ಕೊಪ್ಪಳ: ಲಾಕ್ಡೌನ್ನ ಕೆಲ ನಿಯಮಗಳನ್ನು ಸಡಿಲಿಸಿ ಬಸ್ ಪ್ರಾರಂಭವಾಗಿ ಇಂದಿಗೆ ಐದು ದಿನಗಳಾಗುತ್ತಿವೆ. ಇಂದು ಪ್ರಯಾಣಿಕರ ಸಂಖ್ಯೆಗನುಗುಣವಾಗಿ ಬಸ್ಗಳಿಲ್ಲದೆ ಜನರು ಇಂದು ಕೊಪ್ಪಳ ಬಸ್ ನಿಲ್ದಾಣದಲ್ಲಿ ಪರದಾಟ ನಡೆಸಿದ ಸ್ಥಿತಿ ಕಂಡು ಬಂದಿತು.
ನಗರದ ಕೇಂದ್ರೀಯ ಬಸ್ ನಿಲ್ದಾಣದಿಂದ ಕುಷ್ಟಗಿ, ಗಂಗಾವತಿ, ಮುಂಡರಗಿ, ಹೊಸಪೇಟೆ ಭಾಗಕ್ಕೆ ಬಸ್ ಕೊರತೆ ಕಂಡು ಬಂದಿತು. ಇದರಿಂದಾಗಿ ಈ ಭಾಗಗಳಿಗೆ ತೆರಳಬೇಕಾಗಿದ್ದ ಪ್ರಯಾಣಿಕರು ಬಸ್ಗಾಗಿ ಕಾದು ಸುಸ್ತಾದರು. ಅಲ್ಲದೆ ಸಾರಿಗೆ ಸಂಸ್ಥೆಯ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಭಾನುವಾರ ಸಂಪೂರ್ಣ ಲಾಕ್‌ಡೌನ್ ಇರುವುದರಿಂದ ಇಂದು ಪ್ರಯಾಣಿಕರು ತುಸು ಹೆಚ್ಚಿಗೆ ಕಂಡು ಬಂದರೂ ಸಹ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಪ್ರಯಾಣಿಕರ ಸಂಖ್ಯೆಗನುಗುಣವಾಗಿ ಬಸ್ ಬಿಡುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.