ಗಂಗಾವತಿ: ದುರಸ್ತಿ ಮಾಡಲಾಗಿದ್ದ ಕುಡಿಯುವ ನೀರಿನ ಮುಖ್ಯ ರೈಸಿಂಗ್ ಪೈಪ್ಲೈನ್ ಒಡೆದು ಮತ್ತೆ ಅಪಾರ ಪ್ರಮಾಣದ ನೀರು ಪೋಲಾದ ಘಟನೆ ನಗರದ ಆನೆಗೊಂದಿ ರಸ್ತೆಯ ವಿರುಪಾಪುರ ತಾಂಡದ ಸಮೀಪ ಭಾನುವಾರ ನಡೆದಿದೆ.
ಇನ್ನೂ ಘಟನೆಯಿಂದಾಗಿ ಅಪಾರ ಪ್ರಮಾಣದ ನೀರು ರಭವಸವಾಗಿ ಹರಿದು ರಸ್ತೆಯಲ್ಲಿ ಸಂಗ್ರಹವಾಗಿದ್ದರಿಂದ ಸಾರ್ವಜನಿಕರ ಸಂಚಾರಕ್ಕೆ ಸಮಸ್ಯೆಯಾಗಿತ್ತು. ಅಷ್ಟೇಅಲ್ಲದೇ, ಗಂಗಾವತಿಯಿಂದ ಆನೆಗೊಂದಿ ಹುಲಗಿಗೆ ಹೋಗುವ ಮಾರ್ಗದ ವಾಹನಗಳಿಗೂ ಸಮಸ್ಯೆಯಾಗಿತ್ತು.