ಗಂಗಾವತಿ(ಕೊಪ್ಪಳ): ಹೊಸ ವರ್ಷದ ಪ್ರಯುಕ್ತ ತಾಲ್ಲೂಕಿನ ಚಿಕ್ಕರಾಂಪೂರದಲ್ಲಿರುವ ಪ್ರಮುಖ ಧಾರ್ಮಿಕ ತಾಣವಾದ ಅಂಜನಾದ್ರಿಯಲ್ಲಿ ಹೊಸ ವರ್ಷದ ಮೊದಲ ದಿನದಂದು ದೇವರ ದರ್ಶನ ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಜನ ಆಗಮಿಸಿದ್ದರು.
ಭಾನುವಾರ ಮುಂಜಾನೆಯಿಂದಲೇ ಅಧಿಕ ಸಂಖ್ಯೆಯಲ್ಲಿ ಜನರು ದೇವಸ್ಥಾನಕ್ಕೆ ಬಂದು ದೇವರ ದರ್ಶನ ಪಡೆದರು. ಸಂಜೆಯ ಹೊತ್ತಿಗೆ ಇನ್ನಷ್ಟು ಜನಸಂದಣಿ ಹೆಚ್ಚಾಯಿತು. ಯಾವುದೇ ಹಬ್ಬ-ಹರಿದಿನವಿಲ್ಲವಾದರೂ ಹೊಸ ವರ್ಷದ ಮೊದಲ ದಿನದಂದು ದೊಡ್ಡ ಪ್ರಮಾಣದಲ್ಲಿ ಜನರು ಭೇಟಿ ನೀಡಿರುವುದು ದೇವಸ್ಥಾನದ ಆಡಳಿತ ಮಂಡಳಿಗೆ ಸಂತಸ ತಂದಿದೆ.
ಕೆಲವರು ಬೆಟ್ಟದ ಮೇಲಿಯೇ ಕೇಕ್ ಕತ್ತರಿಸಿದ ಹೊಸ ವರ್ಷ ಆಚರಣೆಗೆ ಮಾಡಿದರು. ಬೆಳಗಿನಿಂದ ಸಂಜೆಯವರೆಗೆ ಸುಮಾರು 25 ರಿಂದ 30 ಸಾವಿರ ಜನ ದೇಗುಲ ದರ್ಶನ ಮಾಡಿರುವ ಸಾಧ್ಯತೆ ಇದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.
ಇನ್ನೂ ಕೆಲವರು ದೂರದಿಂದಲೇ ಅಂಜನಾದ್ರಿ ಬೆಟ್ಟಕ್ಕೆ ಕೈಮುಗಿದು ಕುಟುಂಬದೊಂದಿಗೆ ಸಮೀಪದಲ್ಲಿರುವ ನಾನಾ ರೆಸಾರ್ಟ್ಗೆ ತೆರಳಿ ಊಟ, ಉಪಹಾರ ಸವಿದರು. ಕೆಲವೊಂದಿಷ್ಟು ಜನ ನದಿ ದಂಡೆಯ ಮೇಲೆ ಕುಟುಂಬ ಸಮೇತವಾಗಿ ಊಟ ಸೇವಿಸಿ ಹೊಸ ವರ್ಷವನ್ನು ಆಚರಿಸಿದರು.
ಇದನ್ನೂ ಓದಿ: ಸಚಿವ ಶ್ರೀರಾಮುಲು, ಸೋಮಶೇಖರ್ ರೆಡ್ಡಿ, ಶಾಸಕ ಪರಣ್ಣ ಮುನವಳ್ಳಿ ಅಂಜನಾದ್ರಿಗೆ ಭೇಟಿ