

ರೈತರನ್ನು ವಂಚಿಸಿದ ಪ್ರಕರಣದ ಹಿನ್ನೆಲೆಯಲ್ಲಿ ಶ್ರೀ ಚಂದಾಲಿಂಗೇಶ್ವರ ಎಂಟರ್ ಪ್ರೈಸಸ್ ವಿರುದ್ದ ಕ್ರಮ ಕೈಗೊಳ್ಳಲಾಗಿದೆ. ಈ ಪ್ರಕರಣದಲ್ಲಿ 50 ಕೆ.ಜಿಯ 70 ಚೀಲ ವಶಕ್ಕೆ ತೆಗೆದುಕೊಳ್ಳಲಾಗಿದ್ದು, ಇದರ ಮೌಲ್ಯ 89,600 ರೂ. ಅಂದಾಜಿಸಲಾಗಿದೆ. ಈ ದಾಳಿಯಲ್ಲಿ ಜಾಗೃತ ದಳದ ಸಹಾಯಕ ಕೃಷಿ ನಿರ್ದೇಶಕ ನಿಂಗಪ್ಪ, ಕುಮಾರಸ್ವಾಮಿ, ಕುಷ್ಟಗಿ ಸಹಾಯಕ ಕೃಷಿ ನಿರ್ದೇಶಕ ತಿಪ್ಪೇಸ್ವಾಮಿ, ಸಹಾಯಕ ಕೃಷಿ ಅಧಿಕಾರಿ ಪ್ರಮೋದ್ ಇದ್ದರು.

ಇದನ್ನೂ ಓದಿ:ನಾಡಗೀತೆ ತಿರುಚಿದ ರೋಹಿತ್ ಚಕ್ರತೀರ್ಥ ವಜಾಗೆ ಸಿದ್ದರಾಮಯ್ಯ ಆಗ್ರಹ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.