ಕೊಪ್ಪಳ: ಬೆಳಗ್ಗೆ 10 ಗಂಟೆಯ ನಂತರ ಮಾರ್ಕೆಟ್ ಬಂದ್ ಮಾಡಿಸಲು ಹೋದ ಪೊಲೀಸರೊಂದಿಗೆ ವ್ಯಾಪಾರಿಗಳು ವಾಗ್ವಾದಕ್ಕಿಳಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ನಗರದ ಜೆಪಿ ಮಾರ್ಕೆಟ್ನಲ್ಲಿ ತರಕಾರಿ ವ್ಯಾಪಾರಿಗಳು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದೆ. ಕೊರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ಜಾರಿಯಲ್ಲಿರುವ ಲಾಕ್ಡೌನ್ ವೇಳೆಯಲ್ಲಿ ಅಗತ್ಯ ವಸ್ತುಗಳ ಅಂಗಡಿಗಳನ್ನು ಬೆಳಗ್ಗೆ 10 ಗಂಟೆಯವರೆಗೆ ತೆರೆಯಲು ಅವಕಾಶ ನೀಡಲಾಗಿದೆ. ಹಾಗಾಗಿ ಪೊಲೀಸರು 10 ಗಂಟೆಯ ನಂತರ ತರಕಾರಿ ಮಾರುಕಟ್ಟೆಯಲ್ಲಿ ಅಂಗಡಿಗಳನ್ನು ಬಂದ್ ಮಾಡಿಸುತ್ತಿದ್ದರು.
ಈ ಸಂದರ್ಭದಲ್ಲಿ ತರಕಾರಿ ವ್ಯಾಪಾರಿಯೊಬ್ಬ ನಮ್ಮದೊಂದೇ ಅಂಗಡಿ ಕಾಣತ್ತಾ ನಿಮಗೆ? ಎಲ್ಲಾ ಬಂದ್ ಮಾಡಿಸಿ ಎಂದು ಪೊಲೀಸರಿಗೆ ಆವಾಜ್ ಹಾಕಿದ್ದಾನೆ.