ಗಂಗಾವತಿ (ಕೊಪ್ಪಳ) : ಕನಕಗಿರಿ ಕ್ಷೇತ್ರದಲ್ಲಿ ರಾಜಕೀಯ ಮೇಲಾಟಕ್ಕೆ ಪಿಡಿಒಗಳ ವರ್ಗಾವಣೆ ನಡೆಯುತ್ತಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರಾಗಿರುವವರು ಪಂಚಾಯಿತಿ ಸದಸ್ಯರಾಗಿರುವ ಹಿನ್ನೆಲೆಯಲ್ಲಿ ಎರಡೂ ಪಕ್ಷಗಳ ನಡುವಣ ಕಲಹಕ್ಕೆ ಪಿಡಿಒಗಳು ಬಲಿಯಾಗುತ್ತಿದ್ದು, ವರ್ಗಾವಣೆಯಿಂದ ಇವರು ಸಂಕಷ್ಟಕ್ಕೆ ಸಿಲುಕುವಂತಾಗಿದೆ.
ಈ ಬಗ್ಗೆ ಹಣವಾಳ ಗ್ರಾಮ ಪಂಚಾಯಿತಿ ಪಿಡಿಒ ನೀಲಾ ಸೂರ್ಯಕುಮಾರಿಯನ್ನು ಬದಲಾಯಿಸುವಂತೆ ಸ್ವತಃ ಕನಕಗಿರಿ ಶಾಸಕ ಬಸವರಾಜ ದಢೇಸುಗೂರು ಒಂದು ತಿಂಗಳ ಹಿಂದೆ ತಾಲೂಕು ಪಂಚಾಯಿತಿಯ ಸಿಇಒ ತಿಮ್ಮಾನಾಯ್ಕ್ ಅವರಿಗೆ ಸೂಚನೆ ನೀಡಿದ್ದರು.
ಆದರೆ, ಈ ಬಗ್ಗೆ ಮಾಧ್ಯಮಗಳಲ್ಲಿ ವರದಿ ಬಂದ ಬಳಿಕ ಅಲ್ಪಕಾಲ ಪಿಡಿಒಗಳ ವರ್ಗಾವಣೆ ರದ್ದಾಗಿತ್ತು. ಆದರೆ, ಈಗ ಮತ್ತೆ ಕನಕಗಿರಿಯ ಐದು ಜನ ಮತ್ತು ಗಂಗಾವತಿಯ ಇಬ್ಬರು ಪಿಡಿಒಗಳನ್ನು ವರ್ಗಾವಣೆ ಮಾಡಿರುವುದು ಸಾರ್ವಜನಿಕರಲ್ಲಿ ಚರ್ಚೆಗೆ ಕಾರಣವಾಗಿದೆ.