ಕುಷ್ಟಗಿ(ಕೊಪ್ಪಳ): ರಾಜ್ಯಾದ್ಯಂತ ಇಂದು ಕರ್ಫ್ಯೂ ಜಾರಿ ಹಿನ್ನೆಲೆ, ತಾಲೂಕಿನ ಜನತೆಯಿಂದ ಕರ್ಫ್ಯೂಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಪಟ್ಟಣ ವ್ಯಾಪ್ತಿಯ ಪ್ರಮುಖ ರಸ್ತೆಗಳಲ್ಲಿ ಹಾಗೂ ರಾಷ್ಟ್ರೀಯ ಹೆದ್ದಾರಿ-50 ರಲ್ಲಿ ವಾಹನ ಸಂಚಾರ ವಿರಳವಾಗಿತ್ತು. ಕೆಲವೇ-ಕೆಲವು ವಾಹನ ಸಂಚಾರ ಹೊರತು ಪಡಿಸಿದರೆ ತಾಲೂಕು ಸ್ತಬ್ಧವಾಗಿತ್ತು. ಈ ಕರ್ಫ್ಯೂಗೆ ಸ್ಪಂದಿಸಿದ ಅಂಗಡಿ ಮಾಲೀಕರು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿದ್ದರು. ಇನ್ನೂ ಅನಗತ್ಯವಾಗಿ ಸಂಚರಿಸುವ ಬೈಕ್ಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಳ್ಳುತ್ತಿದ್ದಾರೆ.