ಕುಷ್ಟಗಿ: ಪುರಸಭೆ, ತಾಲೂಕು ಸರ್ಕಾರಿ ಆಸ್ಪತ್ರೆ ಮತ್ತು ಹಳೆ ಪ್ರವಾಸಿ ಮಂದಿರ ಸೇರಿದಂತೆ ಇತರೆ ಸಿಮೆಂಟ್ ಕಾಂಕ್ರೀಟ್ ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ.
ಈ ರಸ್ತೆಗಳ ಎರಡು ಸ್ಲ್ಯಾಬ್ಗಳು ಹಾಳಾಗಿವೆ. ಚರಂಡಿ ಅವೈಜ್ಞಾನಿಕ ರೀತಿಯಲ್ಲಿ ನಿರ್ಮಿಸಲಾಗಿದ್ದು, ಪಕ್ಕದ ಕಿರು ಚರಂಡಿಗೆ ಪಿಡಬ್ಲ್ಯುಡಿ ವಸತಿ ಗೃಹಗಳಿಂದ ಹರಿದು ಬರುವ ತ್ಯಾಜ್ಯ ನೀರಿನಿಂದ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಸಂಚರಿಸುವಂತಾಗಿದೆ.
ರಾತ್ರಿ ವೇಳೆ ಸ್ಥಳೀಯರು ಇದೇ ರಸ್ತೆಯಲ್ಲಿ ಬಯಲು ಬಹಿರ್ದೆಸೆಗೆ ಮುಂದಾಗುತ್ತಾರೆ. ವಾಹನ ಸವಾರರು ಹಾಗೂ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಸಂಚರಿಸುವಂತಾಗಿದೆ. ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳು ಗಮನ ಹರಿಸಬೇಕಿದೆ.