ETV Bharat / state

ದೆಹಲಿಯಲ್ಲಿ ಗಂಗಾವತಿ ಮಾದರಿ ಆಸ್ಪತ್ರೆ ಅನುಷ್ಠಾನಕ್ಕೆ ಯತ್ನಿಸುವೆ: ಶಾಸಕ ಅಜಯ್ ಮಹಾರ್ - ಗಂಗಾವತಿ ಉಪ ವಿಭಾಗೀಯ ಆಸ್ಪತ್ರೆ

ಗಂಗಾವತಿ ಮಾದರಿಯ ಆಸ್ಪತ್ರೆಯನ್ನು ದೆಹಲಿಯ ನನ್ನ ಕ್ಷೇತ್ರದಲ್ಲಿ ಅಳವಡಿಸಿಕೊಳ್ಳಲು ಯತ್ನಿಸುವುದಾಗಿ ದೆಹಲಿಯ ಲೋಂಡಾ ಕ್ಷೇತ್ರದ ಶಾಸಕ ಅಜಯ್ ಮಹಾರ್ ಹೇಳಿದ್ಧಾರೆ.

ajay mahar
ಶಾಸಕ ಅಜಯ್ ಮಹಾರ್
author img

By

Published : May 8, 2023, 10:03 AM IST

ಶಾಸಕ ಅಜಯ್ ಮಹಾರ್ ಹೇಳಿಕೆ

ಗಂಗಾವತಿ (ಕೊಪ್ಪಳ) : ಇಲ್ಲಿನ ಉಪ ವಿಭಾಗ ಆಸ್ಪತ್ರೆಯು ಯಾವುದೇ ಖಾಸಗಿ ಕಾರ್ಪೊರೇಟ್​ ಆಸ್ಪತ್ರೆಗಳಿಗೆ ಕಡಿಮೆ ಇಲ್ಲದಂತೆ ರೋಗಿಗಳಿಗೆ ಸುಸಜ್ಜಿತ ಸೌಲಭ್ಯ ಕಲ್ಪಿಸುತ್ತಿದ್ದು ಇದೊಂದು ಮಾದರಿ ಆಸ್ಪತ್ರೆಯಾಗಿದೆ. ಗಂಗಾವತಿ ಮಾದರಿಯ ಆಸ್ಪತ್ರೆಯನ್ನು ದೆಹಲಿಯ ನನ್ನ ಕ್ಷೇತ್ರದಲ್ಲಿಯೂ ಅಳವಡಿಸಿಕೊಳ್ಳಲು ಯತ್ನಿಸುವುದಾಗಿ ದೆಹಲಿಯ ಲೋಂಡಾ ಕ್ಷೇತ್ರದ ಶಾಸಕ ಅಜಯ್ ಮಹಾರ್ ತಿಳಿಸಿದರು. ಉಪ ವಿಭಾಗ ಸರ್ಕಾರಿ ಆಸ್ಪತ್ರೆಯು ರಾಜ್ಯದಲ್ಲಿ ಸತತ ಮೂರನೇ ಬಾರಿಗೆ ಕೇಂದ್ರ ಸರ್ಕಾರ ನೀಡುವ ಕಾಯಕಲ್ಪ ಪ್ರಶಸ್ತಿ ಪಡೆದುಕೊಂಡ ಮಾಹಿತಿ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಭೇಟಿ ನೀಡಿದ ಶಾಸಕ, ಇಲ್ಲಿನ ವ್ಯವಸ್ಥೆಗಳ ಬಗ್ಗೆ ಪರಿಶೀಲನೆ ನಡೆಸಿದರು.

