ETV Bharat / state

ಕೊಪ್ಪಳದಲ್ಲಿ ಸಸ್ಯ ಸಂತೆ...  ಜನರಿಂದ ಉತ್ತಮ ರೆಸ್ಪಾನ್ಸ್ - undefined

ತೋಟಗಾರಿಕೆ ಇಲಾಖೆ ನಗರದ ತೋಟಗಾರಿಕಾ ಕಚೇರಿ ಆವರಣದಲ್ಲಿ ಜೂನ್ 20 ರವರೆಗೆ ಸಸ್ಯ ಸಂತೆ ಆಯೋಜನೆ ಮಾಡಿದ್ದು, ಈಗಾಗಲೇ ರೈತರು, ಜನರಿಂದ ಉತ್ತಮ ರೆಸ್ಪಾನ್ಸ್ ದೊರೆತಿದೆ.

ಸಸ್ಯ ಸಂತೆ
author img

By

Published : Jun 12, 2019, 1:02 PM IST

ಕೊಪ್ಪಳ: ತೋಟಗಾರಿಕೆ ಇಲಾಖೆ ವತಿಯಿಂದ ನಗರದಲ್ಲಿ ಸಸ್ಯ ಸಂತೆ ನಡೆಯುತ್ತಿದ್ದು, ಹೂವು, ಹಣ್ಣಿನ ಸಸ್ಯಗಳ ಮಾರಾಟ ಬಲು ಜೋರಾಗಿದೆ.

ಮುಂಗಾರು ಮಳೆ ಇನ್ನೂ ಸರಿಯಾಗಿ ಈ ವರ್ಷ ಆರಂಭವಾಗಿಲ್ಲ, ಆದರೂ ಜಿಲ್ಲೆಯಲ್ಲಿ ಅಲ್ಲಲ್ಲಿ ಸ್ವಲ್ಪ ಮಳೆಯಾಗಿ ನೆಲ ತೇವಗೊಂಡಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದಂತಾಗಿದೆ. ಸಸಿಗಳನ್ನು ನೆಡುವುದಕ್ಕೆ ಇದು ಸಕಾಲವಾಗಿರುವುದರಿಂದ ಬೇರೆ ಬೇರೆ ಸಸಿಗಳಿಗೆ ಫುಲ್ ಡಿಮ್ಯಾಂಡ್ ಇರುತ್ತದೆ. ಹೀಗಾಗಿಯೇ ತೋಟಗಾರಿಕೆ ಇಲಾಖೆಯು ನಗರದ ತೋಟಗಾರಿಕಾ ಕಚೇರಿ ಆವರಣದಲ್ಲಿ ಜೂನ್ 20 ರವರೆಗೆ ಸಸ್ಯ ಸಂತೆ ಆಯೋಜನೆ ಮಾಡಿದೆ.

ಸಸ್ಯ ಸಂತೆ

ಈ ಸಂತೆಯಲ್ಲಿ ಮಾವು, ನಿಂಬೆ, ಪೇರಲ, ತೆಂಗು, ಸಪೋಟಾ, ನೇರಳೆ, ಕರಿಬೇವು ಸೇರಿದಂತೆ ವಿವಿಧ ಬಗೆಯ ಸಸ್ಯಗಳನ್ನು ಮಾರಾಟ ಮಾಡಲಾಗುತ್ತಿದೆ. ಜನರು ಮತ್ತು ರೈತರು ಬಂದು ತಮಗಿಷ್ಟವಾದ ಸಸಿಗಳನ್ನು ಖರೀದಿಸಿ ತೆಗೆದುಕೊಂಡು ಹೋಗುತ್ತಿದ್ದಾರೆ. ಬೇರೆ ಬೇರೆ ಹಣ್ಣಿನ ಸಸಿಗಳಿಗೆ ಒಂದೊಂದು ರೀತಿಯ ಬೆಲೆ‌ ಇದ್ದು, ಹತ್ತು ರೂಪಾಯಿಗೂ ಒಂದು ಸಸಿ ಇಲ್ಲಿ ಲಭ್ಯವಿವೆ. ಸಸ್ಯಸಂತೆಯಲ್ಲಿ ಬರೀ ಹಣ್ಣು ಹೂವಿನ ಸಸಿಗಳಷ್ಟೇ ಸಸಿಗಳ ಮಾರಾಟ ಮಾಡುತ್ತಿಲ್ಲ. ಜೊತೆಗೆ ತರಕಾರಿ ಬೆಳೆಗಳು, ತೋಟಗಾರಿಕೆ ಬೆಳೆಗಳ ನಿರ್ವಹಣೆ ಸೇರಿದಂತೆ ರೈತರಿಗೆ ಉಪಯೋಗವಾಗುವ ಅನೇಕ ಮಾಹಿತಿಗಳನ್ನು ಇಲ್ಲಿ ನೀಡಲಾಗುತ್ತಿದೆ.

