ಗಂಗಾವತಿ: ಬೆಂಗಳೂರಿನ ಯಶವಂತಪುರ ಮಾರುಕಟ್ಟೆ ಬಿಟ್ಟರೆ ಅತಿ ಹೆಚ್ಚು ಆದಾಯ ಹೊಂದಿದ ಎಪಿಎಂಸಿ ಎಂದು ಹೆಸರು ಮಾಡಿದ್ದ ಗಂಗಾವತಿಯ ಎಪಿಎಂಸಿ ಇದೀಗ ಸರ್ಕಾರದ ನಿರ್ಧಾರದಿಂದಾಗಿ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದೆ.
ಈಗಾಗಲೇ ಕಾರಟಗಿ ವಿಶೇಷ ಎಪಿಎಂಸಿ ವಿಭಜನೆಯಾದ ಬಳಿಕ ಇರುವ ಅಲ್ಪ ಆದಾಯದಲ್ಲಿಯೇ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುತ್ತಿದ್ದ ಎಪಿಎಂಸಿಗೆ ಇದೀಗ ಸರ್ಕಾರ, ಎಪಿಎಂಸಿಯ ಮುಖ್ಯ, ಉಪ ಮತ್ತು ಪ್ರಾಂಗಣದಲ್ಲಿನ ತೆರಿಗೆ ಬಿಟ್ಟರೆ ಬೇರೆ ಯಾವುದೇ (ಆರ್ ಎಂಸಿ) ತೆರಿಗೆ ಸಂಗ್ರಹಿಸದಂತೆ ಆದೇಶ ನೀಡಿದೆ.
ಓದಿ:ಗಂಗಾವತಿಯಲ್ಲಿ ಸಾಮಾಜಿಕ ಅಂತರ ಗಾಳಿಗೆ ತೂರಿ ಮೀನು ಖರೀದಿಗೆ ಮುಗಿಬಿದ್ದ ಜನ
ರಾಜ್ಯ ಸರ್ಕಾರ ಕೈಗೊಂಡ ಈ ನಿರ್ಧಾರದಿಂದಾಗಿ ಇಲ್ಲಿನ ಎಪಿಎಂಸಿಯ ಆದಾಯದ ಮೇಲೆ ಭಾರೀ ಹೊಡೆತ ಬಿದ್ದಿದ್ದು, ಅಭಿವೃದ್ಧಿ ಕಾರ್ಯಗಳಿಗೆ ಇನ್ನು ಕೇವಲ ಸರ್ಕಾರದ ಅನುದಾನದ ಮೇಲೆಯೇ ಅವಲಂಭಿಸುವಂತಾಗಿದೆ. ಪ್ರತಿ ವರ್ಷ ಸುಮಾರು ಒಂದು ಕೋಟಿ ಮೊತ್ತದಷ್ಟು ತೆರಿಗೆಯನ್ನು ಇಲ್ಲಿನ ಎಪಿಎಂಸಿ ಸಂಗ್ರಹಿಸುತ್ತಿತ್ತು.