ETV Bharat / state

ನಗರದಲ್ಲಿ ಕೊರೊನಾ ಸೋಂಕಿತ ಓಡಾಡಿದ ಸುದ್ದಿ: ಆಸ್ಪತ್ರೆಗೆ ಶಾಸಕ ಪರಣ್ಣ ಧಿಡೀರ್ ಭೇಟಿ - ಕೊಪ್ಪಳ ಕೊರೊನಾ ವೈರಸ್ ನ್ಯೂಸ್​

ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಬೆನ್ನಲ್ಲೇ ಕೊಪ್ಪಳದ ಗಂಗಾವತಿಯಲ್ಲಿ ಸೋಂಕಿತನೊಬ್ಬ ತಿರುಗಾಡುತ್ತಿದ್ದಾನೆ ಎಂಬ ಸುದ್ದಿ ಹರಿದಾಡಿತ್ತು. ನಗರದ ಪ್ರಮುಖ ವೃತ್ತದಲ್ಲಿ ಕೊರೊನಾ ರೋಗಿಯೊಬ್ಬ ಸುತ್ತಾಡುತ್ತಿದ್ದಾನೆ ಎಂಬ ಮಾಹಿತಿ ಹಿನ್ನೆಲೆ ಬೆಳಗ್ಗೆ ನಗರದ ಸರ್ಕಾರಿ ಉಪ ವಿಭಾಗ ಆಸ್ಪತ್ರೆಗೆ ಶಾಸಕ ಪರಣ್ಣ ಮುನವಳ್ಳಿ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

news spreads as coronavirus Infected man Travel in city
ನಗರದಲ್ಲಿ ಕೊರೊನಾ ಸೋಂಕಿತನ ಸಂಚಾರ ಸುದ್ದಿ-ಶಾಸಕ ಪರಣ್ಣ ಧಿಡೀರ್ ಆಸ್ಪತ್ರೆಗೆ ಭೇಟಿ
author img

By

Published : Mar 28, 2020, 12:37 PM IST

ಗಂಗಾವತಿ: ನಗರದ ಪ್ರಮುಖ ವೃತ್ತದಲ್ಲಿ ಕೊರೊನಾ ರೋಗಿಯೊಬ್ಬ ಸುತ್ತಾಡುತ್ತಿದ್ದಾನೆ ಎಂಬ ಮಾಹಿತಿ ಹಿನ್ನೆಲೆ ಬೆಳಗ್ಗೆ ನಗರದ ಸರ್ಕಾರಿ ಉಪ ವಿಭಾಗ ಆಸ್ಪತ್ರೆಗೆ ಶಾಸಕ ಪರಣ್ಣ ಮುನವಳ್ಳಿ ದಿಢೀರ್ ಭೇಟಿ ನೀಡಿದರು.

ಈ ವೇಳೆ ಸ್ವಯಂ ಸ್ಕ್ರೀನಿಂಗ್​ಗೆ ಒಳಗಾದ ಶಾಸಕರು, ಬೇರೆ ಸ್ಥಳದಿಂದ ಬಂದ ವ್ಯಕ್ತಿಯೊಬ್ಬನಿಗೆ ಕೊರೊನಾ ಸೋಂಕು ಇದ್ದು, ಆತ ನಗರದಲ್ಲಿ ಓಡಾಡಿದ್ದಾನೆ ಎಂಬ ಸುದ್ದಿ ಇದೆ. ಕೂಡಲೇ ಆರೋಗ್ಯ ಇಲಾಖೆ ಸಿಬ್ಬಂದಿ ಪೊಲೀಸರ ನೆರವು ಪಡೆದುಕೊಂಡು ಕಾರ್ಯಾಚರಣೆ ನಡೆಸಿ. ಅಲ್ಲದೇ ಬೇರೆ ಸ್ಥಳದಿಂದ ಬರುವ ಪ್ರತಿಯೊಬ್ಬರನ್ನೂ ಕಡ್ಡಾಯವಾಗಿ ಸ್ಕ್ರೀನಿಂಗ್ ಮಾಡಬೇಕು ಹಾಗೂ ಕಣ್ಗಾವಲು ಇಡಬೇಕು ಎಂದು ಆಸ್ಪತ್ರೆಯ ಸಿಬ್ಬಂದಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಆಸ್ಪತ್ರೆಯ ಸಿಎಂಒ ಡಾ. ಈಶ್ವರ ಸವುಡಿ ಹಾಜರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.