ಕೊಪ್ಪಳ: ಸಾರ್ವಜನಿಕರ ಸಹಕಾರದೊಂದಿಗೆ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಪುನಶ್ಚೇತನಗೊಳಿಸಿರುವ ಹಿರೇಹಳ್ಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಈ. ತುಕಾರಾಂ ಅವರು ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ಇದರ ಕುರಿತು ನಂತರ ಮಾತನಾಡಿದ ಸಚಿವ ಈ. ತುಕಾರಾಂ ಅವರು, ಬಂಗಾರ ಸಿಗಬಹುದು ಆದ್ರೆ ಅನ್ನ ನೀರು ಸಿಗೋದು ಕಷ್ಟ. ಹಿರೇಹಳ್ಳವನ್ನು ಸ್ವಚ್ಛಗೊಳಿಸುವ ಕಾರ್ಯಕ್ಕೆ ಕೈಹಾಕಿದ ಗವಿಶ್ರೀಗಳಿಗೆ ಅಭಿನಂದನೆ ಸಲ್ಲಿಸಬೇಕು.
ಅವರ ಈ ಕೆಲಸ ನಮಗೆಲ್ಲಾ ಮಾದರಿಯಾಗಿದೆ. ಅವರೇ ಮುಂದೆ ನಿಂತು ಹಳ್ಳವನ್ನು ಸ್ವಚ್ಚತೆಗೊಳಿಸುತ್ತಿರುವ ವಿಡಿಯೋ ನಾನು ನೋಡಿದ್ದೇನೆ. ಗವಿಸಿದ್ದೇಶ್ವರ ಮಹಾಸ್ವಾಮಿಗಳು ರಾಜ್ಯಕ್ಕೆ ಮಾದರಿಯಾಗಿದೆ. ಹಿರೇಹಳ್ಳವನ್ನೇ ಮಾದರಿಯಾಗಿಟ್ಟುಕೊಂಡು ಇನ್ನುಳಿದ ಕೆರೆ ಹಳ್ಳಗಳ ಅಭಿವೃದ್ಧಿಪಡಿಸಲು ಚಿಂತನೆ ಮಾಡುತ್ತೇವೆ. ನಾನು ಸಹ ನನ್ನ ಸ್ವಕ್ಷೇತ್ರದಲ್ಲಿರುವ ನಾರಿ ಹಳ್ಳವನ್ನು ಇದೇ ರೀತಿಯಾಗಿ ಸ್ವಚ್ಚಗೊಳಿಸಲು ತೀರ್ಮಾನಿಸಿದ್ದೇನೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಈ. ತುಕಾರಾಮ್ ಇದೇ ಸಂದರ್ಭದಲ್ಲಿ ಹೇಳಿದರು.