ಕೊಪ್ಪಳ: ನಗರದ ಕಿನ್ನಾಳ ರಸ್ತೆಯಲ್ಲಿರುವ ರೈಲ್ವೆ ಸೇತುವೆ ಕೆಳಗೆ ಸದಾ ನೀರು ಲೀಕೇಜ್ ಆಗುತ್ತಿದ್ದು, ಪ್ರಯಾಣಿಕರು ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ.
ಮಳೆಯಾದಾಗ ನೀರು ನಿಲ್ಲೋದು ಸಹಜವಾದರೂ ಮಳೆ ಇಲ್ಲದೇ ಇದ್ದರೂ ಸಹ ಇಲ್ಲಿ ನೀರು ನಿಲ್ಲುತ್ತಿದೆ. ಈ ರಸ್ತೆಯ ಮೂಲಕ ನಿತ್ಯವೂ ಸಾವಿರಾರು ವಾಹನಗಳು ಓಡಾಡುತ್ತವೆ. ಸೇತುವೆಯ ಕೆಳಗೆ ನೀರು ನಿಲ್ಲುತ್ತಿರವುದರಿಂದ ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ.
ಸೇತುವೆಯ ಕೆಳಗೆ ನಿಲ್ಲುವ ಈ ನೀರು ಎಲ್ಲಿಂದ ಬರುತ್ತದೆ ಎಂಬುದು ತಿಳಿಯುತ್ತಿಲ್ಲ. ಇದು ಚರಂಡಿಯ ನೀರೋ ಅಥವಾ ಕುಡಿಯುವ ನೀರಿನ ಪೈಪ್ ಲೀಕೇಜ್ನಿಂದ ಬರುತ್ತಿದೆಯೋ ಎಂಬುದು ತಿಳಿಯುತ್ತಿಲ್ಲ. ಯಾವಾಲೂ ನೀರು ನಿಲ್ಲುವುದರಿಂದ ಸೇತುವೆಯ ಕಳಗಿನ ರಸ್ತೆ ಸಂಪೂರ್ಣ ಹಾಳಾಗಿದೆ. ಅಲ್ಲಲ್ಲಿ ಗುಂಡಿಗಳು ಬಿದ್ದಿರುವುದರಿಂದ ವಾಹನ ಸವಾರರು ತುಂಬಾ ಕಷ್ಟ ಪಡುವಂತಾಗಿದೆ. ಸಂಬಂದಪಟ್ಟ ಅಧಿಕಾರಿಗಳು ಕಂಡೂ ಕಾಣದಂತೆ ಕುಳಿತಿರೋದಕ್ಕೆ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.