ಕುಷ್ಟಗಿ(ಕೊಪ್ಪಳ) : ತಾಲೂಕಿನ ನಿಡಶೇಸಿ ಕೆರೆಯ ದಡದಲ್ಲಿ 5 ಎಕರೆ ಪ್ರದೇಶದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃಧ್ಧಿ ಯೋಜನೆಯಲ್ಲಿ ₹1.5 ಕೋಟಿ ಯೋಜನಾ ವೆಚ್ಚದಲ್ಲಿ ನಿರ್ಮಾಣ ಹಂತದ ಉದ್ಯಾನವನ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಇಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಸ್ಥಳಕ್ಕೆ ಭೇಟಿ ನೀಡಿ ಗುಣಮಟ್ಟ ಪರಿಶೀಲಿಸಿದರು.
ನಿಡಶೇಸಿ ಕೆರೆಯ ದಡದಲ್ಲಿ ಉದ್ಯಾನವನ ನಿರ್ಮಾಣದಿಂದ ಕೆರೆಯ ನೈಸರ್ಗಿಕ ಕಳೆ ಹೆಚ್ಚಲಿದ್ದು, ಜನಾಕರ್ಷಕ ತಾಣವೆನಿಸಲಿದೆ ಎಂದರು. ಕೆಆರ್ಐಡಿಎಲ್ ಕಾಲಮಿತಿಯಲ್ಲಿ ನಿರ್ಮಿಸಲು ಹಾಗೂ ಗುಣಮಟ್ಟದ ಕಾಮಗಾರಿಯಾಗಿ ಹಾಗೂ ಮಾದರಿಯಾಗಿ ನಿರ್ಮಿಸಲು ಕೆಆರ್ಐಡಿಎಲ್ಜೆಇ ಮೊಹ್ಮದ್ ಇಫ್ರಾನ್ ಅವರಿಗೆ ಸೂಚಿಸಿದರು.
1.5 ಕೋಟಿ ರೂ. ವೆಚ್ಚದಲ್ಲಿ 5 ಎಕರೆ ಪ್ರದೇಶದಲ್ಲಿ ಏಳು ಅಡಿ ಎತ್ತರ ಆವರಣ ಗೋಡೆ ನಿರ್ಮಿಸಲಾಗುತ್ತಿದ್ದು, ಕೆಳ ಹಂತದಲ್ಲಿ 3 ಅಡಿ, ಮೇಲ್ಭಾಗದಲ್ಲಿ 4 ಅಡಿ ಗ್ರೀಲ್ನಿಂದ ಕೂಡಿದೆ. ಒಳ ಭಾಗದಲ್ಲಿ ವಾಯು ವಿಹಾರಕ್ಕಾಗಿ ಪಾದಚಾರಿ ರಸ್ತೆಗಾಗಿ ಪ್ಲೇವರ್ಸ್ ಅಳವಡಿಸುತ್ತಿರುವುದಾಗಿ ಹಾಗೂ ಪ್ರವೇಶ ದ್ವಾರ ನಿರ್ಮಿಸುತ್ತಿರುವ ಕುರಿತು ಕೆಆರ್ಐಡಿಎಲ್ಜೆಇ ಮೊಹಮ್ಮದ್ ಇಫ್ರಾನ್ ಅವರಿಂದ ಮಾಹಿತಿ ಪಡೆದರು.