ETV Bharat / state

ಕಾರ್ಮಿಕ ವಿರೋಧಿ ಕಾನೂನುಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ಬೃಹತ್ ಪ್ರತಿಭಟನೆ - Protest against anti-labor law at kustagi

ರೈತ ಹಾಗೂ ಕಾರ್ಮಿಕ ವಿರೋಧಿ ಕಾನೂನುಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ವಿವಿಧ ಸಂಘಟನೆಗಳಿಂದ ಕುಷ್ಟಗಿಯಲ್ಲಿ ಪ್ರತಿಭಟಿಸಲಾಯಿತು.

Protest against anti-labor law at kustagi
ಕಾರ್ಮಿಕ ವಿರೋಧಿ ಕಾನೂನುಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ಬೃಹತ್ ಪ್ರತಿಭಟನೆ
author img

By

Published : Nov 26, 2020, 8:13 PM IST

ಕುಷ್ಟಗಿ(ಕೊಪ್ಪಳ): ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಕರೆ ನೀಡಿದ ಅಖಿಲ ಭಾರತ ಮುಷ್ಕರದ ಹಿನ್ನೆಲೆ ತಾಲೂಕಿನ ಸಿಐಟಿಯು ಹಾಗೂ ಪ್ರಗತಿಪರ ಸಂಘಟನೆಗಳು ಪ್ರತಿಭಟನೆ ನಡೆಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡೆಗೆ ಆಕ್ರೋಶ ವ್ಯಕ್ತಪಡಿಸಿವೆ.

ಕಾರ್ಮಿಕ ವಿರೋಧಿ ಕಾನೂನುಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ಬೃಹತ್ ಪ್ರತಿಭಟನೆ

ಇಲ್ಲಿನ ಕಾರ್ಗಿಲ್ ವೃತ್ತದಿಂದ ಪ್ರಗತಿಪರ ಸಂಘ, ಬಿಸಿ ಊಟದ ತಾಲೂಕು​​ ಸಮಿತಿ, ಅಂಗನವಾಡಿ ತಾಲೂಕು​ ಸಮಿತಿ, ಗ್ರಾ.ಪಂ. ನೌಕರರ ತಾಲೂಕು​ ಸಮಿತಿ, ಹಮಾಲರ ಸಂಘ, ಕಟ್ಟಡ ಕಾರ್ಮಿಕರ ಸಂಘ, ಎಸ್​​ಎಫ್​​ಐ ತಾಲೂಕು ಘಟಕಗಳ ಸಮೂಹದ ನೇತೃತ್ವದಲ್ಲಿ ಆರಂಭಿಸಿದ ಬೃಹತ್ ಪ್ರತಿಭಟನಾ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ನಂತರ ತಹಶೀಲ್ದಾರ ಕಚೇರಿವರೆಗೆ ಸಂಚರಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ರೈತ ಹಾಗೂ ಕಾರ್ಮಿಕ ವಿರೋಧಿ ಕಾನೂನುಗಳನ್ನು ಹಿಂಪಡೆಯುವಂತೆ ಮತ್ತು ರೈಲ್ವೆ, ಬ್ಯಾಂಕ್​ ವಿಮೆ ಮುಂತಾದ ಉದ್ದಿಮೆಗಳ ಖಾಸಗೀಕರಣ ತಡೆಗೆ ಹಕ್ಕೊತ್ತಾಯ ಮಂಡಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.