ETV Bharat / state

ನಾಲ್ಕೇ ತಿಂಗಳಿಗೆ ಕಿತ್ತು ಹೋದ ರಸ್ತೆ: ಕಳಪೆ ಕಾಮಗಾರಿಯೇ ಕಾರಣ ಎಂದು ಗ್ರಾಮಸ್ಥರ ಆರೋಪ - bahaddurbandi village of Koppal

ಕೊಪ್ಪಳ ಜಿಲ್ಲೆಯ ಬಹದ್ದೂರಬಂಡಿ ಗ್ರಾಮದ ಹಳ್ಳದ ಬಳಿ ಇರುವ ರಸ್ತೆ ನಿನ್ನೆ ಸುರಿದ ಮಳೆಗೆ ಕಿತ್ತು ಹೋಗಿದ್ದು, ಕಳಪೆ ಕಾಮಗಾರಿಯೇ ಇದಕ್ಕೆ ಕಾರಣ ಎಂದು ಗ್ರಾಮಸ್ಥರು ಆರೋಪಿದ್ದಾರೆ.

ನಾಲ್ಕೇ ತಿಂಗಳಿಗೆ ಕಿತ್ತು ಹೋದ ರಸ್ತೆ
author img

By

Published : Sep 27, 2019, 12:52 PM IST

ಕೊಪ್ಪಳ: ಕಳೆದ ನಾಲ್ಕು ತಿಂಗಳ ಹಿಂದೆಯಷ್ಟೆ ನಿರ್ಮಾಣ ಮಾಡಲಾಗಿದ್ದ ತಾಲೂಕಿನ‌ ಬಹದ್ದೂರಬಂಡಿ ಗ್ರಾಮದ ನೂತನ ರಸ್ತೆ ಅಲ್ಲಲ್ಲಿ ಕಿತ್ತು ಹೋಗಿದ್ದು, ಕಳಪೆ ಕಾಮಗಾರಿಯೇ ಇದಕ್ಕೆ ಕಾರಣ ಎಂದು ಗ್ರಾಮಸ್ಥರು ಆರೋಪಿದ್ದಾರೆ.

ನಾಲ್ಕೇ ತಿಂಗಳಿಗೆ ಕಿತ್ತು ಹೋದ ರಸ್ತೆ

ಬಹದ್ದೂರಬಂಡಿ ಗ್ರಾಮದ ಹಳ್ಳದ ಬಳಿ ಇರುವ ಈ ರಸ್ತೆ ನಿನ್ನೆ ಸುರಿದ ಮಳೆಗೆ ಕಿತ್ತು ಹೋಗಿದೆ‌. ಗುತ್ತಿಗೆದಾರರು ಸಂಪೂರ್ಣವಾಗಿ ಕಳಪೆ ಕಾಮಗಾರಿ ಮಾಡಿದ್ದರಿಂದ ರಸ್ತೆ ಕಿತ್ತುಹೋಗಿದ್ದು, ಇಲ್ಲಿ ಓಡಾಡೋಕ್ಕೆ ತುಂಬಾ ಅಪಾಯ ಎನಿಸುತ್ತಿದೆ. ಕೇವಲ ನಾಲ್ಕೇ ನಾಲ್ಕು ತಿಂಗಳಲ್ಲಿ ರಸ್ತೆಯ ಟಾರು ಕಿತ್ತು ಹೋಗಿದೆ ಎಂದರೆ ಆ ಕಾಮಗಾರಿಯ ಗುಣಮಟ್ಟ ಹೇಗಿದೆ ಎಂದು ತಿಳಿಯುತ್ತಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗ್ರಾಮದ ಬಳಿ ಇರುವ ಹಳ್ಳಕ್ಕೆ ಸೇತುವೆಯನ್ನು ನಿರ್ಮಾಣ ಮಾಡಬೇಕು. ಮಳೆ ಬಂದಾಗ ಇಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾಗುತ್ತದೆ. ಇದೇ ಹಳ್ಳದಲ್ಲಿ ಈ ಹಿಂದೆ ಗ್ರಾಮದ ಮೂರ್ನಾಲ್ಕು ಜನರು ನೀರಿನ ರಭಸಕ್ಕೆ ಕೊಚ್ಚಿಹೋಗಿರುವ ಉದಾಹರಣೆ ಇದೆ. ಹೀಗಾಗಿ, ಮೊದಲು ಕಿತ್ತು ಹೋಗಿರುವ ರಸ್ತೆಯನ್ನು ರಿಪೇರಿ ಮಾಡಿಸುವುದರ ಜೊತೆಗೆ, ಗ್ರಾಮದ ಮುಂದೆ ಇರುವ ಹಳ್ಳಕ್ಕೆ ಸೇತುವೆ ನಿರ್ಮಾಣ ಮಾಡಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.

