ಗಂಗಾವತಿ: ತಾಲೂಕಿನ ಢಣಾಪುರ ಗ್ರಾಮದ ವೃದ್ಧನಿಗೆ ಕೊರೊನಾ ಪಾಸಿಟಿವ್ ಕಂಡು ಬಂದ ಹಿನ್ನೆಲೆಯಲ್ಲಿ ಇಡೀ ಗ್ರಾಮವನ್ನು ಸೀಲ್ ಡೌನ್ ಮಾಡಲಾಗಿತ್ತು. ಆದರೆ ಇದೀಗ ಸೀಲ್ ಡೌನ್ ನಿಯಮವನ್ನು ನಿರ್ಲಕ್ಷಿಸಿ ಜನರು ಓಡಾಟ ಮಾಡುತ್ತಿರುವುದು ಕಂಡು ಬಂದಿದೆ.
ಗ್ರಾಮದ ಮುಖ್ಯರಸ್ತೆಗಳನ್ನು ಸಂಪರ್ಕಿಸುವ ಎಲ್ಲಾ ಪ್ರದೇಶವನ್ನು ಕಂದಾಯ, ಆರೋಗ್ಯ ಇಲಾಖೆಯ ಅಧಿಕಾರಿಗಳ ನಿರ್ದೇಶನದಂತೆ ಗ್ರಾಮ ಪಂಚಾಯತಿ ಅಧಿಕಾರಿಗಳು ಸೀಲ್‌ಡೌನ್ ಮಾಡಿದ್ದರು. ಜೊತೆಗೆ ಯಾರೂ ಕೂಡ ನಿಯಮ ಉಲ್ಲಂಘಿಸದಂತೆ, ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಇರುವಂತೆ ಸೂಚಿಸಿದ್ದರು.
ಆದರೆ ಈಗ ಜನರು ವಾಹನಗಳಲ್ಲಿ ಸೀಲ್ ಮಾಡಲಾಗಿದ್ದ, ರಸ್ತೆಗೆ ಮುಳ್ಳು ಬೇಲಿ ಹಾಕಿ ಮುಚ್ಚಲಾಗಿದ್ದ ಪ್ರದೇಶದಲ್ಲಿ ಮನಸೋಇಚ್ಛೆ ಓಡಾಡುತ್ತಾ, ಮುಳ್ಳು ಬೇಲಿಗೆ ರಂಧ್ರ ಕೊರೆದು ಬೇಜವಾಬ್ದಾರಿ ಪ್ರದರ್ಶಿಸುತ್ತಿದ್ದಾರೆ.