ಕೊಪ್ಪಳ : ಖಾಸಗಿ ವಿದ್ಯುತ್ ಕಂಪನಿಯೊಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ನಿವೃತ್ತ ಸೈನಿಕನ ಮೇಲೆ ಹಲ್ಲೆ ನಡೆಸಿರುವ ಘಟನೆ ಕುಷ್ಟಗಿ ತಾಲೂಕಿನ ಕೆಸೂರು ಗ್ರಾಮದಲ್ಲಿ ನಡೆದಿದೆ. ಘಟನೆ ಸಂಬಂಧ ದೋಟಿಹಾಳ ಗ್ರಾಮದ ಮೈನುದ್ದೀನ್ ಸಾಬ್ ಹಿರೇಮನಿ ಎಂಬುವರ ಮೇಲೆ ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಖಾಸಗಿ ಕಂಪನಿಯಲ್ಲಿ ಮ್ಯಾನೇಜರ್ ಆಗಿರುವ ನಿವೃತ್ತ ಸೈನಿಕ ಮಹಮ್ಮದ್ ರಫೀ ಅವರ ಮೇಲೆ ಹಲ್ಲೆ ನಡೆದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ : ಪುನೀತ್ ಭಾವಚಿತ್ರ ನೀಡಿ ಯೋಧನಿಗೆ ಆತ್ಮೀಯ ಬೀಳ್ಕೊಡುಗೆ ನೀಡಿದ ಗ್ರಾಮಸ್ಥರು