ಗಂಗಾವತಿ : ಲಾಕ್‌ಡೌನ್ ಬಳಿಕ ಇದೇ ಮೊದಲ ಬಾರಿಗೆ ಮದ್ಯ ಖರೀದಿಗೆ, ಮಾರಾಟಕ್ಕೆ ಸರ್ಕಾರ ಅವಕಾಶ ನೀಡಿದೆ. ಎಣ್ಣೆಪ್ರಿಯರು ನಗರದ ಮದ್ಯದಂಗಡಿಗಳ ಮುಂದೆ ಬೆಳಗ್ಗೆಯಿಂದಲೇ ಸಾಲಿನಲ್ಲಿ ನಿಂತು ಎಣ್ಣೆ ಖರೀದಿಸಿದರು.
ರಾಯಚೂರು ರಸ್ತೆಯ ಎಂಎಸ್ಐಎಲ್ ಮದ್ಯದ ಮಳಿಗೆಯ ಮುಂದೆ ಎಣ್ಣೆ ಕೊಳ್ಳಲು ಗ್ರಾಹಕರ ದೊಡ್ಡ ದಂಡೇ ಸೇರಿತ್ತು. ಪೊಲೀಸರು ಗ್ರಾಹಕರನ್ನು ನಿಯಂತ್ರಿಸಲು ಹರಸಾಹಸ ಪಡಬೇಕಾಯ್ತು. ಈ ಸಂದರ್ಭ ಕೆಲವರಿಗೆ ಲಾಠಿ ರುಚಿಯನ್ನೂ ತೋರಿಸಬೇಕಾಯ್ತು.
ಒಂದುವರೆ ತಿಂಗಳಿಂದ ಎಣ್ಣೆ ಸಿಗದೇ ಕಂಗಲಾಗಿದ್ದ ಜನ ನಾಳೆಯಿಂದ ಅಂಗಡಿಗಳು ಮತ್ತೆ ಬಂದಾಗಲಿವೆ ಎಂಬ ವದಂತಿ ಹಿನ್ನೆಲೆ ಹೆಚ್ಚಿನ ಸಂಖ್ಯೆಯಲ್ಲಿ ಮದ್ಯ ಕೊಳ್ಳಲು ಮುಂದಾಗಿದ್ದಾರೆ ಎನ್ನಲಾಗಿದೆ.