ಕುಷ್ಟಗಿ (ಕೊಪ್ಪಳ): ತಾಲೂಕಿನ ಕ್ಯಾದಿಗುಪ್ಪ ಬಳಿ ಕಳಪೆ ಡಾಂಬರೀಕರಣ ಕಾಮಗಾರಿಯಿಂದ ರಸ್ತೆ ಕೆಲವೇ ದಿನದಲ್ಲಿ ಕಿತ್ತು ಹೋಗಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಕ್ಯಾದಿಗುಪ್ಪ ಬಳಿ ಕಬ್ಬೇರ್ ಫೂಲ್ನಿಂದ ಜೋಗಿ ಫೂಲ್ ವರೆಗೆ ಕಾಮಗಾರಿ ನಡೆದಿದೆ. ಕಳಪೆ ಗುಣಮಟ್ಟದ ಕಾಮಗಾರಿಯಿಂದ ರಸ್ತೆಯು ಮತ್ತಷ್ಟು ಕಿತ್ತು ಹೋಗಿದ್ದು, ಸಂಚಾರಕ್ಕೆ ತೊಂದರೆಯಾಗುತ್ತಿದೆ.
ಕೆಲವು ದಿನಗಳ ಹಿಂದೆ ಹಾಕಿದ್ದ ಡಾಂಬರ್ ಕಿತ್ತು ಹೋಗಿದ್ದು, ಇದಕ್ಕೆ ಲಕ್ಷಾಂತರ ರೂ.ಗಳನ್ನು ವ್ಯಯ ಮಾಡಲಾಗಿದೆ. ಅಧಿಕಾರಿಗಳು ಕಾಟಾಚಾರಕ್ಕೆ ಕೆಲಸ ಮಾಡಿ ಸರ್ಕಾರದ ಅನುದಾನ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಗ್ರಾಮದ ಹನುಮಂತಪ್ಪ ಕ್ಯಾದಿಗುಪ್ಪ ಆರೋಪಿಸಿದ್ದಾರೆ.