ETV Bharat / state

ಯುವಕರ ವಿಭಿನ್ನ ಪ್ರತಿಭಟನೆಗೆ ಮಣಿದ ಶಾಸಕರು: ರಸ್ತೆ ಕಾಮಗಾರಿಗೆ ಚಾಲನೆ - koppal news

ರಸ್ತೆಯಲ್ಲಿಯೇ ಭತ್ತದ ನಾಟಿ ಮಾಡಿ ವ್ಯಂಗ್ಯ ಮಾಡುವ ಮೂಲಕ ನೋವು ತೋಡಿಕೊಂಡಿದ್ದ ಹಾಗೂ ಸಮಸ್ಯೆಯನ್ನು ವಿಭಿನ್ನವಾಗಿ ಸಮಾಜಕ್ಕೆ ತಿಳಿಸಿದ್ದ ಯುವಕರ ಕಾರ್ಯಕ್ಕೆ ಕೊನೆಗೂ ಯಶಸ್ಸು ಲಭಿಸಿದೆ.

MLA response the youth protest in gangavathi
ಯುವಕರ ವಿಭಿನ್ನ ಪ್ರತಿಭಟನೆಗೆ ಮಣಿದ ಶಾಸಕರು: ರಸ್ತೆ ಕಾಮಗಾರಿಗೆ ಚಾಲನೆ
author img

By

Published : Sep 10, 2021, 3:29 AM IST

ಗಂಗಾವತಿ: ಹದಗೆಟ್ಟು ಹೋಗಿದ್ದ ರಸ್ತೆಯಿಂದ ರೋಸಿ ಹೋಗಿದ್ದ ಯುವಕರು ರಸ್ತೆಯಲ್ಲಿಯೇ ಭತ್ತದ ನಾಟಿ ಮಾಡಿ ವ್ಯಂಗ್ಯ ಮಾಡುವ ಮೂಲಕ ಆಕ್ರೋಶ ಹೊರಹಾಕಿದ್ದರು. ಇದರಿಂದ ಎಚ್ಚೆತ್ತ ಶಾಸಕ ಬಸವರಾಜ ದಢೇಸ್ಗೂರು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ಸುದ್ದಿ ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತ ಶಾಸಕರು, ಕಾರಟಗಿ ತಾಲೂಕಿನ ಸಿದ್ದಾಪುರ ಹೋಬಳಿಯ ಉಳೇನೂರು-ನಂದಿಹಳ್ಳಿ ರಸ್ತೆಯ ಸುಧಾರಣೆಗೆ ಚಾಲನೆ ನೀಡಿದ್ದಾರೆ.

ಯುವಕರ ವಿಭಿನ್ನ ಪ್ರತಿಭಟನೆಗೆ ಮಣಿದ ಶಾಸಕರು

ಈ ಹಿಂದೆ ಪ್ರಕಟ ಆಗಿದ್ದ ಸುದ್ದಿ: ಹದಗೆಟ್ಟ ರಸ್ತೆ ಮಳೆಯಿಂದ ಮತ್ತಷ್ಟು ಎಕ್ಕುಟ್ಹೋಯ್ತು.. ಸಸಿನೆಟ್ಟು ಯುವಕರಿಂದ ವ್ಯವಸ್ಥೆಯ ಅಣುಕು..

ಕಾಮಗಾರಿ ಆರಂಭಿಸಲಾದ ಸ್ಥಳಕ್ಕೆ ಶಾಸಕ ಬಸವರಾಜ ಅವರ ಪುತ್ರ ಕೊಪ್ಪಳ ಜಿಲ್ಲಾ ಬಿಜೆಪಿ ಯುವ ಮೋರ್ಚಾದ ಉಪಾಧ್ಯಕ್ಷ ಮೌನೇಶ ದಢೇಸ್ಗೂರು, ಉಳೇನೂರು ಗರಾಮ ಪಂಚಾಯಿತಿ ಅಧ್ಯಕ್ಷ ಧನಂಜಯ ಸೇರಿದಂತೆ ಮುಖಂಡರು ಆಗಮಿಸಿ ಕಾಮಗಾರಿ ವೀಕ್ಷಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.