ಗಂಗಾವತಿ (ಕೊಪ್ಪಳ): ಕಾರಹುಣ್ಣಿಮೆ ಅಂಗವಾಗಿ ತಾಲೂಕಿನ ಸಂಗಾಪುರ ಗ್ರಾಮದಲ್ಲಿ ಎತ್ತುಗಳನ್ನು ಓಡಿಸುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಈ ವೇಳೆ ಎತ್ತುಗಳ ಓಟ ಕಣ್ತುಂಬಿಕೊಳ್ಳಲು ಸಾವಿರಾರು ಮಂದಿ ಕೊರೊನಾ ನಿಯಮ ಮರೆತು ಒಂದೆಡೆ ಸೇರಿದ್ದರು. ಮಾಸ್ಕ್, ಸಾಮಾಜಿಕ ಅಂತರ ಇಲ್ಲದೇ ನೆರೆದಿದ್ದರು.
ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ ಕಂಡಿದ್ದರೂ ಕೊರೊನಾ ನಿಯಮ ಪಾಲನೆಗೆ ಸೂಚಿಸಲಾಗಿದೆ. ಆದರೆ, ಹಬ್ಬದ ನೆಪದಲ್ಲಿ ಜನರು ತಂಡೋಪ ತಂಡವಾಗಿ ಬೀದಿಗಿಳಿಯುತ್ತಿರುವುದು ಆತಂಕ ತಂದೊಡ್ಡಿದೆ. ಕಾರಹುಣ್ಣಿಮೆ ಎಂದು ಕೃಷಿಕರು ಎತ್ತುಗಳಿಗೆ ವಿಶೇಷವಾಗಿ ಅಲಂಕಾರ ಮಾಡಿ, ದೇವಾಲಯದಲ್ಲಿ ಪೂಜೆ ನೆರವೇರಿಸಿ ಗ್ರಾಮದ ಮುಖ್ಯ ಬೀದಿಯಲ್ಲಿ ಓಡಿಸುವ ಸಂಪ್ರದಾಯವಿದೆ.
ಓದಿ: ರಾಜ್ಯದಲ್ಲಿಂದು 3,979 ಮಂದಿಗೆ ಕೋವಿಡ್ ಪಾಸಿಟಿವ್, 138 ಮಂದಿ ಸಾವು