ಕುಷ್ಟಗಿ (ಕೊಪ್ಪಳ): ಕೊರೊನಾ ವೈರಸ್ ಬಗ್ಗೆ ಮುನ್ನೆಚ್ಚರಿಕೆ ವಹಿಸದೆ ನಿರ್ಲಕ್ಷ್ಯ ಮಾಡಿದರೆ ಮುಗಿಯಿತು ಕಥೆ ಎಂದು ಪಿಎಸೈ ಚಿತ್ತರಂಜನ್ ನಾಯಕ್ ಜನರಲ್ಲಿ ಜಾಗೃತಿ ಮೂಡಿಸಿದರು.
ತಾಲೂಕಿನ ಕೊರೊನಾ ಸೋಂಕಿತ ವ್ಯಕ್ತಿ ಜೊತೆ 9 ಜನ ಸಂತ ಶಿಶುನಾಳ ಷರೀಫ ಕಾಲೋನಿಯ ನಿವಾಸಿಗಳನ್ನು ಸಾಂಸ್ಥಿಕ ಕ್ವಾರಂಟೈನ್ ಮಾಡಿದ ಹಿನ್ನೆಲೆಯಲ್ಲಿ ಕಾಲೋನಿಯ ಜನರಿಗೆ ಕೊರೊನಾ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೊರೊನಾ ನಿರ್ಲಕ್ಷ್ಯದಿಂದ ತಂದೆ, ತಾಯಿ ಹಾಗೂ ಮಕ್ಕಳಿಗೆ ಕೊರೊನಾ ವೈರಸ್ ರೋಗ ಅಂಟಿಸಿದ ಪಾಪಕ್ಕೆ ಗುರಿಯಾಗಿರುವಿರಿ ಎಂದರು.
ಇನ್ನು ಪ್ರತೀ ಬಾರಿ ಸೋಪಿನಿಂದ ಕೈ ತೊಳೆಯಿರಿ. ಸಾಮಾಜಿಕ ಅಂತರ ಮರೆಯದಿರಿ. ಮಾಸ್ಕ್ ಧರಿಸದೇ ಹೊರಗೆ ಬರಬೇಡಿ ಎಂದರು. ಸರ್ಕಾರ ಕಾಳಜಿ ವಹಿಸುತ್ತದೆ ಎಂದು ನಿರ್ಲಕ್ಷಿಸದೇ ಹೆಜ್ಜೆ ಹೆಜ್ಜೆಗೂ ಎಚ್ಚರ ವಹಿಸಿರಿ ಎಂದರು.
ಈ ಸಂದರ್ಭದಲ್ಲಿ ಪುರಸಭಾ ಮುಖ್ಯಾಧಿಕಾರಿ ಅಶೋಕ್ ಪಾಟೀಲ, ಪುರಸಭೆ ಸದಸ್ಯ ವಸಂತ ಮೇಲಿನಮನಿ, ಕಿಶೋರ್ ಹಿರೇಮಠ, ನೈರ್ಮಲ್ಯ ಅಧಿಕಾರಿ ಮಹೇಶ ಅಂಗಡಿ, ಹುಲ್ಲಪ್ಪ ಮತ್ತಿತರರು ಇದ್ದರು.