ETV Bharat / state

ಕುಷ್ಟಗಿ: ಮಗನ ಶಿವಗಣಾರಾಧನೆಯಲ್ಲಿ ಪ್ರಾಣ ಬಿಟ್ಟ ತಾಯಿ - ಮಗನ ಶಿವಗಣಾರಾಧನೆ ಸಂದರ್ಭದಲ್ಲಿ ತಾಯಿಗೆ ಹೃದಯಘಾತ

ಮಗನ ಶಿವಗಣಾರಾಧನೆ ಸಂದರ್ಭದಲ್ಲಿ ತಾಯಿಗೆ ಹೃದಯಘಾತವಾಗಿ ಮೃತಪಟ್ಟಿರುವ ಘಟನೆ ಕುಷ್ಟಗಿ ಪಟ್ಟಣದಲ್ಲಿ ನಡೆದಿದೆ.

ರವಿಕುಮಾರ ದುರಗಪ್ಪ ಕೆಂಗಾರಿ ಹಾಗೂ ತಾಯಿ
ರವಿಕುಮಾರ ದುರಗಪ್ಪ ಕೆಂಗಾರಿ ಹಾಗೂ ತಾಯಿ
author img

By

Published : Aug 17, 2022, 6:38 PM IST

ಕುಷ್ಟಗಿ: ಮಗನ ಶಿವಗಣಾರಾಧನೆ ಸಂದರ್ಭದಲ್ಲಿ ತಾಯಿಗೆ ಹೃದಯಾಘಾತವಾಗಿದೆ. ಹೀಗಾಗಿ, ಕೇವಲ 9 ದಿನಗಳ ಅಂತರದಲ್ಲಿ ತಾಯಿ ಮಗ ಇಬ್ಬರೂ ಸಾವಿಗೀಡಾದ ಘಟನೆ ನಡೆಯಿತು.

ಕುಷ್ಟಗಿ ಪಟ್ಟಣದ 14ನೇ ವಾರ್ಡ್​ ಅಂಬೇಡ್ಕರ್​ ನಗರದ ನಿವಾಸಿ ರವಿಕುಮಾರ ದುರಗಪ್ಪ ಕೆಂಗಾರಿ ಎಂಬುವವರು ಲೋ ಬಿಪಿಯಿಂದ ಕಳೆದ ಆ. 9ರಂದು ನಿಧನರಾಗಿದ್ದರು. ಈ ಹಿನ್ನೆಲೆಯಲ್ಲಿ ಅವರ ಮನೆಯಲ್ಲಿ ಬುಧವಾರ ಶಿವಗಣಾರಾಧನೆ ಕಾರ್ಯಕ್ರಮಕ್ಕಾಗಿ ಬಂಧು ವರ್ಗವನ್ನು ಅಹ್ವಾನಿಸಿದ್ದರು. ರವಿಕುಮಾರ ಕೆಂಗಾರಿ ಶಿವಗಣಾರಾಧನೆಯ ಪೂಜೆಯ ಸಿದ್ಧತೆಯ ಸಂದರ್ಭದಲ್ಲಿ ಮಗನ ಅಗಲಿಕೆಯ ಕೊರಗಿನಲ್ಲಿದ್ದ ತಾಯಿಗೆ ಹೃದಯಘಾತವಾಗಿ ಅವರು ಕೊನೆಯುಸಿರೆಳೆದಿದ್ದಾರೆ.

ಈ ಆಘಾತಕ್ಕೆ ಇನ್ನೋರ್ವ ಹಿರಿಯ ಪುತ್ರ ಗಜೇಂದ್ರಗಡ ತಹಶೀಲ್ದಾರ್​ ಆಗಿರುವ ರಜನೀಕಾಂತ ಕೆಂಗಾರಿಗೆ ಬಿಪಿ ಏರುಪೇರಾಗಿದ್ದರಿಂದ ಆಸ್ಪತ್ರೆ ಸೇರಿದ್ದಾರೆ. ಸಹೋದರ ನಾಗರಾಜ ಕೆಂಗಾರಿ ಸಹ ಆಸ್ಪತ್ರೆಗೆ ದಾಖಲಾಗಿದ್ದು ಆರೋಗ್ಯದಲ್ಲಿ ಚೇತರಿಕೆಯಾಗಿದೆ.

ಇದನ್ನೂ ಓದಿ: ರಾಯಚೂರು: ಬಿಸಿಯೂಟ ಸೇವಿಸಿ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.