ETV Bharat / state

ನೀರಾವರಿ ಯೋಜನೆಗೆ ಕಾಂಗ್ರೆಸ್, ಸಮ್ಮಿಶ್ರ ಸರ್ಕಾರ ನಯಾ ಪೈಸೆ ಕೊಟ್ಟಿಲ್ಲ : ಕರಡಿ ಸಂಗಣ್ಣ ಆರೋಪ - MP sanganna karadi

ಜಗದೀಶ ಶೆಟ್ಟರ್​ ಸಿಎಂ ಆಗಿದ್ದ ಸಂದರ್ಭದಲ್ಲಿ ಈ ಭಾಗದ ನೀರಾವರಿಗೆ ಅಡಿಗಲ್ಲು ನೆರವೇರಿಸಿ 1,300 ಕೋಟಿ ರೂ. ಈ ಅನುದಾನ ಬಿಡುಗಡೆಗೊಳಿಸಿ ಕಾಮಗಾರಿ ಆರಂಭಿಸಿದ್ದರು..

dsd
ಕರಡಿ ಸಂಗಣ್ಣ ಮಾತು
author img

By

Published : Dec 7, 2020, 10:07 AM IST

ಕುಷ್ಟಗಿ(ಕೊಪ್ಪಳ) : ಬಿಜೆಪಿ ಅನುಷ್ಠಾನಗೊಳಿಸಿದ್ದ ಕೃಷ್ಣಾ ಬಿಸ್ಕೀಂ ಏತ ನೀರಾವರಿ ಯೋಜನೆಯ ಕಾರ್ಯಗತವಗಲು ಬಿಜೆಪಿ ಸರ್ಕಾರ ಬರಬೇಕಾಯ್ತು. ಹಿಂದಿನ ಕಾಂಗ್ರೆಸ್ ಸರ್ಕಾರ ಹಾಗೂ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಪೈಸೆ ಅನುದಾನ ನೀಡಿಲ್ಲ ಎಂದು ಸಂಸದ ಕರಡಿ ಸಂಗಣ್ಣ ಹೇಳಿದ್ದಾರೆ.

ಸಂಸದ ಕರಡಿ ಸಂಗಣ್ಣ ಮಾತು

ಗ್ರಾಮ ಸ್ವರಾಜ್ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಅರ್ಧಕ್ಕೆ ನಿಂತಿದ್ದ ಯೋಜನೆ ಮುಂದುವರಿಯಲು ಮತ್ತೆ ಬಿಜೆಪಿ ಸರ್ಕಾರ ಬರಬೇಕಾಯಿತು. ಜಗದೀಶ ಶೆಟ್ಟರ್​ ಸಿಎಂ ಆಗಿದ್ದ ಸಂದರ್ಭದಲ್ಲಿ ಈ ಭಾಗದ ನೀರಾವರಿಗೆ ಅಡಿಗಲ್ಲು ನೆರವೇರಿಸಿ 1,300 ಕೋಟಿ ರೂ. ಈ ಅನುದಾನ ಬಿಡುಗಡೆಗೊಳಿಸಿ ಕಾಮಗಾರಿ ಆರಂಭಿಸಿದ್ದರು. ಆಗ ಈ ಯೋಜನೆ ಬಗ್ಗೆ ಹಿಂದಿನ ಯಲಬುರ್ಗಾ ಶಾಸಕ ಬಸವರಾಜ್ ರಾಯರಡ್ಡಿ ಅಡ್ಡಗಾಲು ಹಾಕಿದರು.

ಈ ಭಾಗಕ್ಕೆ ಈ ನೀರಾವರಿ ಯೋಜನೆ ಅಸಾಧ್ಯ ಎಂದಿದ್ದ ಕಾಂಗ್ರೆಸ್ ನಾಯಕರು, ಹಿಂದಿನ ಸಿಎಂ ಸಿದ್ದರಾಮಯ್ಯ ಜಿಲ್ಲೆಯಲ್ಲಿ ರಾಜ್ಯ ಮಟ್ಟದ ರೈತ ಫಲಾನುಭವಿಗಳ ಸಮಾವೇಶದಲ್ಲಿ ಭಾಗಿಯಾಗಿದ್ದರು. ಆ ಸಮಯದಲ್ಲಿ ಈ ಭಾಗದ ಶಾಸಕರು ದುಂಬಾಲು ಬಿದ್ದು ಈ ಯೋಜನೆಯ ಮುಂದುವರಿದ ಕಾಮಗಾರಿಗೆ 2,600 ಕೋಟಿ ರೂ. ಅನುದಾನವನ್ನು ಸಿದ್ದರಾಮಯ್ಯರಿಂದ ಘೋಷಿಸಿದ್ದರು. ನಂತರ ಪೈಸೆ ಅನುದಾನ ಕೊಡಿಸಲಾಗದ ಇಂತಹ ನಾಯಕತ್ವ ಇವರಿಗೆ ಬೇಕಾ ಎಂದು ಪ್ರಶ್ನಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.