ಗಂಗಾವತಿ : ಮತಾಂತರದ ಪಿಡುಗು ಇಂದು ಎಲ್ಲರ ಮನೆಗೆ ಹೊಕ್ಕಿದೆ. ಕಠಿಣ ಕಾನೂನು ತಾರದೇ ಹೋದಲ್ಲಿ ಭರತಖಂಡ ಕ್ರಿಶ್ಚಿಯನ್‌ಮಯವಾಗುವುದರಲ್ಲಿ ಸಂದೇಹವಿಲ್ಲ ಎಂದು ಶ್ರೀರಾಮ್ ಸೇನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಪ್ರಮೋದ್ ಮುತಾಲಿಕ್ ಆತಂಕ ವ್ಯಕ್ತಪಡಿಸಿದರು.
ನಗರದಲ್ಲಿ ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಾವಣಗೆರೆ ಜಿಲ್ಲೆಯೊಂದರಲ್ಲಿಯೇ ಸುಮಾರು ಒಂದುವರೆ ಲಕ್ಷ ಲಿಂಗಾಯತರು ಮತಾಂತರವಾಗಿರುವುದು ನಮ್ಮ ಸಮೀಕ್ಷೆಯಲ್ಲಿ ಬೆಳಕಿಗೆ ಬಂದಿದೆ. ಕೋಲಾರದಲ್ಲಿ ಸುಮಾರು ಐವತ್ತು ಸಾವಿರಕ್ಕೂ ಹೆಚ್ಚು ಒಕ್ಕಲಿಗ ಸಮುದಾಯದ ಗೌಡರು ಮತಾಂತರವಾಗಿದ್ದಾರೆ.
ಈ ದೇಶ ಮತ್ತು ರಾಜ್ಯದಲ್ಲಿ ಮತಾಂತರದ ವಿರುದ್ಧ ಕಠಿಣ ಕಾನೂನು ತರದೇ ಹೋದಲ್ಲಿ ಪ್ರತಿಯೊಬ್ಬರ ಮನೆಯಲ್ಲಿ ಮತಾಂತರ ನಡೆಯವ ದಿನಗಳು ದೂರವಿಲ್ಲ. ಕ್ರಿಶ್ಚಿಯನ್ ಮಿಷನರಿಗಳನ್ನು ನಿಯಂತ್ರಿಸಬೇಕು ಎಂದು ಸರ್ಕಾರವನ್ನ ಒತ್ತಾಯಿಸಿದರು.
ಮತಾಂತರದ ಬಗ್ಗೆ ದೇಶದಲ್ಲಿ ವ್ಯವಸ್ಥಿತ ಷಡ್ಯಂತ್ರ ನಡೆಯುತಿದೆ. ಇದನ್ನು ತಡೆಯಲು ಬಿಗಿಯಾದ ಕಾನೂನು ಜಾರಿಯಾಗಬೇಕು. ಮುಖ್ಯವಾಗಿ ಕ್ರಿಶ್ಚಿಯನ್ ಮತಾಂತರವನ್ನು ತಡೆಯಬೇಕು. ಇಲ್ಲವಾದಲ್ಲಿ ದೇಶದ ಭವಿಷ್ಯ ಅಸ್ಪಷ್ಟವಾಗಲಿದೆ.
ಮತಾಂತರ ಕೇವಲ ಮತ ಬದಲಾವಣೆಗೆ ಮಾತ್ರ ಸೀಮಿತವಾಗಿಲ್ಲ. ಆದರೆ, ಭೂಮಿಯನ್ನು ಬದಲಾವಣೆ ಮಾಡುವ ಹುನ್ನಾರ ನಡೆದಿದೆ. ನಾಗಭೂಮಿ ನಾಗಾಲ್ಯಾಂಡ್, ಬೋಡೋಭೂಮಿ, ಬೋಡೋಲ್ಯಾಂಡ್ ಆದಂತೆ ಮುಂದೊಂದು ದಿನದ ಭಾರತಲ್ಯಾಂಡ್ ಆಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.