ಜಿಲ್ಲೆಯ ವಿವಿಧೆಡೆ ಇರುವ ಸುಮಾರು 10 ಕ್ಕೂ ಹೆಚ್ಚು ತೋಟಗಾರಿಕೆ ಫಾರ್ಮ್​ಗಳಿಂದ ಈ ಸಸ್ಯಗಳನ್ನು ತಂದು ಮಾರಾಟ ಮಾಡಲಾಗುತ್ತಿದೆ. ಸಸ್ಯ ಸಂತೆ ಆರಂಭದ ದಿನವಾದ ನಿನ್ನೆ ಒಂದೇ ದಿನದಲ್ಲಿ ಸುಮಾರು ಒಂದೂವರೆ ಲಕ್ಷ ರೂ. ಮೌಲ್ಯದ ತೆಂಗಿನ ಸಸಿಗಳು ಮಾರಾಟವಾಗಿವೆ. ಜನರಿಂದ ಸಸ್ಯ ಸಂತೆಗೆ ಉತ್ತಮ ರೆಸ್ಪಾನ್ಸ್ ದೊರೆಯುತ್ತಿದೆ. ತೋಟಗಾರಿಕೆ ಇಲಾಖೆ ಹಣ್ಣು ಮೇಳ, ಜೇನು ಮೇಳ,‌ ಮಾವು ಮೇಳ ಸೇರಿದಂತೆ ಅನೇಕ ಮೇಳಗಳನ್ನು ಆಯೋಜಿಸಿದಂತೆ ಈಗ ಸಸ್ಯಮೇಳವನ್ನು ಆಯೋಜಿಸುವ ಮೂಲಕ ಜ‌ನರ ಮೆಚ್ಚುಗೆಗೆ ಪಾತ್ರವಾಗುತ್ತಿದೆ.

Intro:

Body:ಕೊಪ್ಪಳ:- ಈಗ ಮಳೆಗಾಲ ಆರಂಭವಾಗಿದೆ. ಈ ಸಂದರ್ಭದಲ್ಲಿ ಸಸಿ ನೆಟ್ಟರೆ ಉತ್ತಮ ಎಂಬ ಭಾವನೆ ಜನರಲ್ಲಿ. ಹೀಗಾಗಿ ತೋಟಗಾರಿಕಾ ಇಲಾಖೆಯ ವತಿಯಿಂದ ನಗರದಲ್ಲಿ ಸಸ್ಯ ಸಂತೆ ನಡೆಯುತ್ತಿದ್ದು ಹೂವು, ಹಣ್ಣುಗಳ ಸಸ್ಯಗಳ ಮಾರಾಟ ಬಲು ಜೋರಾಗಿದೆ.
ಹೌದು...., ಮುಂಗಾರು ಮಳೆ ಇನ್ನೂ ಸರಿಯಾಗಿ ಈ ವರ್ಷ ಆರಂಭವಾಗಿಲ್ಲ. ಆದರೂ ಸಹ ಜಿಲ್ಲೆಯಲ್ಲಿ ಒಂಚೂರು ಅಲ್ಲಲ್ಲಿ ಮಳೆಯಾಗಿ ನೆಲ ತೇವಗೊಂಡಿದೆ. ಇದರಿಂದಾಗಿ ರೈತರ ಮೊಗದಲ್ಲಿ ಮಂದಹಾಸ ಮೂಡಿದಂತಾಗಿದೆ. ಮಳೆಗಾಲದಲ್ಲಿ ಯಾವುದೇ ಸಸಿಗಳನ್ನು ಹಚ್ಚಿದರು ಸರಿಯಾಗಿ ಬೆಳೆಯುತ್ತವೆ. ಸಸಿಗಳನ್ನು ನೆಡುವುದಕ್ಕೆ ಇದು ಸಕಾಲವಾಗಿರುವುದರಿಂದ ಬೇರೆಬೇರೆ ಸಸಿಗಳಿಗೆ ಫುಲ್ ಡಿಮ್ಯಾಂಡ್ ಇರುತ್ತದೆ. ಹೀಗಾಗಿಯೇ ತೋಟಗಾರಿಕೆ ಇಲಾಖೆಯು ನಗರದ ತೋಟಗಾರಿಕಾ ಕಛೇರಿ ಆವರಣದಲ್ಲಿ ಜೂನ್ 20 ರವರೆಗೆ ಸಸ್ಯ ಸಂತೆಯನ್ನು ಆಯೋಜನೆ ಮಾಡಿದೆ. ರೈತರು ಸೇರಿದಂತೆ ಜನರು ಹೂವಿನ ಹಾಗೂ ಹಣ್ಣುಗಳ ಸಸಿಗಳನ್ನು ಈ ಸಸ್ಯ ಸಂತೆಯಲ್ಲಿ ಖರೀದಿ ಮಾಡುತ್ತಿದ್ದಾರೆ. ಈಗ ನಡೆಯುತ್ತಿರುವ ಸಂತೆಯಲ್ಲಿ ಮಾವು, ನಿಂಬೆ, ಪೇರಲ, ತೆಂಗು, ಸಪೋಟ, ನೇರಳೆ, ಕರಿಬೇವು ಸೇರಿದಂತೆ ವಿವಿಧ ಬಗೆಯ ಸಸ್ಯಗಳನ್ನು ಮಾರಾಟ ಮಾಡಲಾಗುತ್ತಿದೆ. ಜನರು ಮತ್ತು ರೈತರು ಬಂದು ತಮಗಿಷ್ಟವಾದ ಸಸಿಗಳನ್ನು ಖರೀದಿಸಿ ತೆಗೆದುಕೊಂಡು ಹೋಗುತ್ತಿದ್ದಾರೆ. ಬೇರೆ ಬೇರೆ ಹಣ್ಣಿನ ಸಸಿಗಳಿಗೆ ಬೇರೆ ಬೇರೆ ರೀತಿಯಾದ ಬೆಲೆ‌ ಇದೆ. ಹತ್ತು ರೂಪಾಯಿಗೂ ಒಂದು ಸಸಿಯು ಇಲ್ಲಿ ಲಭ್ಯವಿವೆ. ಸಸ್ಯಸಂತೆಯಲ್ಲಿ ಬರೀ ಹಣ್ಣು ಹೂವಿನ ಸಸಿ ಗಳಷ್ಟೇ ಸಸಿಗಳ ಮಾರಾಟ ಮಾಡುತ್ತಿಲ್ಲ. ಜೊತೆಗೆ ತರಕಾರಿ ಬೆಳೆಗಳು, ತೋಟಗಾರಿಕಾ ಬೆಳೆಗಳ ನಿರ್ವಹಣೆ ಸೇರಿದಂತೆ ರೈತರಿಗೆ ಉಪಯೋಗವಾಗುವ ಅನೇಕ ಮಾಹಿತಿಗಳನ್ನು ಇಲ್ಲಿ ನೀಡಲಾಗುತ್ತಿದೆ.