ಆಸ್ಪತ್ರೆಯ ಆಡಳಿತಾಧಿಕಾರಿ ಹಾಗೂ ಸ್ತ್ರೀರೋಗ ವಿಭಾಗದ ಮುಖ್ಯಸ್ಥ ಡಾ. ಈಶ್ವರ ಸವುಡಿ ಮಾತನಾಡಿ, ಇದು ರಾಜ್ಯ ಮಟ್ಟದಲ್ಲಿ ಸತತ ಮೂರು ಬಾರಿ ಕಾಯಕಲ್ಪ ಪ್ರಶಸ್ತಿ ಪಡೆದ ರಾಜ್ಯದ ಏಕೈಕ ಆಸ್ಪತ್ರೆ. ಎಂಬಿಬಿಎಸ್ ವ್ಯಾಸಂಗ ಮಾಡುತ್ತಿರುವ ವೈದ್ಯರಿಗೆ ಸಹಜವಾಗಿ ಜಿಲ್ಲಾಸ್ಪತ್ರೆಗಳಲ್ಲಿ ತರಬೇತಿ ನೀಡಲಾಗುತ್ತದೆ. ಆದರೆ ಆಸ್ಪತ್ರೆಯ ವೈದ್ಯಕೀಯ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಬೇತಿ ನೀಡುತ್ತಿರುವ ರಾಜ್ಯದ ಏಕೈಕ ಉಪ ವಿಭಾಗ ಆಸ್ಪತ್ರೆಯಾಗಿ ಗುರುತಿಸಿಕೊಂಡಿದೆ. ಸ್ವಚ್ಛತೆ, ಸಹಜ ಹೆರಿಗೆ, ಅತಿ ಹೆಚ್ಚು ಒಪಿಡಿ ರೋಗಿಗಳು, ಚಿಕಿತ್ಸೆಗಾಗಿ ದಾಖಲಾಗುವ ರೋಗಿಗಳು ಅಂಕಿ-ಅಂಶ, ರಾಜ್ಯ ಸರ್ಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವ ಮಾನದಂಡದಲ್ಲಿ ಆಸ್ಪತ್ರೆಯು ರಾಜ್ಯದಲ್ಲಿಯೇ ಮೊದಲ ಸ್ಥಾನದಲ್ಲಿದೆ ಎಂದು ವಿವರಣೆ ನೀಡಿದರು.

1985ರಲ್ಲಿ ಆರಂಭ: 1985ರಲ್ಲಿ ಕೇವಲ 30 ಬೆಡ್‌ಗಳೊಂದಿಗೆ ಶುರುವಾಗಿ 2004-05 ರಲ್ಲಿ ನೂರು ಹಾಸಿಗೆಯ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿತು. ತಾಯಿ ಮತ್ತು ಮಗುವಿನ ಸುರಕ್ಷತೆಗೆ ಮೊದಲ ಆದ್ಯತೆ ನೀಡಲಾಗುತ್ತಿದೆ. ಇಡೀ ರಾಜ್ಯದಲ್ಲಿಯೇ ಅತಿಹೆಚ್ಚು ಸಹಜ ಹೆರಿಗೆ ಮಾಡುವ ಆಸ್ಪತ್ರೆಯಾಗಿ ಇದು ಗುರುತಿಸಿಕೊಂಡಿದೆ. ಮಾಸಿಕ 200 ರಿಂದ 250 ಹೆರಿಗೆ ಮಾಡಿಸಲಾಗುತ್ತಿದೆ. ರೋಗಿಗಳು ನಿತ್ಯ ಹೆಚ್ಚಿನ ಪ್ರಮಾಣದಲ್ಲಿ ಆಸ್ಪತ್ರೆಗೆ ಬರುತ್ತಿದ್ದಾರೆ. ಗಂಗಾವತಿ ಮಾತ್ರವಲ್ಲ, ಕೊಪ್ಪಳ ಜಿಲ್ಲೆಯ ಐದೂ ವಿಧಾನಸಭಾ ಕ್ಷೇತ್ರದಿಂದ ರೋಗಿಗಳು ಬರುತ್ತಾರೆ. ಹೊಸಪೇಟೆ, ಬಳ್ಳಾರಿ, ಸಿಂಧನೂರು, ಮಾನ್ವಿ, ಲಿಂಗಸಗೂರು, ಗದಗ ಸೇರಿದಂತೆ ನೆರೆ-ಹೊರೆಯ ಜಿಲ್ಲೆಯಿಂದಲೂ ರೋಗಿಗಳು ಚಿಕಿತ್ಸೆಗಾಗಿ ಈ ಸರ್ಕಾರಿ ಆಸ್ಪತ್ರೆಗೆ ಬರುತ್ತಿದ್ದಾರೆ ಎಂದು ಮಾಹಿತಿ ಒದಗಿಸಿದರು.

