ETV Bharat / state

ನೆನೆಗುದಿಗೆ ಬಿದ್ದಿದ್ದ ಇಂದೀರಾ ಕ್ಯಾಂಟಿನ್​ ಪುನಾರಂಭಕ್ಕೆ ಸಿದ್ಧತೆ

ಗಂಗಾವತಿಯಲ್ಲಿ ಕಳೆದ‌ ಮೂರು ವರ್ಷದಿಂದ ನೆನೆಗುದಿಗೆ ಬಿದ್ದಿದ್ದ ಇಂದಿರಾ ಕ್ಯಾಂಟೀನ್ ಅನ್ನು ಮತ್ತೆ ಆರಂಭಿಸಲು ನಗರಸಭೆ ಮುಂದಾಗಿದೆ.

author img

By

Published : May 13, 2021, 10:02 AM IST

Gangavati
ನೆನೆಗುದಿಗೆ ಬಿದ್ದಿದ್ದ ಇಂದೀರಾ ಕ್ಯಾಂಟಿನ್​ಗೆ ಪುನಾರಂಭಕ್ಕೆ ಸಿದ್ಧತೆ

ಗಂಗಾವತಿ: ಲಾಕ್​ಡೌನ್​ ಪರಿಣಾಮದಿಂದ ಕೆಲಸವಿಲ್ಲದೇ ಕಂಗಾಲಾಗಿರುವ ಕೂಲಿ ಕಾರ್ಮಿಕರು, ಬಡವರಿಗೆ ಆಹಾರ ಒದಗಿಸಲು ಗಂಗಾವತಿಯ ಗುಂಡಮ್ಮ ಕ್ಯಾಂಪ್​ನಲ್ಲಿ ನೆನೆಗುದಿಗೆ ಬಿದ್ದಿದ್ದ ಇಂದಿರಾ ಕ್ಯಾಂಟೀನ್ ಅನ್ನು ಮತ್ತೆ ಪ್ರಾರಂಭಿಸಲು ನಗರಸಭೆ ನಿರ್ಧರಿಸಿದೆ.

ಗಂಗಾವತಿ ನಗರಕ್ಕೆ ಎರಡು ಇಂದಿರಾ ಕ್ಯಾಂಟೀನ್‌ಗಳು ಮಂಜೂರಾಗಿದ್ದವು. ಹಳೇ ಪ್ರವಾಸಿ ಮಂದಿರ ಮತ್ತು ಗುಂಡಮ್ಮ ಕ್ಯಾಂಪ್‌ನ ಮಾರುಕಟ್ಟೆ ಪ್ರಾಂಗಣದಲ್ಲಿ ಇವುಗಳನ್ನು ನಿರ್ಮಿಸಲು ನಿರ್ಧರಿಸಲಾಗಿತ್ತು. 2018ರಲ್ಲಿ ಗುಂಡಮ್ಮ ಕ್ಯಾಂಪ್‌ನಲ್ಲಿ ಕ್ಯಾಂಟೀನ್ ನಿರ್ಮಿಸಿದ್ದರೂ ಅನುದಾನದ ಕೊರತೆ ಮತ್ತು ಅಧಿಕಾರಿಗಳ ನಿರಾಸಕ್ತಿಯಿಂದ ಕಾರ್ಯ ನೆರವೇರಲಿಲ್ಲ.

ಹಸಿದವರಿಗೆ ಆಹಾರ ನೀಡುವ ಉದ್ದೇಶದಿಂದ ಇದೀಗ ಈ ಇಂದಿರಾ ಕ್ಯಾಂಟೀನ್ ಅನ್ನು ಸ್ವಚ್ಛಗೊಳಿಸಿ, ಆರಂಭಿಸಲಾಗುತ್ತಿದೆ. ಈ ಕ್ಯಾಂಟೀನ್​ನಲ್ಲಿ ಮೊದಲ ಹಂತದಲ್ಲಿ ನಿತ್ಯ 500 ಜನರಿಗೆ ಉಪಹಾರ ಮತ್ತು ಊಟ ವಿತರಣೆಗೆ ಯೋಜನೆ ಸಿದ್ಧಪಡಿಸಲಾಗಿದೆ.

ಈ ಕುರಿತು ಪೌರಾಯುಕ್ತ ಅರವಿಂದ ಜಮಖಂಡಿ ಮಾತನಾಡಿ, ಕ್ಯಾಂಟೀನ್‌ನಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಕೋವಿಡ್ ಪರಿಸ್ಥಿತಿ ನಿಯಂತ್ರಣಕ್ಕೆ ಬರುವವರೆಗೂ ಉಚಿತವಾಗಿ ಆಹಾರ ವಿತರಿಸಲಾಗುವುದು. ಕೊರೊನಾ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ಇದನ್ನೂ ಓದಿ: ಕರ್ತವ್ಯ ಲೋಪ, ಸತತ ಗೈರು ಹಾಜರಿ... ವೈದ್ಯಾಧಿಕಾರಿಯನ್ನು ಕೆಲಸದಿಂದ ಕಿತ್ತು ಹಾಕಿ ಎಂದ ಶಾಸಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.