ಕೊಪ್ಪಳ: ಕೊರೊನಾ ಸೋಂಕಿನ ಎರಡನೇ ಅಲೆ ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡಿದ್ದರೂ ಇಲ್ಲಿನ ಕೆಲವು ಗ್ರಾಮಗಳ ಜನರು ಮಾರಕ ಸೋಂಕಿನ ಭಯವಿಲ್ಲದೆ ಜೀವನ ನಡೆಸುತ್ತಿದ್ದಾರೆ.
ಕೊಪ್ಪಳ ಜಿಲ್ಲೆಯಲ್ಲಿ ಸುಮಾರು 650 ಕ್ಕೂ ಹೆಚ್ಚು ಗ್ರಾಮಗಳಿವೆ. 153 ಗ್ರಾಮ ಪಂಚಾಯತಿಗಳನ್ನು ಹೊಂದಿರುವ ಜಿಲ್ಲೆಯಲ್ಲಿ ಸುಮಾರು 82 ಗ್ರಾಮ ಪಂಚಾಯಿತಿ ವ್ಯಾಪ್ತಿಯ 152 ಗ್ರಾಮಗಳಲ್ಲಿ ಕೊರೊನಾ ಸೋಂಕು ಸುಳಿದಿಲ್ಲ.
'ಇಲ್ಲಿ ಜನರು ಊರಿಂದ ಬೇರೆ ಊರಿಗೆ ಹೋಗಿಲ್ಲ. ಕೊರೊನಾ ಆರಂಭವಾದಾಗಿನಿಂದ ಬೇರೆ ಊರಿನ ಸಂಬಂಧಿಕರನ್ನು ಸಹ ಬರದಂತೆ ಹೇಳಿದ್ದೇವೆ. ಈಗಿನ ಸ್ಥಿತಿ ಹೇಗಿದೆ ಎಂಬುದನ್ನು ಅರ್ಥ ಮಾಡಿಕೊಂಡಿದ್ದೇವೆ. ಊರಿಗೆ ಬರಬೇಡಿ ಎಂದು ಹೇಳಿದರೆ ಸಂಬಂಧಿಕರು ಬೇಜಾರಾಗೋದಿಲ್ಲ. ಹೀಗಾಗಿ ನಾವೂ ಸಹ ನಮ್ಮ ಸಂಬಂಧಿಕರ ಊರಿಗೆ ಹೋಗಿಲ್ಲ, ಅವರೂ ಸಹ ನಮ್ಮ ಊರಿಗೆ ಬಂದಿಲ್ಲ. ಮುಂಜಾಗ್ರತಾ ಕ್ರಮವಾಗಿ ಗ್ರಾಮದಲ್ಲಿ ಸ್ಯಾನಿಟೈಸ್ ಮಾಡಿಸಿದ್ದೇವೆ. ನಿಯಮಗಳನ್ನು ಪಾಲಿಸುತ್ತಿದ್ದೇವೆ. ಹೀಗಾಗಿ ನಮ್ಮ ಗ್ರಾಮದಲ್ಲಿ ಈವರೆಗೂ ಕೊರೊನಾ ಸೋಂಕು ಸುಳಿದಿಲ್ಲ' ಎನ್ನುತ್ತಾರೆ ಯಲಬುರ್ಗಾ ತಾಲೂಕಿನ ಬಳೂಟಗಿ ತಾಂಡಾದ ಮುತ್ತಣ್ಣ ಪಮ್ಮಾರ.
ಇದನ್ನೂ ಓದಿ: ಕೊರೊನಾ ಸಂಕಷ್ಟದ ನಡುವೆ ಮತ್ತೊಂದು ಬರೆ.. ಏರಿಕೆ ಆಗಲಿದ್ಯಾ ಬಿಎಂಟಿಸಿ ಟಿಕೆಟ್ ದರ!?