ETV Bharat / state

ಇಂಜಿನಿಯರಿಂಗ್ ವಿದ್ಯಾರ್ಥಿನಿಯ ಅನುಮಾನಾಸ್ಪದ ಸಾವು.. ಕೊಪ್ಪಳ, ರಾಯಚೂರಿನಲ್ಲಿ ಪ್ರತಿಭಟನೆ - undefined

ರಾಯಚೂರಿನ ಇಂಜಿನಿಯರಿಂಗ್​ ಕಾಲೇಜು ವಿದ್ಯಾರ್ಥಿನಿಯ ಅಸಹಜ ಸಾವು ಪ್ರಕರಣದ ವಿರುದ್ಧ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಒಂದೆಡೆ ತನಿಖೆಯನ್ನು ಸಿಬಿಐಗೆವಹಿಸಬೇಕೆಂಬ ಒತ್ತಾಯ ಹೊರಬಂದರೆ, ಮತ್ತೊಂದೆಡೆ ಲೈಂಗಿಕ ದೌರ್ಜನ್ಯ ತಡೆ ಸಮಿತಿ ರಚಿಸಬೇಕೆಂಬ ಕೂಗು ಕೇಳಿಬರುತ್ತಿದೆ.

ಕೊಪ್ಪಳ, ರಾಯಚೂರಿನಲ್ಲಿ ಪ್ರತಿಭಟನೆ
author img

By

Published : Apr 26, 2019, 8:37 AM IST

ರಾಯಚೂರು/ಕೊಪ್ಪಳ: ರಾಯಚೂರು ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿನಿಯ ಅನುಮಾನಾಸ್ಪದ ಸಾವಿನ ವಿರುದ್ಧ ರಾಯಚೂರು ಹಾಗೂ ಕೊಪ್ಪಳದ ಗಂಗಾವತಿಯಲ್ಲಿ ವಿವಿಧ ಸಂಘಟನೆಗಳಿಂದ ಧರಣಿ ನಡೆಯಿತು.

ಪ್ರಕರಣವನ್ನು ವಿರೋಧಿಸಿ ಎಸ್ಎಫ್ಐ ಹಾಗೂ ಆಖಿಲ ಭಾರತ ಜನವಾದಿ ಮಹಿಳಾ ಸಂಘಟನೆಗಳಿಂದ ಧರಣಿ ನಡೆಯಿತು. ಪ್ರಕರಣ ಸಂಬಂಧ ನಿಷ್ಪಕ್ಷಪಾತ ಹಾಗೂ ರಾಜಕೀಯ ಪ್ರಭಾವ ಮುಕ್ತ ತನಿಖೆ ನಡೆಸಲು ಪ್ರತಿಭಟನಾಕಾರರು ಒತ್ತಾಯಿಸಿದರು. ಅಲ್ಲದೆ ಜಿಲ್ಲೆಯಲ್ಲಿ ಎಲ್ಲಾ ಕಡೆ ದುಡಿಯುತ್ತಿರುವ ಮಹಿಳೆಯರು ಹಾಗೂ ಶಿಕ್ಷಣ ಕೇಂದ್ರಗಳಲ್ಲಿ ಲೈಂಗಿಕ ದೌರ್ಜನ್ಯ ತಡೆ ಸಮಿತಿ ರಚಿಸಿ ಕ್ರಿಯಾಶೀಲಗೊಳಿಸಲು ಜಿಲ್ಲಾಡಳಿತ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ದೇಶಾದ್ಯಾಂತ ಮಹಿಳೆಯರ ಕೊಲೆ, ಅತ್ಯಾಚಾರ, ದೌರ್ಜನ್ಯ ಹೆಚ್ಚಾಗುತ್ತಿದ್ದು, ನಿಯಂತ್ರಣ ಇಲ್ಲದಂತಾಗಿದೆ. ವಿದ್ಯಾರ್ಥಿನಿಯ ಕೊಲೆ ಪ್ರಕರಣ ನೋಡಿದರೆ, ಇದು ವ್ಯವಸ್ಥಿತ ಸಂಚು ಹಾಗೂ ಕ್ರೌರ್ಯವನ್ನು ಎತ್ತಿ ತೋರಿಸುತ್ತದೆ. ಈ ಬಗ್ಗೆ ತನಿಖೆ ಚುರುಕುಗೊಳಿಸಬೇಕು. ಇಲ್ಲದೇ ಹೋದಲ್ಲಿ ಆರೋಪಿಗಳ ವಿರುದ್ಧದ ಸಾಕ್ಷ್ಯ ನಾಶವಾಗುವ ಸಂಭವವಿದೆ ಎಂದು ದೂರಿದರು.

ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ಹಿಂದಿನ ಸರಕಾರದಲ್ಲಿ ರಚಿಸಿದ ದೌರ್ಜನ್ಯ ತಡೆ ಸಮಿತಿ ಜಾರಿಗೊಳಿಸಬೇಕು. ಅಲ್ಲದೇ ನ್ಯಾಯಮೂರ್ತಿ ವರ್ಮಾ ಕಮಿಟಿ ಶಿಫಾರಸ್ಸು ಜಾರಿಗೆ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಕೊಪ್ಪಳ, ರಾಯಚೂರಿನಲ್ಲಿ ಪ್ರತಿಭಟನೆ

ಗಂಗಾವತಿಯಲ್ಲೂ ಪ್ರತಿಭಟನೆ...

