ETV Bharat / state

ಕಾಶ್ಮೀರದಿಂದ ಕನ್ಯಾಕುಮಾರಿಗೆ ಸೈಕಲ್ ಯಾತ್ರೆ: ರಾಜಸ್ಥಾನದ ನರ್ಪತ್​​ಗೆ ಗಂಗಾವತಿಯಲ್ಲಿ ಸನ್ಮಾನ

author img

By

Published : Dec 22, 2021, 5:37 PM IST

ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಗುರಿ ಹೊಂದಿರುವ ರಾಜಸ್ಥಾನದ ನರ್ಪತ್ ಸಿಂಗ್ ಇಂದು (ಬುಧವಾರ) ಗಂಗಾವತಿಗೆ ಬಂದಿದ್ದಾನೆ. ಈತ ಹೋದ ಊರುಗಳಲ್ಲಿ ಒಂದೊಂದು ಗಿಡ ನೆಟ್ಟು ಕಾಡಿನ ಬಗ್ಗೆ ಜತೆಗೆ ಇತ್ತೀಚಿನ ದಿನಗಳಲ್ಲಿ ಪರಿಸರದಲ್ಲಿ ಆಗುತ್ತಿರುವ ಕೆಟ್ಟ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.

Rajasthan youth cycling for environmental awareness
ರಾಜಸ್ಥಾನದ ನರ್ಪತ್​​ಗೆ ಗಂಗಾವತಿಯಲ್ಲಿ ಸನ್ಮಾನ

ಗಂಗಾವತಿ: ಪರಿಸರ ರಕ್ಷಣೆ ಹಾಗೂ ಜನ ಜಾಗೃತಿಗಾಗಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಸೈಕಲ್ ಯಾತ್ರೆ ಕೈಗೊಂಡ ರಾಜಸ್ಥಾನದ ಮೂಲದ ಯುವಕನಿಗೆ ತಾಲೂಕಿನ ಶ್ರೀರಾಮನಗರದಲ್ಲಿ ಗ್ರೀನ್ ಫೋರ್ಸ್ ತಂಡದ ಸದಸ್ಯರು ಸನ್ಮಾನಿಸಿದ್ದಾರೆ.

ಸಸಿ ನೆಟ್ಟು ಪರಿಸರ ಜಾಗೃತಿ

ರಾಜಸ್ಥಾನದ ಮೂಲದ ನರ್ಪತ್ ಸಿಂಗ್ ಎಂಬ 34 ವರ್ಷದ ಯುವಕ, ಕಾಶ್ಮೀರದಿಂದ 2019ರ ಜ.27ರಂದು ಸೈಕಲ್ ಯಾತ್ರೆ ಆರಂಭಿಸಿದ್ದಾರೆ. ಒಟ್ಟು 50 ಸಾವಿರ ಕಿ.ಮೀ ಗುರಿ ಹೊಂದಿರುವ ಈತ ಈಗಾಗಲೇ 30 ಸಾವಿರ ಕಿ.ಮೀ ಪೂರ್ಣಗೊಳಿಸಿದ್ದಾರೆ.

ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ 3,236 ಕಿ.ಮೀ ಅಂತರವಿದೆ. ಆದರೆ, ಈ ಯುವಕ ನಾನಾ ರಾಜ್ಯಗಳಲ್ಲಿ ಸಂಚರಿಸುವ ಮೂಲಕ ಒಟ್ಟು 50 ಸಾವಿರ ಕಿ.ಮೀ ಪ್ರಯಾಣಿಸಬೇಕು ಎಂಬ ಗುರಿ ಹೊಂದಿದ್ದಾರೆ.

ಈಗಾಗಲೇ 15 ರಾಜ್ಯಗಳು, 4 ಕೇಂದ್ರಾಡಳಿತ ಪ್ರದೇಶಗಳ ಮೂಲಕ ಸಂಚರಿಸಿ ಬಂದಿರುವ ಈತ ತಮ್ಮ ಪ್ರಯಾಣದುದ್ದಕ್ಕೂ 19 ಸಾವಿರ ಸಸಿಗಳನ್ನು ನೆಟ್ಟಿದ್ದಾಗಿ ಹೇಳಿದರು.

ಇದನ್ನೂ ಓದಿ: ಪರಿಸರ ಜಾಗೃತಿಗೆ ಸೈಕಲ್‌ ಯಾತ್ರೆ: ಗದಗದಲ್ಲಿ ರಾಜಸ್ಥಾನದ ನರ್ಪತ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.