ETV Bharat / state

ಗಂಗಾವತಿ: ದುರ್ಗಾ ಬೆಟ್ಟದಲ್ಲಿ ಮತ್ತೊಂದು ಚಿರತೆ ಸೆರೆ, ಮೃಗಾಲಯಕ್ಕೆ ಸ್ಥಳಾಂತರ - Gangavathi latest news

ದುರ್ಗಾ ಬೆಟ್ಟದಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಚಿರತೆ ಬಿದ್ದಿದೆ. ಕಳೆದ ಡಿಸೆಂಬರ್ ತಿಂಗಳಲ್ಲಿ ಚಿರತೆಯೊಂದು ಸೆರೆಯಾಗಿತ್ತು. ಇದೀಗ ಎರಡನೇ‌ ಚಿರತೆ ಇದಾಗಿದ್ದು, ಜನರಲ್ಲಿ ಭೀತಿ ಹೆಚ್ಚಾಗಿದೆ.

gangavati
ಸೆರೆಯಾದ ಮತ್ತೊಂದು ಚಿರತೆ
author img

By

Published : Jan 18, 2021, 6:16 AM IST

Updated : Jan 18, 2021, 12:47 PM IST

ಗಂಗಾವತಿ: ತಾಲೂಕಿನ ದುರ್ಗಾ ಬೆಟ್ಟದಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬೆಳಗ್ಗೆ ಮೂರು ಗಂಟೆಯ ಸುಮಾರಿಗೆ ಗಂಡು ಚಿರತೆಯೊಂದು ಬಿದ್ದಿದೆ.

ಸೆರೆಯಾದ ಮತ್ತೊಂದು ಚಿರತೆ

ಬೆಳಗ್ಗೆ ದೇಗುಲದ ಸಿಬ್ಬಂದಿ ಯುವಕರು ಬೋನಿನಲ್ಲಿ ಸೆರೆಯಾದ ಚಿರತೆಯನ್ನು ಗಮನಿಸಿದ್ದಾರೆ. ಬಳಿಕ ದೇಗುಲದ ಪ್ರಧಾನ ಅರ್ಚಕ ಬ್ರಹ್ಮಯ್ಯ ಅವರ ಗಮನಕ್ಕೆ ತಂದಿದ್ದಾರೆ. ಸ್ಥಳಕ್ಕೆ ಆಗಮಿಸಿದ ದೇಗುಲದ ಸಿಬ್ಬಂದಿ‌ ಕೂಡಲೇ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಇದೇ ದುರ್ಗಾ ಬೆಟ್ಟದಲ್ಲಿ ಕಳೆದ ಡಿಸೆಂಬರ್ ತಿಂಗಳಲ್ಲಿ ಚಿರತೆಯೊಂದು ಸೆರೆಯಾಗಿತ್ತು. ಇದೀಗ ಎರಡನೇ‌ ಚಿರತೆ ಇದಾಗಿದೆ.

ಅರಣ್ಯಾಧಿಕಾರಿಗಳು ಚಿರತೆಯನ್ನು ಕಮಲಾಪುರದ ಸಮೀಪ ಇರುವ ಮೃಗಾಲಯಕ್ಕೆ ಸ್ಥಳಾಂತರಿಸಿದ್ದಾರೆ. ಸೆರೆಯಾದ ಚಿರತೆ 6ರಿಂದ 8 ವರ್ಷ ಪ್ರಾಯದ್ದಾಗಿದೆ. ಬೋನಿನಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಚಿರತೆಗೆ ಕೊಂಚ ತರಚಿತ ಗಾಯಗಳಾಗಿದ್ದು, ಸಂಪೂರ್ಣ ಆರೋಗ್ಯವಾಗಿದೆ. ಮತ್ತೊಮ್ಮೆ ಅದರ ಆರೋಗ್ಯ ಪರೀಕ್ಷಿಸಲಾಗುವುದು ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ಬೆಟ್ಟದಲ್ಲಿ ಇನ್ನೂ ಎಷ್ಟು ಚಿರತೆಗಳಿವೆ ಎಂಬುದರ ಬಗ್ಗೆ ಮಾಹಿತಿ ದೊರೆತಿಲ್ಲ. ಆದರೆ, ಜನರಲ್ಲಿ ಚಿರತೆಗಳ ಬಗ್ಗೆ ಆತಂಕ ಮಾತ್ರ ದೂರವಾಗಿಲ್ಲ.

Last Updated : Jan 18, 2021, 12:47 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.