ಈ ಪ್ರಕರಣವನ್ನು ಸಿಬಿಐ ತನಿಖೆಗೆವಹಿಸುವಂತೆ ಆಗ್ರಹಿಸಿ ಕೊಪ್ಪಳ ಜಿಲ್ಲೆಯಲ್ಲಿ ಎಸ್ಎಫ್ಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಜಿಲ್ಲೆಯ ಗಂಗಾವತಿನಗರದ ಸಿಬಿಎಸ್ ಸರ್ಕಲ್‌ನಲ್ಲಿ ಪ್ರತಿಭಟನೆ ನಡೆಸಿ, ಯುವತಿಯ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದು ಘೋಷಣೆ ಹಾಕಿದರು.

ಯುವತಿಯರು, ಮಕ್ಕಳು ಹಾಗೂ ಮಹಿಳೆಯರ ಮೇಲೆ ಅತ್ಯಾಚಾರ, ದೌರ್ಜನ್ಯ, ಕೊಲೆ ಪ್ರಕರಣಗಳು ನಡೆಯುತ್ತಲೇ‌ ಇವೆ. ಘಟನೆಗಳಲ್ಲಿ ಭಾಗಿಯಾದವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ರಾಯಚೂರಿನ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿಯ ಅಸಹಜ ಸಾವು ಪ್ರಕರಣದಲ್ಲಿ ಯುವತಿಗೆ ನ್ಯಾಯ ಸಿಗಬೇಕು. ಅದಕ್ಕಾಗಿ ಪ್ರಕರಣವನ್ನು ಸಿಬಿಐಗೆ ವಹಸಿಬೇಕು. ಪ್ರಕರಣದ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

Intro:ಇಂಜಿನಿಯರಿಂಗ್ ವಿದ್ಯಾರ್ಥಿ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧ ನಿಷ್ಪಕ್ಷಪಾತ, ರಾಜಕೀಯ ಪ್ರಭಾವ ಮುಕ್ತ ತನುಖೆ ನಡೆಸಿ ಜಿಲ್ಲೆಯಲ್ಲಿ ಎಲ್ಲಾ ಕಡೆ ದುಡಿಯುತ್ತಿರುವ ಮಹಿಳೆಯರಿಗೆ ಹಾಗೂ ಶಿಕ್ಷಣ ಕೇಂದ್ರಗಳಲ್ಲಿ ಲೈಂಗಿಕ ದೌರ್ಜನ್ಯ ತಡೆ ಸಮಿತಿ ರಚಿಸಿ ಕ್ರಿಯಾಶೀಲ ಗೊಳಿಸಲು ಜಿಲ್ಲಾಡಳಿತ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಜಿಲ್ಲಾಡಳಿತದ ಕಚೇರಿ ಎದುರು ಎಸ್ಎಫ್ಐ ಹಾಗೂ ಆಖಿಲ ಭಾರತ ಜನವಾದಿ ಮಹಿಳಾ ಸಂಘಟನೆಗಳಿಂದ ಧರಣಿ ನಡೆಸಿದರು.

Body:ದೇಶದ್ಯಾಂತ ಮಹಿಳೆಯರ ಮೆಲೆ ಕೊಲೆ,ಅತ್ಯಾಚಾರ, ದೌರ್ಜನ್ಯ ಹೆಚ್ಚಾಗುತ್ತಿದ್ದು ನಿಯಂತ್ರಣ ಇಲ್ಲದಂತಾಗಿದೆ ರಾಯಚೂರಿನ ಇಂಜಿನಿಯರಿಂಗ್ ವಿದ್ಯಾರ್ಥಿ ಯ ಕೊಲೆ ಪ್ರಕರಣ ನೋಡಿದರೆ ಇದು ವ್ಯವಸ್ಥಿತ ಸಂಚು,ಕ್ರೌರ್ಯ ವನ್ನು ಎತ್ತಿ ತೋರಿಸುತ್ತದೆ. ತನಿಖೆ ಚುರುಕುಗೊಳಿಸಬೆಕು ಇಲ್ಲದೇ ಹೋದಲ್ಲಿ ಆರೋಪಿಗಳ ವಿರುದ್ಧ ಸಾಕ್ಷಿ ನಾಶವಾಗುವ ಸಂಭವವಿದೆ ಎಂದು ದೂರಿದರು.
ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ಹಿಂದಿನ ಸರಕಾರದಲ್ಲಿ ರಚಿಸಿದ ಉಗ್ರಪ್ಪ ನೇತೃತ್ವದ ದೌರ್ಜನ್ಯ ತಡೆ ಸಮಿತಿ ಜಾರಿಗೊಳಿಸಬೇಕು.ಅಲ್ಲದೇ ನ್ಯಾಯ ಮೂರ್ತಿ ವರ್ಮಾ ಕಮಿಟಿ ಶಿಫಾರಸ್ಸು ಜಾರಿಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.