ETV Bharat / state

2ನೇ ಮದುವೆ ವಿಚಾರ ದಾಖಲೆ ಕೊಟ್ಟರೆ ಮಾತನಾಡುತ್ತೇನೆ: ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ - birth certificate

ಸಿಎಂ ವಿಚಾರವಾಗಿ ಜಮೀರ್ ಅಹ್ಮದ್ ಹೇಳಿಕೆ ವೈಯುಕ್ತಿಕ. ಪಕ್ಷದಲ್ಲಿ ಹೈಕಮಾಂಡ್​ ನಿರ್ಧಾರ ಪ್ರಮುಖ ​ಎಂದು ಮಾಜಿ ಶಾಸಕ‌ ವಿಜಯಾನಂದ ಕಾಶಪ್ಪನವರ್ ಕುಷ್ಟಗಿಯಲ್ಲಿ ಹೇಳಿದ್ದಾರೆ.

Second marriage issue reaction form Vijayanand Kashappanavar
ವಿಜಯಾನಂದ ಕಾಶಪ್ಪನವರ್
author img

By

Published : Jul 23, 2022, 7:19 PM IST

ಕುಷ್ಟಗಿ(ಕೊಪ್ಪಳ): ನನ್ನ ಎರಡನೇ ಮದುವೆ ಬಗ್ಗೆ ನನಗೆ ಗೊತ್ತಿಲ್ಲ. ನನಗೆ ದಾಖಲೆ ಕೊಡಿ, ದಾಖಲೆ ಕೊಟ್ಟರೆ ನಾನು ಮಾತನಾಡುತ್ತೇನೆ. ಇಲ್ಲದಿದ್ದರೆ ನಾನು ಇದಕ್ಕೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹುನಗುಂದ ಮಾಜಿ ಶಾಸಕ‌ ವಿಜಯಾನಂದ ಕಾಶಪ್ಪನವರ್ ಕುಷ್ಟಗಿಯಲ್ಲಿ ಕಾಂಗ್ರೆಸ್ ಮಾಜಿ ಶಾಸಕ ಹಸನಸಾಬ್ ದೋಟಿಹಾಳ‌ ಮಗನ ಮದುವೆಗೆ ಆಗಮಿಸಿದ್ದ ವೇಳೆ ಹೇಳಿಕೆ ನೀಡಿದ್ದಾರೆ.

ಎರಡನೇ ಮದುವೆ ವಿಚಾರ ದಾಖಲೆ ಕೊಟ್ರೇ ಮಾತಾಡ್ತೀನಿ

ಹೈಕಮಾಂಡ್ ತೀರ್ಮಾನ : ಸಿದ್ದು ಸಿಎಂ ಆಗಬೇಕು ಎಂದು ಜಮೀರ್ ಅಹ್ಮದ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಅದು ಅವರ ವೈಯುಕ್ತಿಕ ಹೇಳಿಕೆ. ನಾವೆಲ್ಲ ಪಕ್ಷದ ಸಿದ್ಧಾಂತದಲ್ಲಿ ಇದ್ದವರು. ವಿದ್ಯಾರ್ಥಿ ಕಾಂಗ್ರೆಸ್​ನಿಂದ ಪಕ್ಷದಲ್ಲಿದ್ದೇವೆ. ಮುಖ್ಯಮಂತ್ರಿ ‌ವಿಚಾರಕ್ಕೆ ನಮ್ಮ ಹೈಕಮಾಂಡ್ ನಿರ್ಧಾರಕ್ಕೆ ನಾವು ಬದ್ಧ. ಇದಕ್ಕೆಲ್ಲ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಇದ್ದಾರೆ, ಅವರು ತೀರ್ಮಾನ ಮಾಡುತ್ತಾರೆ ಎಂದರು.

ಇದನ್ನೂ ಓದಿ : ನಮ್ಮ ಪಕ್ಷದ ಬಾಹುಬಲಿ ಜಮೀರ್ ಅಹ್ಮದ್‌ಖಾನ್​​​​​: ಸತೀಶ ಜಾರಕಿಹೊಳಿ‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.