ಬೈಟ್1:- ಕೃಷ್ಣ ಉಕ್ಕುಂದ ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ.

ಜಿಲ್ಲೆಯ ವಿವಿಧೆಡೆ ಇರುವ ಸುಮಾರು ೧೦ ಕ್ಕೂ ಹೆಚ್ಚು ತೋಟಗಾರಿಕಾ‌ ಫಾರ್ಮ್ ಗಳಿಂದ ಈ ಸಸ್ಯಗಳನ್ನು ತಂದು ಮಾರಾಟ ಮಾಡಲಾಗುತ್ತಿದೆ. ಸಸ್ಯ ಸಂತೆ ಆರಂಭದ ದಿನವಾದ ನಿನ್ನೆ ಒಂದೇ ದಿನದಲ್ಲಿ ಸುಮಾರು ಒಂದೂವರೆ ಲಕ್ಷ‌ ರುಪಾಯಿ ಯಷ್ಟು ತೆಂಗಿನ ಸಸಿಗಳು ಮಾರಾಟವಾಗಿವೆ. ಜನರಿಂದ ಸಸ್ಯ ಸಂತೆಗೆ ಉತ್ತಮ ರೆಸ್ಪಾನ್ಸ್ ದೊರೆಯುತ್ತಿದೆ.

ಬೈಟ್2:- ಗುರುನಾಥ, ತೋಟಗಾರಿಕೆ ಸಹಾಯಕ.

ತೋಟಗಾರಿಕೆ ಇಲಾಖೆಯು ಹಣ್ಣು ಮೇಳ, ಜೇನು ಮೇಳ,‌ ಮಾವು ಮೇಳ ಸೇರಿದಂತೆ ಅನೇಕ ಮೇಳಗಳನ್ನು ಆಯೋಜಿಸುವ ಮೂಲಕ ಜನರ ಮೆಚ್ಚುಗೆಗೆ ಪಾತ್ರವಾಗುತ್ತಿರುವಂತೆ ಈಗ ಸಸ್ಯಮೇಳವನ್ನು ೧೦ ದಿ‌ನಗಳ ಕಾಲ ಆಯೋಜಿಸುವ ಮೂಲಕ ಜ‌ನರ ಮೆಚ್ಚುಗೆಗೆ ಪಾತ್ರವಾಗುತ್ತಿದೆ.

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.