ಗಂಗಾವತಿ: ಗ್ರಹಣ, ಅಮವಾಸ್ಯೆಯಂತ ಸಂಪ್ರದಾಯಕ್ಕೆ ಸಡ್ಡು ಹೊಡೆದ ಕೆಲ ಪ್ರಗತಿಪರ ಚಿಂತಕರು ಆಯೋಜಿಸಿದ್ದ ಮಸಣದಲ್ಲಿ ವನಮಹೋತ್ಸವಕ್ಕೆ ಹಾಸ್ಯ ಸಾಹಿತಿ ಬಿ ಪ್ರಾಣೇಶ್ ರುದ್ರಭೂಮಿಯಲ್ಲಿ ಸಸಿಗೆ ನೀರೆರೆಯುವ ಮೂಲಕ ಚಾಲನೆ ನೀಡಿದ್ರು.
ನಮ್ಮೂರು ನಮ್ಮ ಹಳ್ಳ ಸಂಘಟನೆಯ ಸಂಚಾಲಕ ಡಾ. ಶಿವಕುಮಾರ ಮಾಲಿಪಾಟೀಲ್ ನೇತೃತ್ವದಲ್ಲಿ ಇತರರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರಾಣೇಶ್, ನಮ್ಮ ಸಂಪ್ರದಾಯ, ಆಚರಣೆ ಎಲ್ಲವೂ ಮನೆಯ ನಾಲ್ಕು ಗೋಡೆಗೆ ಮಾತ್ರ ಸೀಮಿತವಾಗಿರಬೇಕು. ಆದರೆ ಹೊರಗೆ ಬಂದಾಗ ವೈಜ್ಞಾನಿಕವಾಗಿ ಆಲೋಚಿಸುವ ಮನೋಭಾವನೆ ಪ್ರತಿಯೊಬ್ಬರಲ್ಲಿ ಬೆಳೆಯಬೇಕು ಎಂದರು.
ಇಂದು ಗ್ರಹಣ ಅದರಲ್ಲೂ ಅಮಾವಾಸ್ಯೆ. ಹೀಗಿದ್ದೂ ಸ್ನೇಹಿತರ ಕರೆಗೆ ಓಗೊಟ್ಟು ಬಂದು ಮೌಢ್ಯ ವಿರೋಧಿಸುವ ಸಂದೇಶಕ್ಕಾಗಿ ಈ ಕೆಲಸ ಮಾಡುತ್ತಿದ್ದೇನೆ. ವೈಜ್ಞಾನಿಕವಾಗಿ ಆಲೋಚಿಸುವ ಮನೋಭಾವನೆ ಪ್ರತಿಯೊಬ್ಬರಲ್ಲಿ ಬೆಳೆಯಬೇಕು ಎಂದು ಪ್ರಾಣೇಶ್ ಕರೆ ನೀಡಿದರು.