ದೆಹಲಿ ವಿಪಕ್ಷ ನಾಯಕ ಹಾಗೂ ಲೋಂಧಾ ಕ್ಷೇತ್ರದ ಬಿಜೆಪಿ ಶಾಸಕ ಅಜಯ್ ಮಹರ್ ಪ್ರತಿಕ್ರಿಯಿಸಿ, ಚುನಾವಣಾ ಕಾರ್ಯದ ನಿಮಿತ್ತ ಪಕ್ಷ ನನ್ನನ್ನು ಇಲ್ಲಿಗೆ ನಿಯೋಜನೆ ಮಾಡಿತ್ತು. ಈ ಆಸ್ಪತ್ರೆಯ ಬಗ್ಗೆ ಈ ಹಿಂದೆ ಕೇಳಿದ್ದೆ. ಹೊಸಪೇಟೆಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುವ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕಿದ್ದರಿಂದ ಕೊರೊನಾ ಪರೀಕ್ಷೆಗೆ ಒಳಗಾಗಲು ಇಲ್ಲಿಗೆ ಬಂದಿದ್ದೆ. ಆಗ ಆಸ್ಪತ್ರೆಯಲ್ಲಿನ ಸ್ವಚ್ಛತೆ, ಪ್ರತಿಯೊಂದು ವಿಭಾಗದಲ್ಲಿನ ಶಿಸ್ತು ಗಮನಿಸಿದ್ದೇನೆ. ಮೋದಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಅಂದು ತುರ್ತಾಗಿ ತೆರಳಿದ್ದೆ. ಇದೀಗ ಮತ್ತೊಮ್ಮೆ ಆಗಮಿಸಿದ್ದು ಇಲ್ಲಿನ ಸರ್ಕಾರಿ ಉಪವಿಭಾಗ ಆಸ್ಪತ್ರೆಯ ಪ್ರತಿಯೊಂದು ವಿಭಾಗದ ಆಡಳಿತ ಇತರ ಸರ್ಕಾರಿ ಆಸ್ಪತ್ರೆಗೆ ಮಾದರಿ. ದೆಹಲಿಯಲ್ಲಿ ಅಳವಡಿಸಲು ಚಿಂತನೆ ನಡೆಸುತ್ತೇನೆ ಎಂದರು.

ಸಾಧ್ಯವಾದರೆ ನನ್ನ ಕ್ಷೇತ್ರದಲ್ಲಿನ ಸರ್ಕಾರಿ ಆಸ್ಪತ್ರೆಯ ವೈದ್ಯರು ಹಾಗೂ ಆರೋಗ್ಯ ಇಲಾಖೆಯಲ್ಲಿನ ಅಧಿಕಾರಿಗಳನ್ನು ಇಲ್ಲಿಗೆ ಕರೆತರಲು ಯೋಜಿಸಲಾಗುವುದು. ಗಂಗಾವತಿ ಉಪ ವಿಭಾಗ ಆಸ್ಪತ್ರೆ ಮಾದರಿ ಸರ್ಕಾರಿ ಆಸ್ಪತ್ರೆಯಾಗಿದೆ ಎಂದು ಶಾಸಕ ಶ್ಲಾಘಿಸಿದರು.

ಇದನ್ನೂ ಓದಿ: ಇಂದು ಬೆಳಗ್ಗೆ 10 ಗಂಟೆಗೆ SSLC ಫಲಿತಾಂಶ ಪ್ರಕಟ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.