ಗಂಗಾವತಿ: ನಗರಸಭೆ ಅನುಮತಿ ಪಡೆದುಕೊಳ್ಳದೇ ಖಾಸಗಿ ಮೊಬೈಲ್ ಸಂಸ್ಥೆಯೊಂದು ನಗರದ ಮುಖ್ಯರಸ್ತೆಯ ಪಕ್ಕದಲ್ಲಿನ ಸುಮಾರು ಎರಡು ಕಿ.ಮೀ. ಸ್ಥಳ ಅಗೆದು ಓಎಫ್ಸಿ ಕೇಬಲ್ ಅಳವಡಿಸಿರುವ ಘಟನೆ ಬೆಳಕಿಗೆ ಬಂದಿದೆ.
ಖಾಸಗಿ ಮೊಬೈಲ್ ಕಂಪನಿಯು ತನ್ನ ಸೇವೆಯ ಜಾಲ ಉನ್ನತೀಕರಿಸಿಕೊಳ್ಳುವ ಉದ್ದೇಶಕ್ಕೆ ಇಲ್ಲಿನ ಗಣೇಶ ವೃತ್ತದಿಂದ ರಾಣಾ ಪ್ರತಾಪ್ ಸಿಂಗ್ ವೃತ್ತದವರೆಗೆ ರಸ್ತೆಯ ಪಕ್ಕದಲ್ಲಿನ ಸ್ಥಳ ಅಗೆದು ಕೇಬಲ್ ಅಳವಡಿಸಿದೆ ಎನ್ನಲಾಗಿದೆ. ಆದರೆ, ನಗರದ ವ್ಯಾಪ್ತಿಯಲ್ಲಿ ಯಾವುದೇ ಕಾಮಗಾರಿ ಕೈಗೊಳ್ಳಬೇಕಿದ್ದರೂ ನಗರಸಭೆಗೆ ಮಾಹಿತಿ ನೀಡಿ, ನಿಗದಿತ ಶುಲ್ಕ ಪಾವತಿ ಮಾಡಿದ ಬಳಿಕವೇ ಕಾಮಗಾರಿಯ ಅನುಮತಿ ಪಡೆದುಕೊಳ್ಳಬೇಕು ಎಂಬ ನಿಯಮವಿದೆ. ಆದರೆ, ನಗರಸಭೆಯಿಂದ ಅನುಮತಿ ಪಡೆದುಕೊಳ್ಳದೇ ಮುನ್ನವೇ ಖಾಸಗಿ ಮೊಬೈಲ್ ಸಂಸ್ಥೆ ಕಾಮಗಾರಿ ಕೈಗೊಂಡಿದೆ.
ಪ್ರಕರಣ ಗಮನಕ್ಕೆ ಬರುತ್ತಿದಂತೆಯೇ ಸ್ಥಳಕ್ಕೆ ತೆರಳಿದ ನಗರಸಭೆಯ ಸಿಬ್ಬಂದಿ ಸಂಸ್ಥೆಯ ಕೆಲ ಪರಿಕರಗಳನ್ನು ವಶಕ್ಕೆ ಪಡೆದುಕೊಂಡು ಸಂಸ್ಥೆಗೆ ನೋಟಿಸ್ ನೀಡಿದ್ದಾರೆ.
ಇದನ್ನೂ ಓದಿ: UNSC ಆದ್ಯತೆ ಬಗ್ಗೆ ಭಾರತ, ಐರ್ಲೆಂಡ್ ಮಾತುಕತೆ