ಕುಷ್ಟಗಿ(ಕೊಪ್ಪಳ): ಪ್ರಸಕ್ತ ಜನವರಿಯಿಂದ ವಿದ್ಯಾಗಮ-2.0 ಹಾಗೂ ಎಸ್ಎಸ್ಎಲ್ಸಿ ತರಗತಿಗಳನ್ನು ಆರಂಭಿಸಿರುವುದು ಸಮುದಾಯದಲ್ಲಿ ಧನಾತ್ಮಕ ಬದಲಾವಣೆಗೆ ನಾಂದಿ ಹಾಡಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಚನ್ನಬಸಪ್ಪ ಮಗ್ಗದ್ ಹೇಳಿದರು.
ಈ ಕುರಿತು ಈಟಿವಿ ಭಾರತದ ಜೊತೆ ಮಾತನಾಡಿದ ಅವರು, ಜನವರಿ 1ರಿಂದ ವಿದ್ಯಾಗಮ-2.0 ಹಾಗೂ ಎಸ್ಎಸ್ಎಲ್ಸಿ ತರಗತಿಗಳು ಆರಂಭವಾಗಿರುವುದು ಸಾರ್ವಜನಿಕವಾಗಿ ಧನಾತ್ಮಕ ಬದಲಾವಣೆ ತಂದಿದೆ. ಜ. 1ರಂದು 20 ಶಾಲೆಗಳಿಗೆ ಭೇಟಿ ನೀಡಿದ್ದು, ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಆರಂಭದ ದಿನ ಶೇ. 22ರಷ್ಟಿದ್ದ ಮಕ್ಕಳ ಸಂಖ್ಯೆ ಜ. 2ರಂದು ಶೇ. 36ಕ್ಕೆ ಏರಿಕೆ ಕಂಡಿದೆ.
ಓದಿ-ಕುಡಿಯಲು ಹಣ ಕೊಡದ ಅಜ್ಜಿಯನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ಮೊಮ್ಮಗ
ವಿದ್ಯಾಗಮ 2.0 ಹಾಗೂ 10ನೇ ತರಗತಿ ಆರಂಭಿಸಲಾಗಿದ್ದು, ಈ ಹಂತದಲ್ಲಿ ಶಿಕ್ಷಕರು ಮಕ್ಕಳಲ್ಲಿ ಮಾನಸಿಕ ಸ್ಥೈರ್ಯ ತುಂಬಲು ಸೂಚಿಸಲಾಗಿದೆ. ಮೊದಲ ದಿನವೇ ಮಕ್ಕಳು ಖುಷಿಯಿಂದ ಹುಮ್ಮಸ್ಸಿನಿಂದ ಶಾಲೆಗೆ ಆಗಮಿಸಿದ್ದಾರೆ. ಈ ಮಕ್ಕಳನ್ನು ಸಂಭ್ರಮದಿಂದ ಬರಮಾಡಿಕೊಂಡಿದ್ದೇವೆ. ಕೋವಿಡ್ ಮಾರ್ಗಸೂಚಿಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಹಾಗೂ ಪಾಲಕರಲ್ಲಿ ತಿಳಿಹೇಳಲಾಗಿದೆ. ಪಾಲಕರು ಶಾಲೆಗೆ ಆಗಮಿಸಿ ಕೋವಿಡ್ ಜಾಗೃತ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶಾಲೆಗಳು ಆರಂಭವಾಗಿರುವುದು ಮಕ್ಕಳು, ಪಾಲಕರು, ಜನಪ್ರತಿನಿಧಿಗಳು ಹಾಗೂ ಸಮುದಾಯದಲ್ಲಿ ಧನಾತ್ಮಕ ಬದಲಾವಣೆಯಾಗಿದೆ ಎಂದರು.