ಗಂಗಾವತಿ: ತಾಲೂಕಿನ ಐತಿಹಾಸಿಕ ಧಾರ್ಮಿಕ ಪುಣ್ಯ ತಾಣ ಅಂಜನಾದ್ರಿಯ ಹನುಮಂತನ ಸನ್ನಿಧಿಗೆ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
![puneeth rajkumar visit to anjanadri temple](https://etvbharatimages.akamaized.net/etvbharat/prod-images/kn-gvt-1-22-power-star-punith-visit-anjanadri-vis-kac10005_22102020130100_2210f_1603351860_1103.jpg)
ಚಿತ್ರೀಕರಣದ ಹಿನ್ನೆಲೆಯಲ್ಲಿ ಗಂಗಾವತಿಗೆ ಬಂದಿರುವ ದೊಡ್ಮನೆ ಹುಡುಗ ಅಂಜನಾದ್ರಿ ಬೆಟ್ಟ ಹತ್ತಿ, ಆಂಜನೇಯನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಬೆಟ್ಟದ ಮೇಲಿನ ನಯನ ಮನೋಹರ ದೃಶ್ಯಗಳನ್ನು ಕಣ್ತುಂಬಿಕೊಂಡರು. ಈ ಸಂದರ್ಭದಲ್ಲಿ ಅಪ್ಪು ಅಭಿಮಾನಿಗಳ ದಂಡೇ ಅಲ್ಲಿ ನೆರೆದಿತ್ತು. ಪುನೀತ್ ರಾಜ್ಕುಮಾರ್ ಅಭಿನಯಿಸುತ್ತಿರುವ ಬಹುನಿರೀಕ್ಷಿತ ಚಲನಚಿತ್ರ 'ಜೇಮ್ಸ್' ಚಿತ್ರೀಕರಣ ಈ ಭಾಗದಲ್ಲಿ ನಡೆಯುತ್ತಿದೆ.
![puneeth rajkumar visit to anjanadri temple](https://etvbharatimages.akamaized.net/etvbharat/prod-images/kn-gvt-1-22-power-star-punith-visit-anjanadri-vis-kac10005_22102020130100_2210f_1603351860_352.jpg)
![puneeth rajkumar visit to anjanadri temple](https://etvbharatimages.akamaized.net/etvbharat/prod-images/kn-gvt-1-22-power-star-punith-visit-anjanadri-vis-kac10005_22102020130100_2210f_1603351860_436.jpg)
ಐತಿಹಾಸಿಕ ಪ್ರಸಿದ್ಧಿ ಪಡೆದ ಗಂಗಾವತಿ ನಗರವು ಹಲವು ಕನ್ನಡ ಚಿತ್ರಗಳ ಚಿತ್ರೀಕರಣಕ್ಕೆ ಸಾಕ್ಷಿಯಾಗಿದೆ. ಪುನೀತ್ ರಾಜ್ಕುಮಾರ್ ನಟಿಸಿರುವ ರಣವಿಕ್ರಮ ಸಿನಿಮಾದ ಶೂಟಿಂಗ್ ಕೂಡ ಇಲ್ಲೇ ನಡೆದಿತ್ತು. ಶೂಟಿಂಗ್ ವೇಳೆ ಬಿಡುವು ಮಾಡಿಕೊಂಡ ಪುನೀತ್ ಎರಡನೇ ಬಾರಿಗೆ ಅಂಜನಾದ್ರಿಗೆ ಬೆಟ್ಟಕ್ಕೆ ಭೇಟಿ ನೀಡಿದ್ದಾರೆ.
![puneeth rajkumar visit to anjanadri temple](https://etvbharatimages.akamaized.net/etvbharat/prod-images/kn-gvt-1-22-power-star-punith-visit-anjanadri-vis-kac10005_22102020130100_2210f_1603351860_826.jpg)