ಕೊಪ್ಪಳ : ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ನಿವೃತ್ತ ಶಿಕ್ಷಕರೊಬ್ಬರು ಇಂದು ಸಿಎಂ ಪರಿಹಾರ ನಿಧಿಗೆ ₹ 2 ಲಕ್ಷ ನೀಡುವ ಮೂಲಕ ಉದಾರತೆ ಮೆರೆದರು.
ಯಲಬುರ್ಗಾ ತಾಲೂಕಿನ ಗೆದಗೇರಿ ಗ್ರಾಮದಲ್ಲಿ ವಾಸವಾಗಿರುವ ನಿವೃತ್ತ ಶಿಕ್ಷಕ ನೂರಂದಪ್ಪ ಅವರು ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಇಲಾಖೆ ಸಚಿವ ಕೆ ಎಸ್ ಈಶ್ವರಪ್ಪ ಅವರಿಗೆ ಸಂಜೆ ಎರಡು ಲಕ್ಷದ ಚೆಕ್‌ನ ಹಸ್ತಾಂತರಿಸಿದರು. ಅಲ್ಲದೆ ಕುಕನೂರಿನಲ್ಲಿರುವ ಗುರುಕುಲಕ್ಕೂ ₹1 ಲಕ್ಷ ಚೆಕ್‌ನ ಇದೇ ಸಂದರ್ಭದಲ್ಲಿ ಆ ಸಂಸ್ಥೆಯವರಿಗೆ ನೂರಂದಪ್ಪ ಅವರು ನೀಡಿದರು.
ಈಗಾಗಲೇ ಪಿಎಂ ಕೇರ್ಸ್ಗೆ ಎರಡು ಲಕ್ಷ ರುಪಾಯಿ ದೇಣಿಗೆ ಸಲ್ಲಿಸಿರುವ ನೂರಂದಪ್ಪ ಅವರು, ಈಗ ಸಿಎಂ ಪರಿಹಾರ ನಿಧಿಗೂ 2 ಲಕ್ಷ ರೂಪಾಯಿ ನೆರವು ನೀಡುವ ಮೂಲಕ ಮಾದರಿಯಾಗಿದ್ದಾರೆ. ಇಳಿವಯಸ್ಸಿನಲ್ಲಿಯೂ ಇಂತಹ ಸೇವಾ ಮನೋಭಾವ ಹೊಂದಿರುವ ನೂರಂದಪ್ಪಗೆ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.