ETV Bharat / state

ಪರೀಕ್ಷಾ ಶುಲ್ಕ ಹೆಚ್ಚಳ ವಿರೋಧಿಸಿ ಅಕ್ಕಮಹಾದೇವಿ ಮಹಿಳಾ ವಿವಿ ವಿರುದ್ಧ ಪ್ರತಿಭಟನೆ - ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ

ಪರೀಕ್ಷಾ ಶುಲ್ಕ ಹೆಚ್ಚಳ ವಿರೋಧಿಸಿ ಕೊಪ್ಪಳ ನಗರದ ಸರ್ಕಾರಿ ಮಹಿಳಾ‌ ಪದವಿ ಕಾಲೇಜು ವಿದ್ಯಾರ್ಥಿಗಳು, ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ವಿರುದ್ಧ ಪ್ರತಿಭಟನೆ ನಡೆಸಿದರು. ಪರೀಕ್ಷಾ ಶುಲ್ಕ ಕಡಿಮೆ‌ ಮಾಡುವುದರ ಜೊತೆಗೆ ಘಟಿಕೋತ್ಸವದ ಶುಲ್ಕ ರದ್ದುಪಡಿಸಬೇಕು ಎಂದು ವಿದ್ಯಾರ್ಥಿನಿಯರು ಆಗ್ರಹಿಸಿದರು.

ಅಕ್ಕಮಹಾದೇವಿ ಮಹಿಳಾ ವಿವಿ ವಿರುದ್ಧ ಪ್ರತಿಭಟನೆ
author img

By

Published : Sep 24, 2019, 5:21 AM IST

ಕೊಪ್ಪಳ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ, ವಿಜಯಪುರದಲ್ಲಿ ಪರೀಕ್ಷಾ ಶುಲ್ಕ ಹೆಚ್ಚಳ ವಿರೋಧಿಸಿ ನಗರದ ಸರ್ಕಾರಿ ಮಹಿಳಾ‌ ಪದವಿ ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ನಗರದ ಸಾರ್ವಜನಿಕ‌ ಮೈದಾನದ ಬಳಿ ಇರುವ ಕಾಲೇಜು ಮುಂದೆ ಎಸ್ಎಫ್ಐ ಸಂಘಟನೆ ನೇತೃತ್ವದಲ್ಲಿ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿ, ಪ್ರಾಂಶುಪಾಲರ‌ ಮೂಲಕ ಉಪ ಕುಲಪತಿಗಳಿಗೆ ಮನವಿ ಸಲ್ಲಿಸಿದರು.

ಅಕ್ಕಮಹಾದೇವಿ ಮಹಿಳಾ ವಿವಿ ವಿರುದ್ಧ ಪ್ರತಿಭಟನೆ

ಪ್ರಸಕ್ತ ಸಾಲಿನಲ್ಲಿ ಜರುಗಲಿರುವ ಬಿಎ ಹಾಗೂ ಬಿಕಾಂ ಪ್ರಥಮ, ತೃತೀಯ ಹಾಗೂ 5ನೇ ಸೆಮಿಸ್ಟರ್ ಪರೀಕ್ಷಾ ಶುಲ್ಕವನ್ನು 980 ರೂ.ಗೆ ಏರಿಕೆ ಮಾಡಲಾಗಿದೆ. ಬಿಎಸ್ಸಿ ಪ್ರಥಮ, ತೃತೀಯ ಹಾಗೂ 5ನೇ ಸೆಮಿಸ್ಟರ್ ಪರೀಕ್ಷಾ ಶುಲ್ಕವನ್ನು 1050 ರೂಪಾಯಿಗೆ ಏರಿಸಲಾಗಿದೆ. ಅಲ್ಲದೆ ಘಟಿಕೋತ್ಸವ ಶುಲ್ಕವನ್ನು 550 ಮಾಡಿರೋದು ವಿದ್ಯಾರ್ಥಿ ವಿರೋಧಿ ನೀತಿಯಾಗಿದೆ. ಬೇರೆ ವಿಶ್ವವಿದ್ಯಾಲಯಗಳಲ್ಲಿ ಕಡಿಮೆ ಪರೀಕ್ಷಾ ಶುಲ್ಕವಿದೆ. ಇಲ್ಲೇಕೆ ಹೆಚ್ಚಳ ಮಾಡಲಾಗಿದೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು. ಪರೀಕ್ಷಾ ಶುಲ್ಕ ಕಡಿಮೆ‌ ಮಾಡುವುದರ ಜೊತೆಗೆ ಘಟಿಕೋತ್ಸವದ ಶುಲ್ಕ ರದ್ದುಪಡಿಸಬೇಕು ಎಂದು ವಿದ್ಯಾರ್ಥಿನಿಯರು ಆಗ್ರಹಿಸಿದರು.