Intro:

Body:ಕೊಪ್ಪಳ:- ಕಳೆದ ನಾಲ್ಕು ತಿಂಗಳ ಹಿಂದೆಯಷ್ಟೆ ನಿರ್ಮಾಣ ಮಾಡಲಾಗಿದ್ದ ತಾಲೂಕಿನ‌ ಬಹದ್ದೂರಬಂಡಿ ಗ್ರಾಮದ ನೂತನ ರಸ್ತೆ ಅಲ್ಲಲ್ಲಿ ಕಿತ್ತುಹೋಗಿದ್ದು ಕಳಪೆ ಕಾಮಗಾರಿಯೇ ಇದಕ್ಕೆ ಕಾರಣ ಎಂದು ಗ್ರಾಮಸ್ಥರು ಆರೋಪಿದ್ದಾರೆ. ನಿನ್ನೆ ಸುರಿದ ಮಳೆಗೆ ಈ ರಸ್ತೆ ಕಿತ್ತುಹೋಗಿದೆ. ಕಳೆದ ನಾಲ್ಕು ತಿಂಗಳ ಹಿಂದೆಯಷ್ಟೆ ಈ ರಸ್ತೆಯನ್ನು ನಿರ್ಮಾಣ ಮಾಡಲಾಗಿದೆ. ಗ್ರಾಮದ ಬಳಿ ಇರುವ ಹಳ್ಳದ ಬಳಿ ಈ ರಸ್ತೆಯ ಮೇಲಿನ ಟಾರ್ ಹಾಗೆ ಕಿತ್ತು ಬರುತ್ತಿದೆ‌. ಈ ಕಾಮಗಾರಿಯನ್ನು‌ ಮಾಡಿರುವ ಗುತ್ತಿಗೆದಾರರು ಸಂಪೂರ್ಣವಾಗಿ ಕಳಪೆ ಕಾಮಗಾರಿ ಮಾಡಿದ್ದರಿಂದ ರಸ್ತೆ ಕಿತ್ತು ಹೋಗಿದೆ. ಕಿತ್ತುಹೋಗಿರುವ ರಸ್ತೆಯಲ್ಲಿ ಓಡಾಡೋಕ್ಕೆ ತುಂಬಾ ಅಪಾಯ ಎನಿಸುತ್ತಿದೆ. ಕೇವಲ ನಾಲ್ಕೇ ನಾಲ್ಕು ತಿಂಗಳಲ್ಲಿ ರಸ್ತೆಯ ಟಾರು ಕಿತ್ತುಹೋಗಿದೆ ಎಂದರೆ ಆ ಕಾಮಗಾರಿಯ ಗುಣಮಟ್ಟ ಹೇಗಿದೆ ಎಂದು ತಿಳಿಯುತ್ತಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಹದ್ದೂರಬಂಡಿ ಬಳಿ ಇರುವ ಹಳ್ಳಕ್ಕೆ ಸೇತುವೆಯನ್ನು ನಿರ್ಮಾಣ ಮಾಡಬೇಕು. ಮಳೆ ಬಂದಾಗ ಇಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾಗುತ್ತದೆ. ಇದೇ ಹಳ್ಳದಲ್ಲಿ ಈ ಹಿಂದೆ ಗ್ರಾಮದ ಮೂರ್ನಾಲ್ಕು ಜನರು ನೀರಿನ ರಭಸಕ್ಕೆ ಕೊಚ್ಚಿಹೋಗಿರುವ ಉದಾಹರಣೆ ಇದೆ. ಹೀಗಾಗಿ, ಮೊದಲು ಕಿತ್ತುಹೋಗಿರುವ ರಸ್ತೆ ಯನ್ನು ರಿಪೇರಿ ಮಾಡಿಸುವುದರ ಜೊತೆಗೆ ಗ್ರಾಮದ ಮುಂದೆ ಇರುವ ಹಳ್ಳಕ್ಕೆ ಸೇತುವೆ ನಿರ್ಮಾಣ ಮಾಡಬೇಕು ಎಂದು ಗ್ರಾಮದ ಯುವಕ ಯೋಗಾನಂದ ಲೇಬಗೇರಿ ಆಗ್ರಹಿಸಿದ್ದಾರೆ.

ಬೈಟ್1:- ಯೋಗಾನಂದ ಲೇಬಗೇರಿ, ಬಹದ್ದೂರಬಂಡಿ ಗ್ರಾಮದ ಯುವಕ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.