Intro:Body:ಕೊಪ್ಪಳ:- ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಪರೀಕ್ಷಾ ಶುಲ್ಕ ಹೆಚ್ಚಳ ವಿರೋಧಿಸಿ ನಗರದ ಸರ್ಕಾರಿ ಮಹಿಳಾ‌ ಪದವಿ ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ನಗರದ ಸಾರ್ವಜನಿಕ‌ ಮೈದಾನದ ಬಳಿ ಇರುವ ಕಾಲೇಜು ಮುಂದೆ ಎಸ್ಎಫ್ಐ ಸಂಘಟನೆ ನೇತೃತ್ವದಲ್ಲಿ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿ ಪ್ರಾಂಶುಪಾಲರ‌ ಮೂಲಕ ಉಪಕುಲಪತಿಗಳಿಗೆ ಮನವಿ ಸಲ್ಲಿಸಿದರು. ಪ್ರಸಕ್ತ ಸಾಲಿನಲ್ಲಿ ಜರುಗಲಿರುವ ಬಿ.ಎ, ಬಿ.ಕಾಂ, ಪ್ರಥಮ, ತೃತೀಯ ಹಾಗೂ 5 ನೇ ಸೆಮಿಸ್ಟರ್ ಪರೀಕ್ಷಾ ಶುಲ್ಕವನ್ನು 980 ಗೆ ಏರಿಕೆ ಮಾಡಲಾಗಿದೆ. ಬಿಎಸ್ಸಿ ಪ್ರಥಮ, ತೃತೀಯ ಹಾಗೂ 5 ನೇ ಸೆಮಿಸ್ಟರ್ ಪರೀಕ್ಷಾ ಶುಲ್ಕವನ್ನು 1050 ರುಪಾಯಿ ನಿಗದಿ ಮಾಡಲಾಗಿದೆ. ಅಲ್ಲದೆ ಘಟಿಕೋತ್ಸವಸ ಶುಲ್ಕವನ್ನು 550 ಮಾಡಿರೋದು ವಿದ್ಯಾರ್ಥಿಗಳ ವಿರೋಧಿ ನೀತಿಯಾಗಿದೆ. ಬೇರೆ ವಿಶ್ವವಿದ್ಯಾಲಯಗಳಲ್ಲಿ ಕಡಿಮೆ ಪರೀಕ್ಷಾ ಶುಲ್ಕವಿದೆ. ಇಲ್ಲೇಕೆ ಹೆಚ್ಚಳ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪರೀಕ್ಷಾ ಶುಲ್ಕ ಕಡಿಮೆ‌ ಮಾಡುವುದರ ಜೊತೆಗೆ ಘಟಿಕೋತ್ಸವದ ಶುಲ್ಕ ರದ್ದುಪಡಿಸಬೇಕು ಎಂದು ವಿದ್ಯಾರ್ಥಿನಿಯರು ಆಗ್ರಹಿಸಿದರು. ಎಸ್ಎಫ್ಐ ಜಿಲ್ಲಾ ಕಾರ್ಯದರ್ಶಿ ಸುಭಾನ್ ಸೈಯದ್, ಶಿವಕುಮಾರ್ ವಾಲಿಕಾರ್, ಯಮನೂರಪ್ಪ ಹೊಮಿನಾಳ, ಶರಣಪ್ಪ ಹೋಮಿನಾಳ , ಕೃಷ್ಣ, ಗೌಸುಸಾಬ ಸೈಯದ್, ಐಶ್ವರ್ಯ, ಸುಸ್ಮಿತಾ, ಮೇಘಾ, ದಿವ್ಯಾ ಸೇರಿದಂತೆ ಮೊದಲಾದವರು ನೇತೃತ್ವವಹಿಸಿದ್ದರು.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.